ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 180 ದಿನಗಳ ಬಳಿಕ ಒಟಿಟಿಗೆ ಬರುತ್ತಿದೆ ಕನ್ನಡದ ಸಿನಿಮಾ
ʻಕೆಂಡ ಸಂಪಿಗೆʼ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ನಟ ವಿಕ್ಕಿ ವರುಣ್, 2017ರಲ್ಲಿ ʻಕಾಲೇಜ್ ಕುಮಾರʼ ಸಿನಿಮಾದಲ್ಲಿಯೂ ನಟಿಸಿದ್ದರು. ಅಲ್ಲಿಂದ ಬೇರಾವ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಟ ವಿಕ್ಕಿ, ʻಕಾಲಾಪತ್ಥರ್ʼ ಮೂಲಕ ಕಂಬ್ಯಾಕ್ ಮಾಡಿದ್ದರು. ಕಳೆದ ವರ್ಷದ ಸೆಪ್ಟಂಬರ್ 12ರಂದು ತೆರೆಗೆ ಬಂದಿತ್ತು. ಇದೀಗ ಆರು ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ.
(1 / 8)
ಒಟಿಟಿಯಲ್ಲಿ ಉಳಿದ ಭಾಷೆಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಕಂಟೆಂಟ್‌ಗಳು ತೀರಾ ಕಡಿಮೆ. ಅಲ್ಲೊಂದು ಇಲ್ಲೊಂದು ಚಿತ್ರಗಳಷ್ಟೇ ಒಟಿಟಿ ಕದ ತಟ್ಟುತ್ತಿವೆ.
(2 / 8)
ಸ್ಟಾರ್ ನಟರ ಸಿನಿಮಾಗಳನ್ನು ಹೊರತುಪಡಿಸಿದರೆ, ಹೊಸಬರ, ಹೊಸ ಪ್ರಯತ್ನದ ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸುವುದು ತುಸು ತಡ. ಕೆಲವು ಮರೆಯಾಗಿ ಹೋಗುವುದುಂಟು.
(3 / 8)
ಇದೀಗ ಕಳೆದ ವರ್ಷದ ಸೆಪ್ಟೆಂಬರ್ 12ರಂದು ತೆರೆಗೆ ಬಂದಿದ್ದ ಕಾಲಾಪತ್ಥರ್ ಸಿನಿಮಾ, ಸುದೀರ್ಘ 180 ದಿನಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ.
(4 / 8)
ಕೆಂಡಸಂಪಿಗೆ, ಕಾಲೇಜ್ ಕುಮಾರ್ ಸಿನಿಮಾಗಳಲ್ಲಿ ನಟಿಸಿದ ವಿಕ್ಕಿ ಕಾಲಾಪತ್ಥರ್ ಸಿನಿಮಾದಲ್ಲಿಯೂ ನಾಯಕನಾಗಿ ನಟಿಸುವುದಷ್ಟೇ ಅಲ್ಲದೆ, ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
(5 / 8)
ಇದೇ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮಕುಮಾರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನುಳಿದಂತೆ ಟಿ ಎಸ್ ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯ, ರಾಜೇಶ್ ನಟರಂಗ ಸೇರಿ ಹಲವರು ಪಾತ್ರವರ್ಗದಲ್ಲಿದ್ದರು.
(6 / 8)
ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನಿಮಾಕ್ಕೆ ಸಂದೀಪ್ ಕುಮಾರ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನವಿದೆ.
(7 / 8)
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಮಿಶ್ರ ವಿಮರ್ಶೆ ಪಡೆದ ಕಾಲಾಪತ್ಥರ್ ಸಿನಿಮಾ ಇದೀಗ ಏ. 2ರಿಂದ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಇತರ ಗ್ಯಾಲರಿಗಳು