ಆಪರೇಷನ್ ಸಿಂದೂರದಲ್ಲಿ ಬ್ರಹ್ಮೋಸ್ ಬಳಕೆಯಾಯಿತಾ? ಬ್ರಹ್ಮೋಸ್ ಕ್ಷಿಪಣಿ ಕುರಿತ 10 ಆಸಕ್ತಿದಾಯಕ ಅಂಶಗಳಿವು; ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಪರೇಷನ್ ಸಿಂದೂರದಲ್ಲಿ ಬ್ರಹ್ಮೋಸ್ ಬಳಕೆಯಾಯಿತಾ? ಬ್ರಹ್ಮೋಸ್ ಕ್ಷಿಪಣಿ ಕುರಿತ 10 ಆಸಕ್ತಿದಾಯಕ ಅಂಶಗಳಿವು; ಚಿತ್ರನೋಟ

ಆಪರೇಷನ್ ಸಿಂದೂರದಲ್ಲಿ ಬ್ರಹ್ಮೋಸ್ ಬಳಕೆಯಾಯಿತಾ? ಬ್ರಹ್ಮೋಸ್ ಕ್ಷಿಪಣಿ ಕುರಿತ 10 ಆಸಕ್ತಿದಾಯಕ ಅಂಶಗಳಿವು; ಚಿತ್ರನೋಟ

ಫೈರ್ ಆಂಡ್ ಫಾರ್ಗೆಟ್ ಕ್ಷಿಪಣಿ ಬ್ರಹ್ಮೋಸ್: ಉತ್ತರ ಪ್ರದೇಶದ ಲಕ್ನೋ (ಲಖನೌ)ನಲ್ಲಿ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ (ಬ್ರಹ್ಮೋಸ್ ಏರೋಸ್ಪೇಸ್ ಇಂಟೆಗ್ರೇಷನ್ ಆಂಡ್ ಟೆಸ್ಟಿಂಗ್ ಫೆಸಿಲಿಟಿ ) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೇ 11ರಂದು ಉದ್ಘಾಟಿಸಿದರು. ಬ್ರಹ್ಮೋಸ್ ಕ್ಷಿಪಣಿ ವಿಚಾರ ಇದರೊಂದಿಗೆ ಮುನ್ನೆಲೆಗೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿಯ 10 ವಿಶೇಷ ಅಂಶಗಳು

ಬ್ರಹ್ಮೋಸ್ ಕ್ಷಿಪಣಿ: ಉತ್ತರ ಪ್ರದೇಶದ ಲಕ್ನೋ (ಲಖನೌ)ನಲ್ಲಿ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡುತ್ತ, ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಏನು ಎಂಬುದು ತಿಳಿಯಬೇಕಾದರೆ ಪಾಕಿಸ್ತಾನದ ಬಳಿ ಕೇಳಬೇಕು ಎಂದು ಹೇಳಿದ್ದರು. ಬ್ರಹ್ಮೋಸ್ ಕ್ಷಿಪಣಿಯ 10 ಆಸಕ್ತಿದಾಯಕ ಅಂಶಗಳ ವಿವರ ಇಲ್ಲಿದೆ.
icon

(1 / 11)

1) ಬ್ರಹ್ಮೋಸ್ ಕ್ಷಿಪಣಿಯ ವೇಗವು ಶಬ್ದಕ್ಕಿಂತ ಮೂರು ಪಟ್ಟು ವೇಗವಾಗಿದೆ. ಸಾಂಪ್ರದಾಯಿಕ ಸಬ್‌ಸೋನಿಕ್ ಕ್ರೂಸ್ ಮಿಸೈಲ್‌ಗಳಿಗಿಂತ ಮೂರು ಪಟ್ಟು ವೇಗದಲ್ಲಿ ಇದು ಸಂಚರಿಸಿ ನಿರ್ದಿಷ್ಟ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ. ಲಕ್ನೋದಲ್ಲಿ ಸ್ಥಾಪಿತವಾಗಿರುವ ಬ್ರಹ್ಮೋಸ್ ಕ್ಷಿಪಣಿ ಹಬ್‌ನಲ್ಲಿ ವರ್ಷಕ್ಕೆ 80 ರಿಂದ 100 ಕ್ಷಿಪಣಿ ಉತ್ಪಾದನೆ ಸಾಮರ್ಥ್ಯವಿದೆ. (ಸಾಂಕೇತಿಕ ಚಿತ್ರ)
icon

(2 / 11)

(PTI)

2) ಲಕ್ನೋದ ಬ್ರಹ್ಮೋಸ್ ಕ್ಷಿಪಣಿ ಹಬ್ ಅನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಉದ್ಘಾಟಿಸಿದರು. ಭಾರತ- ರಷ್ಯಾ ಜಂಟಿ ಉದ್ಯಮ ಬ್ರಹ್ಮೋಸ್ ಏರೋಸ್ಪೇಸ್ ಈ ಕ್ಷಿಪಣಿಯನ್ನು ಉತ್ಪಾದಿಸುತ್ತಿದೆ. ಬಾರತದ ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒ ಮಷಿನೋಸ್ಟ್ರೋಯೆನಿಯಾ ಜತೆಗೆ ಈ ಉದ್ಯಮ ನಡೆಸುತ್ತಿವೆ. ಬ್ರಹ್ಮೋಸ್‌ನಲ್ಲಿ ರಷ್ಯಾದ ಪ್ರೊಪಲ್ಶನ್‌ ಮತ್ತು ಭಾರತದ ಗೈಡನ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ ಇದೆ.
icon

(3 / 11)

3) ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಸಮುದ್ರ, ಆಕಾಶದಿಂದ ಮತ್ತು ನೀರಿನೊಳಗಿನಿಂದ ಉಡಾಯಿಸಬಹುದಾಗಿದೆ. ಭೂಮಿ ಮೇಲಿಂದ, ಯುದ್ಧ ನೌಕೆ, ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿಯಲ್ಲಿ ಅಳವಡಿಸಿ ಉಡಾಯಿಸಬಹುದು. (ಸಾಂಕೇತಿಕ ಚಿತ್ರ)
icon

(4 / 11)

4) ಸ್ಟೆಲ್ತ್ ಫೀಚರ್‌ಗಳು: ರಾಡಾರ್ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಮಾಡುವ ರೀತಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಘಿದೆ. ಇದು ಶತ್ರು ರಾಡಾರ್‌ನ ಅಡಿಯಲ್ಲೇ ಸಾಗಿ ನಿಶ್ಚಿತ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. (ಸಾಂಕೇತಿಕ ಚಿತ್ರ)
icon

(5 / 11)

5) ಫೈರ್ ಆಂಡ್ ಫಾರ್ಗೆಟ್ ಕ್ಷಿಪಣಿ: ಬ್ರಹ್ಮೋಸ್ ಕ್ಷಿಪಣಿ ದಾಳಿ ಎಷ್ಟು ನಿಖರ ಎಂದರೆ ಅದನ್ನು ಉಡಾವಣೆ ಮಾಡಿ ನಿಶ್ಚಿಂತೆಯಿಂದ ಇರಬಹುದು. ಅದು ಉಡಾವಣೆ ಆಯಿತೆಂದರೆ ನಿಶ್ಚಿತ ಗುರಿಗೆ ದಾಳಿ ನಡೆಸಿ ನಾಶ ಉಂಟುಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಅಷ್ಟರ ಮಟ್ಟಿಗೆ ನಿಖರತೆಯನ್ನು ದಾಳಿಯನ್ನು ನಡೆಸಬಲ್ಲದು. (ಸಾಂಕೇತಿಕ ಚಿತ್ರ)
icon

(6 / 11)

6) ಹೆಚ್ಚಿನ-ಪರಿಣಾಮ ಬೀರಬಲ್ಲ ಸಿಡಿತಲೆ: ಇದು 300 ಕೆಜಿ, ತೂಕದ ಸಿಡಿತಲೆ ಹೊಂದಿರುವ ಕ್ಷಿಪಣಿ ಬ್ರಹ್ಮೋಸ್‌. ಇದು ಸಾಂಪ್ರದಾಯಿಕ ಅಥವಾ ಪರಮಾಣು ತನಕದ ಸಿಡಿತಲೆಯನ್ನು ಒಯ್ಯಬಲ್ಲದು, ಶತ್ರುಗಳ ಮೂಲಸೌಕರ್ಯಕ್ಕೆ ಭಾರಿ ಹಾನಿಯನ್ನುಂಟುಮಾಡುತ್ತದೆ.
icon

(7 / 11)

7) ಕಾರ್ಯತಂತ್ರದ ಗುರಿಗಳ ಮೇಲೆ ನಿಖರ ದಾಳಿ: ಶತ್ರು ಆಜ್ಞಾ ಕೇಂದ್ರಗಳು, ರಾಡಾರ್ ಸ್ಥಾಪನೆಗಳು ಮತ್ತು ಏರ್‌ಬೇಸ್‌ಗಳನ್ನು ಗುರಿಯಾಗಿ ದಾಳಿ ನಡೆಸುವುದಕ್ಕೆ ಬ್ರಹ್ಮೋಸ್ ಸೂಕ್ತ ಅಸ್ತ್ರವಾಗಿ ಗೋಚರಿಸಿದೆ.-ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಬಳಕೆಯಾಗಿರುವ ಸಾಧ್ಯತೆಗಳ ಬಗ್ಗೆ ವರದಿಗಳು ಉಲ್ಲೇಖಿಸಿವೆ. (ಸಾಂಕೇತಿಕ ಚಿತ್ರ)
icon

(8 / 11)

8) ವಿಸ್ತೃತ ರೇಂಜ್‌: ಬ್ರಹ್ಮೋಸ್ ಕ್ಷಿಪಣಿಯ ಹೊಸ ಮಾದರಿಯು 500 ಕಿಮೀ ದೂರದ ಗುರಿ ತಲುಪಬಲ್ಲದು. ಪ್ರಸ್ತುತ ವಿದ್ಯಮಾನಗಳ ಪ್ರಕಾರ, ಬ್ರಹ್ಮೋಸ್ ಕ್ಷಿಪಣಿಯ ರೇಂಜ್ 800 ಕಿಮೀಯಿಂದ 1000 ಕಿಮೀ ದೂರ ಕ್ರಮಿಸಬಲ್ಲದು.
icon

(9 / 11)

9) ಬ್ರಹ್ಮೋಸ್ ಕ್ಷಿಪಣಿಯ ಯುದ್ಧ ಸಾಮರ್ಥ್ಯ: ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯುದ್ಧ ಸಾಮರ್ಥ್ಯದ ಪರೀಕ್ಷೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನು ಸೇನೆ ಖಚಿತಪಡಿಸಿಲ್ಲ.
icon

(10 / 11)

10) ರಕ್ಷಣಾ ಕ್ಷೇತ್ರದಲ್ಲಿ ಅತ್ಮನಿರ್ಭರ ಭಾರತದ ಕನಸು ನನಸು ಮಾಡುವಲ್ಲಿ ಬ್ರಹ್ಮೋಸ್ ಕ್ಷಿಪಣಿ ಮುಖ್ಯವೆನಿಸುತ್ತದೆ. ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ಗೆ ಪ್ರಮುಖ ಬಿಡಿಭಾಗಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗಿದೆ.
icon

(11 / 11)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು