ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿದ್ಯಾಪತಿ ಕನ್ನಡ ಸಿನಿಮಾ ಹುಡುಕುವುದು ಹೇಗೆ? ನಾಗಭೂಷಣ್, ಡಾಲಿ ಧನಂಜಯ್ ಚಿತ್ರ
ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಟ ನಾಗಭೂಷಣ ನಟಿಸಿರುವ ವಿದ್ಯಾಪತಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಆದರೆ, ಪ್ರೈಮ್ ವಿಡಿಯೋದ "ಇತ್ತೀಚಿನ ಚಿತ್ರಗಳ ಪಟ್ಟಿಯಲ್ಲಿ" ವಿದ್ಯಾಪತಿ ಕಾಣಿಸದೆ ಇರುವುದನ್ನು ಸಾಕಷ್ಟು ಜನರು ಗಮನಿಸಿರಬಹುದು.
(1 / 10)
ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಟ ನಾಗಭೂಷಣ ನಟಿಸಿರುವ ವಿದ್ಯಾಪತಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಆದರೆ, ಪ್ರೈಮ್ ವಿಡಿಯೋದ "ಇತ್ತೀಚಿನ ಚಿತ್ರಗಳ ಪಟ್ಟಿಯಲ್ಲಿ" ವಿದ್ಯಾಪತಿ ಕಾಣಿಸದೆ ಇರುವುದನ್ನು ಸಾಕಷ್ಟು ಜನರು ಗಮನಿಸಿರಬಹುದು.ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಟಾಪ್ ಲಿಸ್ಟ್‌ನಲ್ಲಿ ತಮ್ಮ ಸಿನಿಮಾವನ್ನು ಲಿಸ್ಟ್ ಮಾಡಲು ಸಿನಿಮಾ ತಯಾರಕರು ಹೆಚ್ಚುವರಿ ಹಣ ನೀಡಬೇಕಾಗಬಹುದು. ಈ ರೀತಿ ಲಿಸ್ಟಿಂಗ್ ಮಾಡದೆ ಇರುವ ಸಿನಿಮಾವು ಒಟಿಟಿ ವೇದಿಕೆಯ ಮೊದಲ ಪುಟದಲ್ಲಿ ಕಾಣಿಸದೆ ಇರಬಹುದು.
(2 / 10)
ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿದ ವಿದ್ಯಾಪತಿ ಸಿನಿಮಾ ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಮುನ್ಸೂಚನೆ ನೀಡದೆ, ನೇರವಾಗಿ ಈ ಶುಕ್ರವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.
(3 / 10)
ಏಪ್ರಿಲ್ 10ರಂದು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿದ್ದ ʻವಿದ್ಯಾಪತಿʼ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಡಿಸೆಂಟ್ ಗಳಿಕೆ ಕಂಡಿತ್ತು. ವಿದ್ಯಾಭೂಷನ್ ನಟಿಸಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು.
(4 / 10)
ಹನಿಮೂನ್, ಇಕ್ಕಟ್, ಟಗರು ಪಲ್ಯ ಸಿನಿಮಾ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿರುವ ನಟ ನಾಗಭೂಷಣ್, ʻವಿದ್ಯಾಪತಿʼ ಚಿತ್ರರದ ಮೂಲಕ ಗಮನಸೆಳೆಯುವ ನಟನೆ ನೀಡಿದ್ದರು.
(5 / 10)
ಈ ಸಿನಿಮಾದಲ್ಲಿ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದರೆ, ಗರುಡ ರಾಮ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದರು. ಡಾಲಿ ಧನಂಜಯ್ ಅನಕೊಂಡ ಅನ್ನೋ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
(6 / 10)
ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನ ಜವಾಬ್ದಾರಿಯೂ ಅವರದ್ದೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
(7 / 10)
ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣವಾದ 4ನೇ ಸಿನಿಮಾ ಇದಾಗಿದೆ.
(9 / 10)
ಇದೀಗ ಇದೇ ವಿದ್ಯಾಪತಿ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 23 ದಿನಗಳಿಗೆ ಈ ಸಿನಿಮಾ ಒಟಿಟಿ ಅಂಗಳ ತಲುಪಿದೆ. ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಈ ಸಿನಿಮಾ ಇದೀಗ ವೀಕ್ಷಣೆಗೆ ಲಭ್ಯವಿದೆ. ಅಮೆಜಾನ್ ಪ್ರೈಮ್‌ನ ಮೊದಲ ಪುಟದಲ್ಲಿ ಈ ಚಿತ್ರ ಕಾಣಿಸುತ್ತಿಲ್ಲ ಎಂದು ಬೇಸರ ಮಾಡಬೇಡಿ.
ಇತರ ಗ್ಯಾಲರಿಗಳು