ಹೆಣ್ಣುಬಾಕ ಮುದುಕ, ಬಾಳೆಹಣ್ಣು ಕ್ರೌರ್ಯದ ಸೀರಿಯಲ್ ಹಂತಕ- ಮಲಯಾಳಂ ಕಾಮಿಡಿ ಥ್ರಿಲ್ಲರ್ ಮರಣಮಾಸ್ ವಿಮರ್ಶೆ
ಮರಣಮಾಸ್ ಎಂಬ ಮಲಯಾಳಂ ಕಾಮಿಡಿ ಥ್ರಿಲ್ಲರ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಬಾಸಿಲ್ ಜೋಸೆಫ್ ನಟನೆಯ ಸಿನಿಮಾಗಳಿಗೆ ಈಗ ಒಟಿಟಿಯಲ್ಲಿ ಬೇಡಿಕೆ ಹೆಚ್ಚಿದೆ. ಈ ನಟ ನಟಿಸಿದ ಮರಣಮಾಸ್ ಸಿನಿಮಾ ಚೆನ್ನಾಗಿದೆಯೇ ಎಂದು ತಿಳಿದುಕೊಳ್ಳೋಣ.
(1 / 10)
ಮಲಯಾಳಂ ಸಿನಿಮಾಗಳು ಚೆನ್ನಾಗಿರುತ್ತವೆ ಎನ್ನುವುದು ನಿಜ. ಆದರೆ, ಬಿಡುಗಡೆಯಾದ ಎಲ್ಲಾ ಮಲಯಾಳಂ ಸಿನಿಮಾಗಳು ಚೆನ್ನಾಗಿರುತ್ತವೆ ಎನ್ನುವುದು ತಪ್ಪು. ಕೆಲವೊಂದು ಸಿನಿಮಾಗಳು ಓವರ್‌ಹೈಪ್ ಸೃಷ್ಟಿಸಿಬಿಡುತ್ತವೆ. ಕೆಲವೊಮ್ಮೆ ಹಿಟ್ ಸಿನಿಮಾದ ನಟ ನಟಿಸಿದ ಸಿನಿಮಾ ಹೆಚ್ಚು ನಿರೀಕ್ಷೆ ಹುಟ್ಟಿಸುತ್ತದೆ. ಸಿನಿಮಾ ನೋಡಿದಾಗ ಇದು ಸಾಮಾನ್ಯ ಸಿನಿಮಾ ಎಂದು ತಿಳಿಯುತ್ತದೆ. ಇಂತಹ ಸಿನಿಮಾಗಳ ಸಾಲಿಗೆ ಮರಣಮಾಸ್ ಸೇರುತ್ತದೆ.
(2 / 10)
ಸಿನಿಮಾದ ಆರಂಭದಲ್ಲಿ ಸೀರಿಯಲ್ ಕಿಲ್ಲರ್‌ನನ್ನು ತೋರಿಸಲಾಗುತ್ತದೆ. ಈ ಮೂಲಕ ಇದು ತನಿಖಾ ಥ್ರಿಲ್ಲರ್ ಅಲ್ಲವೆಂದು ಸಾಬೀತಾಗುತ್ತದೆ. ಕೊಲೆಗಾರನನ್ನು ತೋರಿಸಿದ ನಂತರ ಇಲ್ಲಿ "ಯಾರು ಸೀರಿಯಲ್ ಕಿಲ್ಲರ್?" ಎಂಬ ಪ್ರಶ್ನೆ ಉಳಿಯುವುದಿಲ್ಲ. ಚಿತ್ರವನ್ನು ಕಾಮಿಡಿ ಹಾದಿಯಲ್ಲಿ ತರುವ ಉದ್ದೇಶದಿಂದ ಹೀಗೆ ಮಾಡಿರಬಹುದು.
(3 / 10)
ಆದರೆ, ಆರಂಭದಲ್ಲಿ ಸೀರಿಯಲ್ ಕಿಲ್ಲರ್‌ನ ಕ್ರೌರ್ಯ ನೋಡುಗರ ಎದೆಯನ್ನು ನಡುಗಿಸಿಬಿಡುತ್ತದೆ. ಎಲ್ಲಾದರೂ ಅದೇ ಕ್ರೌರ್ಯದ ದೃಶ್ಯಗಳು ಮುಂದುವರೆದರೆ ನಾನಂತೂ ಒಟಿಟಿ ಆಫ್ ಮಾಡ್ತಾ ಇದ್ದೆ. ವ್ಯಕ್ತಿಯನ್ನು ಬರ್ಭರವಾಗಿ ಕೊಂದು ಬಾಯಿ ಸೀಳಿ ಬಾಯಿಯೊಳಗೆ ಬಾಳೆಹಣ್ಣು ತುರುಕುವ ಕಿರಾತಕ ಈತ.
(4 / 10)
ಕೆಲವು ನಿಮಿಷಗಳ ಕ್ರೌರ್ಯದ ದೃಶ್ಯದ ಬಳಿಕ ಸಿನಿಮಾ ಹಾಸ್ಯದ ಹಾದಿ ಹಿಡಿಯುತ್ತದೆ. ಬಾಸಿಲ್ ಜೋಸೆಫ್ ಚಿತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ಈತ ವೈರಲ್ ಆನ್‌ಲೈನ್ ಇನ್‌ಫ್ಲೂಯೆನ್ಸರ್. ಇದನ್ನು ಕಾಮಿಡಿಯಾಗಿ ಚಿತ್ರಿಸಲಾಗಿದೆ.
(5 / 10)
ಹಿರಿಯ ನಾಗರಿಕರ ಬೀಭತ್ಸ ಹತ್ಯೆ ಪೊಲೀಸರಿಗೆ ತಲೆನೋವಾಗುತ್ತದೆ. ಇಂತಹ ಸಮಯದಲ್ಲಿ ಸೀರಿಯಲ್ ಕಿಲ್ಲರ್‌ನೊಬ್ಬನ ಪುತ್ರ ಈ ನಾಯಕ ಲ್ಯೂಕ್ (ಬಾಸಿಲ್ ಜೋಸೆಫ್) ಮೇಲೆ ಪೊಲೀಸರಿಗೆ ಸಂದೇಹ. ಈತನೇ ಸೀರಿಯಲ್ ಕಿಲ್ಲರ್ ಆಗಿರಬಹುದು ಎಂಬ ಗುಮಾನಿ. ಇದೇ ಕಾರಣಕ್ಕೆ ಈತನಿಂದ ದೂರವಾಗುವ ಪ್ರೇಯಸಿ. ಈಕೆಗೆ ಅಜ್ಜಿ ಉಡುಗೊರ ನೀಡಿದ್ದು ಪೆಪ್ಪರ್ ಸ್ಪ್ರೇ. ಗಂಡಸರಿಂದ ತೊಂದರೆಯಾದರೆ ಬಳಸಲು ಸದಾ ತನ್ನ ಜತೆಯೇ ಇಟ್ಟುಕೊಂಡಿರುತ್ತಾಳೆ.
(6 / 10)
ಮದುವೆಯಾಗಲು ಹವಣಿಸುತ್ತಿರುವ ಬಸ್ ಚಾಲಕ (ಸುರೇಶ್ ಕೃಷ್ಣ), ದಶಕಗಳ ಹಿಂದೆ ಕಾಣೆಯಾದ ತನ್ನ ತಂದೆಯನ್ನು ಇನ್ನೂ ಹುಡುಕುತ್ತಿರುವ ಬಸ್ ಕಂಡಕ್ಟರ್ (ಸಿಜು ಸನ್ನಿ), ಲೈಂಗಿಕ ಕಿರುಕುಳ ಕೊಡುವ ಅಥವಾ ಹೆಣ್ಣುಬಾಕನೆಂದು ಮನೆಯಿಂದ ಹೊರಹಾಕಲ್ಪಟ್ಟ ತಾತಾ, ಸೀರಿಯಲ್ ಕಿಲ್ಲರ್‌ನನ್ನು ಹಿಡಿಯಲು ಸಮಯ ವಿನಿಯೋಗಿಸುವ ಬದಲು ಕಾಣೆಯಾದ ತನ್ನ ನಾಯಿಯನ್ನು ಹುಡುಕಲು ಸಮಯ ವ್ಯರ್ಥ ಮಾಡುವ ಪೊಲೀಸ್ ಅಧಿಕಾರಿ... ಹೀಗೆ ಈ ಸಿನಿಮಾದಲ್ಲಿ ಸಾಕಷ್ಟು ವಿಷಯಗಳು ಇವೆ.
(7 / 10)
ಇಂತಹ ವೈವಿಧ್ಯಮಯ ಪಾತ್ರಗಳನ್ನು ಹಾಸ್ಯದ ರೂಪದಲ್ಲಿ ಕರೆದುಕೊಂಡು ಹೋಗುವುದು ಸವಾಲು. ಇದನ್ನು ಚಿತ್ರ ಸರಿಯಾಗಿ ನಿಭಾಯಿಸಿದೆ. ಕೆಲವೊಂದು ಕಡೆ ಸಿನಿಮಾ ನಗಿಸಲು ಯಶಸ್ವಿಯಾಗಿಲ್ಲ. ಆದರೆ, ಮಜಾ ಇದೆ ಎಂದು ನೋಡಿಕೊಳ್ಳಬಹುದು.
(8 / 10)
ಮನುಷ್ಯರನ್ನು ಸಾಯಿಸಿ ಅವರ ಬಾಯಿಗೆ ಬಾಳೆಹಣ್ಣು ತುರುಕುವ ಸೀರಿಯಲ್ ಕಿಲ್ಲರ್ ಮತ್ತು ತಾತಾನ ತೆವಲು ನಮ್ಮ ಸುತ್ತಮುತ್ತ ಇರುವ ನಿಗೂಢ ಮನಸ್ಥಿತಿಗಳ ರೂಪಕವೂ ಹೌದು.
(9 / 10)
ಲ್ಯೂಕ್ ಮತ್ತು ಜೆಸ್ಸಿ ಮಾಡುವ ಬಸ್ ಪ್ರಯಾಣದಂತೆ ಈ ಸಿನಿಮಾ ಕೆಲವು ಕಡೆಗಳಲ್ಲಿ ಮಂದಗತಿಯಲ್ಲಿ ಸಾಗುತ್ತದೆ. ಟೊವಿನೋ ಥಾಮಸ್ ನಿರ್ಮಿಸಿದ ಮಾರನಮಸ್ ಬಹುತೇಕ ಭಾಗವು ಆನಂದದಾಯಕ, ಮೋಜಿನ ಸವಾರಿಯಾಗಿದೆ. ಆದರೆ ಅದು ಗೊಂದಲಗಳಿಂದ ತುಂಬಿದೆ ಎಂದರೆ ತಪ್ಪಾಗದು.
ಇತರ ಗ್ಯಾಲರಿಗಳು