ಕರ್ನಲ್ ಸೋಫಿಯಾ ಖುರೇಷಿ ಕುಟುಂಬಕ್ಕಿದೆ ಹೋರಾಟದ ಇತಿಹಾಸ; ರಾಣಿ ಲಕ್ಷ್ಮೀ ಬಾಯಿ ಜೊತೆಗಿದ್ರು ಸೋಫಿಯಾ ಮುತ್ತಜ್ಜಿ
ಆಪರೇಷನ್ ಸಿಂದೂರದ ವಿವರಣೆ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬಕ್ಕೆ ಹೋರಾಟದ ಇತಿಹಾಸವಿದೆ. ಅವರ ಮುತ್ತಜ್ಜಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಿ ಲಕ್ಷ್ಮೀ ಬಾಯಿ ಅವರ ಜೊತೆಗಿದ್ದರು. ಮುತ್ತಜ್ಜಿ ಬಗ್ಗೆ ಸೋಫಿಯಾ ಮಾತನಾಡಿದ್ದ ಹಳೇ ವಿಡಿಯೊ ಈಗ ವೈರಲ್ ಆಗಿದೆ.
(1 / 9)
ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಹಳೆ ವಿಡಿಯೊವೊಂದು ಈಗ ವೈರಲ್ ಆಗಿದೆ. ಅದರಲ್ಲಿ ಸೋಫಿಯಾ ತಮ್ಮ ಮುತ್ತಜ್ಜಿ ರಾಣಿ ಲಕ್ಷ್ಮೀ ಬಾಯಿ ಜೊತೆ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
(2 / 9)
ಹೋರಾಟಗಾರರ ಕೌಟುಂಬಿಕ ಇತಿಹಾಸ ಹೊಂದಿರುವ ಸೋಫಿಯಾ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡುವ ಮೂಲಕ ಪ್ರಪಂಚದ ಗಮನ ಸೆಳೆದವರು.
(3 / 9)
ಆಪರೇಷನ್ ಸಿಂದೂರದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಜೊತೆ ಭಾಗವಹಿಸಿದ್ದರು.
(4 / 9)
ಕರ್ನಲ್ ಖುರೇಷಿ ಆಪರೇಷನ್ ಸಿಂದೂರದ ಕಾರ್ಯತಂತ್ರದ ವಿವರಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದು ಮಾತ್ರ ಶಕ್ತಿ, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸಂಕೇತಿಸಿದರು.
(PC: AFP)(5 / 9)
ಆಪರೇಷನ್ ಸಿಂದೂರ ಕಾರ್ಯಚರಣೆಯ ಬಗ್ಗೆ ವಿವರಣೆ ನೀಡಿದ ನಂತರದ ದಿನಗಳಿಂದ ಸೋಫಿಯಾ ಖುರೇಷಿ ಬಗ್ಗೆ ತಿಳಿದುಕೊಳ್ಳಲು ಜನ ಉತ್ಸುಕರಾಗಿದ್ದಾರೆ. ಸೋಫಿಯಾ ಪತಿ ಕರ್ನಲ್ ತಾಜುದ್ದಿನ್ ಕರ್ನಾಟಕದ ಬೆಳಗಾವಿ ಮೂಲದವರು. ಪತಿ-ಪತ್ನಿ ಇಬ್ಬರೂ ಸೇನೆಯಲ್ಲಿದ್ದುಕೊಂಡು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ.
(6 / 9)
ಇದೀಗ ವೈರಲ್ ಆಗಿರುವ ಹಳೇ ವಿಡಿಯೊ ಸೋಫಿಯಾ ಅವರ ಕುಟುಂಬಕ್ಕಿರುವ ಹೋರಾಟದ ಹಿನ್ನೆಲೆಯನ್ನು ಬಿಚ್ಚಿಟ್ಟಿದೆ. ಇವರ ಮುತ್ತಜ್ಜಿ ಲಕ್ಷ್ಮೀ ಬಾಯಿ ಜೊತೆ ಹೋರಾಟಗಳಲ್ಲಿ ತೊಡಗಿದ್ದರು ಎಂದು ಸ್ವತಃ ಸೋಫಿಯಾ ಹೇಳಿಕೊಂಡಿದ್ದಾರೆ.
(7 / 9)
2017ರಲ್ಲಿ ಮುತ್ತಜ್ಜಿಯ ಬಗ್ಗೆ ಮಾತನಾಡಿದ್ದ ಸೋಫಿಯಾ ಮಾತನಾಡಿದ್ದ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಅಲ್ಲದೇ ಹೋರಾಟಗಾರರ ಕುಟುಂಬದಿಂದ ಗಿಟ್ಟಿಗಿತ್ತಿ ಸೋಫಿಯಾ ಎಂದು ಜನರು ಅವರನ್ನು ಹೊಗಳುತ್ತಿದ್ದಾರೆ
(8 / 9)
ರಾಣಿ ಲಕ್ಷ್ಮೀಬಾಯಿ ಕಾಲದಲ್ಲಿ ಸೇನೆಯಲ್ಲಿದ್ದುಕೊಂಡು ಹೋರಾಟಗಳಲ್ಲಿ ಭಾಗವಹಿಸಿದ್ದರು ಸೋಫಿಯಾ ಅವರ ಮುತ್ತಜ್ಜಿ. ಹಾಗಾಗಿ ಸೋಫಿಯಾ ಅವರ ಕುಟುಂಬ ಇತಿಹಾಸದಲ್ಲೇ ಹೋರಾಟದ ಮನೋಭಾವವಿದೆ ಎಂಬುದನ್ನು ನಾವು ಅರಿತುಕೊಳ್ಳಬಹುದು.
ಇತರ ಗ್ಯಾಲರಿಗಳು