ಕ್ಷಿಪಣಿಗಳನ್ನು ಆಗಸದಲ್ಲಿಯೇ ತುಂಡರಿಸಿ ದೇಶ ರಕ್ಷಿಸುವ ಆಕಾಶ್ ಮಿಸೈಲ್ ಸಿಸ್ಟಂ ರೂವಾರಿ ಕರ್ನಾಟಕದ ವಿಜ್ಞಾನಿ ಡಾ ರಾಮರಾವ್
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಪಾಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು ಭಾರತದ ಆಕಾಶ್ ಮಿಸೈಲ್ ಸಿಸ್ಟಂ. ಈ ಮಿಸೈಲ್ ಸಿಸ್ಟಂ ರೂವಾರಿ ಕನ್ನಡಿಗ ವಿಜ್ಞಾನಿ ಡಾ ರಾಮ್‌ರಾವ್.
(1 / 10)
ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿದಾಳಿಗೆ ಮುಂದಾಗಿತ್ತು, ಈ ಸಂದರ್ಭ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿ, ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಭಾರತದ ನಿರ್ಮಾಣದ ಆಕಾಶ್ ಮಿಸೈಲ್ ಸಿಸ್ಟಂ. ಈ ಆಕಾಶ್ ವ್ಯವಸ್ಥೆಯ ಹಿಂದಿನ ರೂವಾರಿ ಕರ್ನಾಟಕದ ಮೂಲದ ವಿಜ್ಞಾನಿ ಡಾ. ರಾಮ್‌ರಾವ್. ಭಾರತದ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಡಾ ರಾಮರಾವ್ ಯಾರು, ಅವರ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.
(2 / 10)
ಡಿಆರ್‌ಡಿಓದಲ್ಲಿ ವಿಜ್ಞಾನಿಯಾಗಿರುವ ರಾಮರಾವ್ ಆಕಾಶ್ ಮಿಸೈಲ್ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಆಕಾಶ್ ಕ್ಷಿಪಣಿ ವ್ಯವಸ್ಥೆಯು ವೈಮಾನಿಕ ದಾಳಿಯನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿಗೆ ನಡೆದ ಭಾರತ-ಪಾಕ್ ದಾಳಿಯ ಆಕಾಶ ಮಿಸೈಲ್ ಸಿಸ್ಟಂ ಎಲ್ಲಾ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಲು ನೆರವಾಯಿತು. ಅಲ್ಲದೇ ಇದರ ಕಾರ್ಯಕ್ಷಮತೆ ಮೆಚ್ಚುಗೆಗೂ ಪಾತ್ರವಾಯಿತು.
(3 / 10)
ಭಾರತದಲ್ಲಿಯೇ ತಯಾರಾದ ಈ ಕ್ಷಿಪಣಿ ವ್ಯವಸ್ಥೆಯ ರಚನೆಯ ಹಿಂದಿರುವುದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ವಿಜ್ಞಾನಿಯಾಗಿರುವ ಕನ್ನಡಿಗ ಡಾ. ಪ್ರಹ್ಲಾದ ರಾಮರಾವ್ ಎನ್ನುವುದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಚಾರವಾಗಿದೆ.
(4 / 10)
ಆಕಾಶ್ ಮಿಸೈಲ್ ಪಾಕಿಸ್ತಾನದ ವಾಯುದಾಳಿಯನ್ನು ಸಮರ್ಥವಾಗಿ ಎದುರಿಸಿದ ಬಳಿಕ ಮಾತನಾಡಿದ್ದ ಡಾ ರಾಮರಾವ್ ಆ ದಿನವನ್ನು ತಮ್ಮ ಬದುಕಿನ ಅತ್ಯಂತ ತೃಪ್ತಿಕರ ದಿನ ಎಂದು ಹೇಳಿದ್ದರು.
(5 / 10)
ನಾನು ಅಭಿವೃದ್ಧಿ ಪಡಿಸಿದ ಕ್ಷಿಪಣಿಯು ಶತ್ರು ದೇಶದ ದಾಳಿಯನ್ನು ಸಮರ್ಥವಾಗಿ ಎದುರಿಸಿದೆ, ಆ ಮೂಲಕ ನಾನು ಮಾಡಿದ ಕೆಲಸ ನಮಗೆ ಹೆಮ್ಮೆ ತರುವಂತೆ ಮಾಡಿದೆ ಎಂದು ಡಾ ರಾಮರಾವ್ ಹೇಳಿಕೊಂಡಿದ್ದಾರೆ.
(6 / 10)
ಭಾರತವು ಆಕಾಶ್ ಕ್ಷಿಪಣಿ ಅಭಿವೃದ್ಧಿ ಪಡಿಸಲು ಆರಂಭಿಸಿದ ದಿನಗಳಿಂದಲೂ ರಾಮ್‌ರಾವ್ ಅದರ ಬೆನ್ನೆಲುಬಾಗಿ ನಿಂತಿದ್ದರು.
(7 / 10)
ರಾಮ್‌ರಾವ್ ಅವರನ್ನು ಭಾರತದ ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದ ದಿವಂಗತ ಡಾ. ಅಬ್ದುಲ್ ಕಲಾಂ ಈ ಹುದ್ದೆಗೆ ಆಯ್ಕೆ ಮಾಡಿದ್ದರು. ಯೋಜನಾ ನಿರ್ದೇಶಕನ ಹುದ್ದೆಗೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಮರಾವ್ ಅವರನ್ನು ನೇಮಕ ಮಾಡಲಾಗಿತ್ತು, ಆ ಸಮಯದಲ್ಲಿ ಭಾರತೀಯ ಸೇನೆಯು ವ್ಯವಸ್ಥೆಯ ಆಕಾಶ್ ಮಿಸೈಲ್ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೊಂದಿತ್ತು.
(8 / 10)
ಆಕಾಶ್ ಕ್ಷಿಪಣಿ ಈಗ ಭಾರತದ ವಾಯು ರಕ್ಷಣಾ ಜಾಲದ ಪ್ರಮುಖ ಆಧಾರಸ್ತಂಭವಾಗಿದೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನಿರ್ಮಿಸಿದ ಮತ್ತು DRDO ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು ಕಾಲಾನುಕ್ರಮದಲ್ಲಿ ಆಕಾಶ್-NG ರೂಪಾಂತರವಾಗಿ ವಿಕಸನಗೊಂಡಿತು.
(9 / 10)
ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯು 80 ಕಿ.ಮೀ ದೂರದ ಗುರಿಯನ್ನು ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 2,500 ಕಿ.ಮೀ ವೇಗದಲ್ಲಿ ತಲುಪಲಿದೆ. ಇದು ಏಕಕಾಲದಲ್ಲಿ 64 ಗುರಿಗಳನ್ನು ಇರಿಸಿಕೊಳ್ಳಬಲ್ಲುದು ಮತ್ತು ಏಕಕಾಲದಲ್ಲಿ 12 ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ರಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕ್ಷಿಪಣಿಗಳ ಅಭಿವೃದ್ಧಿಯಲ್ಲೂ ಡಾ ರಾಮರಾವ್ ಅವರದ್ದು ಮಹತ್ವದ ಹೆಜ್ಜೆ. ಆಕಾಶ್ ಮಾತ್ರವಲ್ಲದೇ ಸುಮಾರು 10 ವಿವಿಧ ಕ್ಷಿಪಣಿ ಯೋಜನಗಳಲ್ಲಿ ಇವರು ಕೆಲಸ ಮಾಡಿದ್ದಾರೆ.
ಇತರ ಗ್ಯಾಲರಿಗಳು