ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳು; ಪಟ್ಟಿಯಲ್ಲಿ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಇಲ್ಲ!
ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ವಾರ ಹಲವು ಸಿನಿಮಾಗಳು, ವೆಬ್ ಸರಣಿಗಳು, ಶೋಗಳು ಬಿಡುಗಡೆಯಾಗಿವೆ. ನೆಟ್‌ಫ್ಲಿಕ್ಸ್ ಇಂಡಿಯಾ ಒಟಿಟಿಯಲ್ಲಿ ಟಾಪ್ 10 ಟ್ರೆಂಡಿಂಗ್‌ನಲ್ಲಿರುವ ಸಿನಿಮಾಗಳ ವಿವರ ಇಲ್ಲಿದೆ. ಆದರೆ, ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸ್ಥಾನ ಪಡೆದಿಲ್ಲ.
(1 / 11)
ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳು: ಈ ವಾರ ಬಿಡುಗಡೆಯಾದ ಹೊಸ ಸಿನಿಮಾಗಳಲ್ಲಿ ಕೆಲವು ಸೇರಿದಂತೆ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಚಿತ್ರಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ. ಆದರೆ, ಈ ವರ್ಷ ಬಹುನಿರೀಕ್ಷೆ ಹುಟ್ಟಿಸಿ ಪ್ಲಾಪ್ ಆಗಿದ್ದ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
(2 / 11)
ಜಾನ್ ಅಬ್ರಹಾಂ ಅಭಿನಯದ 'ದಿ ಡಿಪ್ಲೊಮ್ಯಾಟ್' ಸಿನಿಮಾ ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ನಂ.1 ಸ್ಥಾನದಲ್ಲಿದೆ. ಈ ಪೊಲಿಟಿಕಲ್ ಡ್ರಾಮಾ ಚಿತ್ರವನ್ನು ಶಿವಂ ನಾಯರ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಭಾರತ-ಪಾಕಿಸ್ತಾನ ಸಂಬಂಧಗಳ ವಿವರವನ್ನೂ ಹೊಂದಿದೆ.
(3 / 11)
ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ತೆಲುಗು ಚಿತ್ರ ಜ್ಯಾಕ್ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಸಿಧು ಜೊನಲಗುಡ್ಡ ಮತ್ತು ವೈಷ್ಣವಿ ಚೈತನ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
(4 / 11)
ಗುಡ್ ಬ್ಯಾಡ್ ಅಗ್ಲಿ ತಮಿಳು ಭಾಷೆಯ ಆಕ್ಷನ್ ಕಾಮಿಡಿ ಸಿನಿಮಾ. ಇದು ಅಗ್ರ ಮೂರನೇ ಸ್ಥಾನದಲ್ಲಿದೆ. ಇದನ್ನು ಜ್ಯಾದಾ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಜಿತ್ ಕುಮಾರ್, ತ್ರಿಷಾ ಕೃಷ್ಣನ್, ಅರ್ಜುನ್ ದಾಸ್, ಸುನಿಲ್, ಕಾರ್ತಿಕೇಯ ದೇವ್, ಪ್ರಿಯಾ ಪ್ರಕಾಶ್ ವಾರಿಯರ್, ಪ್ರಭು, ಪ್ರಸನ್ನ, ಟಿನ್ನು ಆನಂದ್ ನಟಿಸಿದ್ದಾರೆ.
(5 / 11)
ಮಿಷನ್: ಇಂಪಾಸಿಬಲ್ - ಡೆಡ್ ರಾಕನಿಂಗ್: ಈ ಅಮೆರಿಕನ್ ಸ್ಪೈ ಸಿನಿಮಾ ಅಗ್ರ ನಾಲ್ಕನೇ ಸ್ಥಾನದಲ್ಲಿದೆ. ಟಾಮ್ ಕ್ರೂಸ್ ಅಭಿನಯದ ಈ ಚಿತ್ರವನ್ನು ಕ್ರಿಸ್ಟೋಫರ್ ಮ್ಯಾಕ್ವಾರಿ ನಿರ್ದೇಶಿಸಿದ್ದಾರೆ.
(6 / 11)
ಫಿಯರ್ ಸ್ಟ್ರೀಟ್: ಪ್ರಾಮ್ ಕ್ವೀನ್: ಈ ಹಾರರ್ ಸಿನಿಮಾ ಐದನೇ ಸಿನಿಮಾವಾಗಿದೆ. ಈ ಚಿತ್ರವನ್ನು ಡೊನಾಲ್ಡ್ ಮೆಕ್ ಎಲ್ರಾಯ್ ಮತ್ತು ಮ್ಯಾಟ್ ಪಾಮರ್ ನಿರ್ದೇಶಿಸಿದ್ದಾರೆ. ಇಂಡಿಯಾ ಫೌಲರ್, ಸುಜನಾ ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
(7 / 11)
ಕೋರ್ಟ್: ಸ್ಟೇಟ್ ವರ್ಸಸ್ ಎ ನೋಬಡಿ: ಇದು ರಾಮ್ ಜಗದೀಶ್ ನಿರ್ದೇಶನದ ತೆಲುಗು ಚಿತ್ರ. ಇದು ಕೋರ್ಟ್ ರೂಮ್ ಡ್ರಾಮಾ. ಈಗ ನೆಟ್ ಫ್ಲಿಕ್ಸ್ ನ ಟಾಪ್ 10ರಲ್ಲಿದೆ. ಪ್ರಿಯದರ್ಶಿ ಪುಲಿಕೊಂಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
(8 / 11)
ಆಫೀಸರ್: ಈ ಕ್ರೈಮ್ ಆಕ್ಷನ್ ಮಲಯಾಳಂ ಸಿನಿಮಾ ಅಗ್ರ ಏಳನೇ ಸ್ಥಾನದಲ್ಲಿದೆ. ಈ ಚಿತ್ರದಲ್ಲಿ ಕುಂಚಾಕೋ ಬೋಬನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
(9 / 11)
ಜ್ಯುವೆಲ್ ಥೀಪ್: ಸೈಫ್ ಅಲಿ ಖಾನ್ ಮತ್ತು ಜೈದೀಪ್ ಅಹ್ಲಾವತ್ ಅಭಿನಯದ ಜ್ಯುವೆಲ್ ಥೀಫ್ ನೆಟ್ ಫ್ಲಿಕ್ಸ್ ನಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಈ ಚಿತ್ರದ ಕಥೆ ವಜ್ರದ ಕಳ್ಳತನದ ವಿಷಯವನ್ನು ಆಧರಿಸಿದೆ.
(10 / 11)
ದೇವಾ: ಶಾಹಿದ್ ಕಪೂರ್ ನಟನೆಯ ದೇವಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್‌ನಲ್ಲಿದೆ. ಇಂದು ಸೋಮವಾರ ಕೂಡ ಟಾಪ್ 10 ಲಿಸ್ಟ್‌ನಲ್ಲಿದೆ.
ಇತರ ಗ್ಯಾಲರಿಗಳು