ಆಸ್ಕರ್ ಪ್ರಶಸ್ತಿ ತಂದ ತೆಪ್ಪಕಾಡು ಆನೆ ಸೇವಕರಿಗೆ ಹೈಟೆಕ್ ಮಾವುತ್ ವಿಲೇಜ್: ತಮಿಳುನಾಡು ಸರ್ಕಾರದ ಕೊಡುಗೆ
ತಮಿಳುನಾಡಿನ ಮದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಶಿಬಿರದಲ್ಲಿನ ನಿವಾಸಿಗಳಿಗೆ ಈಗ ಹೈಟೆಕ್ ಸೇವೆ. ಮನೆ, ಮಕ್ಕಳಿಗೆ ಆಟದ ಮೈದಾನ ಸಹಿತ ತಮಿಳುನಾಡು ಸರ್ಕಾರ ಅತ್ಯುತ್ತಮ ಸೇವೆಯನ್ನು ಒದಗಿಸಿಕೊಟ್ಟಿದೆ. ಅದರ ನೋಟ ಇಲ್ಲಿದೆ.
(1 / 9)
ಮೈಸೂರಿನಿಂದ ಬಂಡೀಪುರ ದಾಟಿಕೊಂಡು ಊಟಿ ಕಡೆಗೆ ಹೊರಟರೆ ಸಿಗುವುದೇ ಮದುಮಲೈ ಅರಣ್ಯ ಪ್ರದೇಶ. ಅದೂ ಕೂಡ ಹುಲಿ ರಾಷ್ಟ್ರೀಯ ಉದ್ಯಾನವೇ. ಶತಮಾನದಷ್ಟು ಹಳೆಯದಾದ ಅಲ್ಲಿನ ತೆಪ್ಪಕಾಡು ಆನೆ ಶಿಬಿರ ಗಮನ ಸೆಳೆಯುತ್ತದೆ.
(2 / 9)
ಎರಡು ವರ್ಷದ ಹಿಂದೆ ಆಸ್ಕರ್ ಪ್ರಶಸ್ತಿ ಮೂಲಕ ಗಮನ ಸೆಳೆದದ್ದು ಇದೇ ತೆಪ್ಪಕಾಡು ಅರಣ್ಯಪ್ರದೇಶವೇ. ಇಲ್ಲಿನ ಬೊಮ್ಮನ್ ಹಾಗೂ ಬೆಳ್ಳಿ ಎಂಬ ಜೋಡಿ ಆನೆ ಸಲಹುವ ಹಿನ್ನೆಲೆಯೊಂದಿಗೆ ರೂಪುಗೊಂಡ ಎಲೆಫೆಂಟ್ ವಿಸ್ಪರರ್ಸ್ ಎನ್ನುವ ಚಿತ್ರಕ್ಕೆ ಆಸ್ಕರ್ ಚಿತ್ರ ಬಂದಿತು.
(The week)(3 / 9)
ಯಾವಾಗ ತೆಪ್ಪಕಾಡು ಹಿನ್ನೆಲೆಯನ್ನು ಒಳಗೊಂಡ ಆನೆಗಳು ಹಾಗೂ ಅಲ್ಲಿನ ಗಜ ಸೇವಕರ ಕಥಾನಕ ಒಳಗೊಂಡ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂತೋ ತಮಿಳುನಾಡು ಸರ್ಕಾರ ಸೌಲಭ್ಯ ನೀಡಲು ಮುಂದಾಯಿತು,
(4 / 9)
ಶತಮಾನದ ಹಿನ್ನೆಲೆಯ ತೆಪ್ಪಕಾಡು ಆನೆ ಶಿಬಿರದಲ್ಲಿ 27 ಆನೆಗಳಿದ್ದು, ನಿತ್ಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಗಳಿದ್ದಾರೆ. ಮಾವುತರು, ಕವಾಡಿಗರಿಗೆ ಆನೆ ಸೇವೆಯೇ ವೃತ್ತಿಯಾಗಿದೆ.
(Satyamoorti)(5 / 9)
ಅತ್ಯುತ್ತಮ ರಸ್ತೆ, ಸುಂದರ ಆಟದ ಮೈದಾನ, ಉದ್ಯಾನಗಳು, ಅಲ್ಲಲ್ಲೆ ಕುಳಿತು ವಿಶ್ರಾಂತಿ ಪಡೆಯಲು ಮರಗಳ ಸುತ್ತ ನಿರ್ಮಿಸಿರುವ ಆಕರ್ಷಕ ಕಟ್ಟೆಗಳು, ಸುಂದರ ಮನೆಗಳು ... ಇದು ಯಾವುದೊ ನಗರದ ಆಧುನಿಕ ಬಡಾವಣೆಯಲ್ಲ, ಇದು ತೆಪ್ಪಕಾಡು ಮಾವುತ್ ವಿಲೇಜ್‌ನ ನೋಟ.
(6 / 9)
ನಮ್ಮ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ, ತಮಿಳುನಾಡಿನ ಮದುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ತೆಪ್ಪಕಾಡು ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳಿಗೆ ಅಲ್ಲಿನ ಅರಣ್ಯ ಇಲಾಖೆ ನಿರ್ಮಿಸಿರುವ ಸುಂದರ, ಸುಸಜ್ಜಿತ ಬಡಾವಣೆ. ಇದರ ಹೆಸರು ಕೂಡ ಅರ್ಥಪೂರ್ಣ "ಮಾವುತ್ ವಿಲೇಜ್"
(7 / 9)
ಈ ರೀತಿ ಮಾವುತರಿಗೆ ಎಂದೇ ನಿರ್ಮಿಸಲಾದ ಭಾರತದ ಮೊದಲ ಬಡಾವಣೆ ಇದಾಗಿದೆ. ಇಲ್ಲಿ ಒಟ್ಟು 44 ಮನೆಗಳನ್ನು ಒಟ್ಟು 5.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬೀದಿಗಳಿಗೆ ಸಾಕಾನೆ ಶಿಬಿರದ ಪ್ರಸಿದ್ದ ಆನೆಗಳ ಹೆಸರನ್ನೆ ಇಡಲಾಗಿದೆ.
(8 / 9)
ಮನೆಯ ವಿನ್ಯಾಸದಿಂದ ಹಿಡಿದು, ಬ್ಯಾಸ್ಕೆಟ್‌ಬಾಲ್ ಅಂಗಳ, ಮಕ್ಕಳ ಆಟದ ಮೈದಾನದವರೆಗೆ ಈ ಗ್ರಾಮವನ್ನು ಮಾವುತರೊಂದಿಗೆ ಸಮಾಲೋಚಿಸಿ ಅವರ ಅಗತ್ಯಗಳಿಗೆ ಅನುಗುಣವಾಗಿ ಈ ಸಮುಚ್ಚಯ ನಿರ್ಮಿಸಲಾಗಿದೆ. ಸೌರ ವಿದ್ಯುತ್ ದೀಪಗಳಿಂದ ಬೆಳಗುವ ಗ್ರಾಮಕ್ಕೆ ಸೌರ ಬೇಲಿ ಕಾಡುಪ್ರಾಣಿಗಳಿಂದ ರಕ್ಷಣೆ ಒದಗಿಸುತ್ತದೆ.
ಇತರ ಗ್ಯಾಲರಿಗಳು