Chef Chidambara OTT: ಒಟಿಟಿಗೆ ಬಂದ ‘Chef ಚಿದಂಬರ’; ಈ ಒಟಿಟಿಯಲ್ಲಿ ಅನಿರುದ್ಧ ಜತ್ಕರ್ ಚಿತ್ರ ವೀಕ್ಷಣೆಗೆ ಲಭ್ಯ
- Chef Chidambara OTT: ನಟ ಅನಿರುದ್ದ್ ಜತ್ಕರ್ ನಾಯಕನಾಗಿ ನಟಿಸಿರುವ ಚೆಫ್ ಚಿದಂಬರ ಚಿತ್ರ ಜೂನ್ 14ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಆನಂದರಾಜ್ ಎಂ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೂ ಆಗಮಿಸಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು?
- Chef Chidambara OTT: ನಟ ಅನಿರುದ್ದ್ ಜತ್ಕರ್ ನಾಯಕನಾಗಿ ನಟಿಸಿರುವ ಚೆಫ್ ಚಿದಂಬರ ಚಿತ್ರ ಜೂನ್ 14ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಆನಂದರಾಜ್ ಎಂ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೂ ಆಗಮಿಸಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು?
(1 / 6)
ಕಳೆದ ವರ್ಷ ಜೊತೆಜೊತೆಯಲಿ ಸೀರಿಯಲ್ ಬಳಿಕ ಸೂರ್ಯವಂಶ ಸೀರಿಯಲ್ ಸಹ ಘೋಷಣೆ ಮಾಡಿ, ನಟನೆ ಆರಂಭಿಸಿದ್ದರು ನಟ ಅನಿರುದ್ಧ ಜತ್ಕರ್. ಈ ಸೀರಿಯಲ್ ಜತೆ ಜತೆಗೇ ಒಪ್ಪಿಕೊಂಡ ಸಿನಿಮಾ ಚೆಫ್ ಚಿದಂಬರ. ಜೂನ್ 14ರಂದು ಈ ಚಿತ್ರ ತೆರೆಗೆ ಬಂದಿತ್ತು.
(image\ Aniruddha Jatkar)(2 / 6)
ವಿಮರ್ಶೆ ದೃಷ್ಟಿಯಿಂದ ಚೆಫ್ ಚಿದಂಬರ ಚಿತ್ರ ಮೆಚ್ಚುಗೆ ಪಡೆದಿತ್ತಾದರೂ, ಹೆಚ್ಚು ಕಾಲ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ. ಇದೀಗ ತಿಂಗಳ ಬಳಿಕ ಒಟಿಟಿ ಪ್ರವೇಶಿಸಿದೆ.
(3 / 6)
ಮುಗ್ಧ ಬಾಣಸಿಗ ಚಿದಂಬರ ಹೇಗೆ ಕೊಲೆಯ ಸುಳಿಗೆ ಸಿಲುಕುತ್ತಾನೆ ಅದರಿಂದ ಹೇಗೆ ಆಚೆ ಬರ್ತಾನೆ ಎಂಬುದನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಅಡುಗೆ ಮಾಡಿ ಬಡಿಸುವಲ್ಲಿ ಸಿದ್ಧಹಸ್ತನಾಗಿರುವ ಚಿದಂಬರನ ಮನೆಯಲ್ಲಿಯೇ ಒಂದು ಸಾವು ಘಟಿಸುತ್ತದೆ. ಆ ಸಾವಿನ ಪ್ರಕರಣದ ಬೆನ್ನು ಹತ್ತಿ ಪೊಲೀಸರೂ, ಚಿದಂಬರನ ಮನೆ ಬಾಗಿಲು ಬಡಿಯುತ್ತಾರೆ. ಆತನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತ, ಇನ್ನೊಂದು ಸಾವಿನ ಸುಳಿಗೆ ತನ್ನದಲ್ಲದ ತಪ್ಪಿಗೆ ಸಿಲುಕುತ್ತಾನೆ. ಇದೆಲ್ಲದರಿಂದ ಚಿದಂಬರ ಹೇಗೆ ಹೊರ ಬರ್ತಾನೆ ಎಂಬುದೇ ಸಿನಿಮಾ ಕಥೆ.
(4 / 6)
ಇದೀಗ ಚಿತ್ರಮಂದಿರದಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದ ಚೆಫ್ ಚಿದಂಬರ ಸಿನಿಮಾ, ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಇಂದಿನಿಂ (ಜುಲೈ 24) ಸ್ಟ್ರೀಮಿಂಗ್ ಆಗುತ್ತಿದೆ.
(5 / 6)
ಡಾರ್ಕ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಚೆಫ್ ಚಿದಂಬರ ಸಿನಿಮಾದಲ್ಲಿ ಶೀರ್ಷಿಕೆ ರೋಲ್ ಪ್ಲೇ ಮಾಡಿದ್ದಾರೆ ನಟ ಅನಿರುದ್ಧ ಜತ್ಕರ್. ಚಿತ್ರದಲ್ಲಿ ನಿಧಿ ಸುಬ್ಬಯ್ಯ, ರಚೆಲ್ ಡೇವಿಡ್, ಶರತ್ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್, ಶಿವಮಣಿ ಸೇರಿ ಇನ್ನು ಹಲವರು ನಟಿಸಿದ್ದಾರೆ.
ಇತರ ಗ್ಯಾಲರಿಗಳು