Horror OTT Movies: ನೀವು ಹಾರರ್ ಸಿನಿಮಾ ಪ್ರಿಯರಾ? ಒಟಿಟಿಯಲ್ಲಿ ನೋಡಬಯಸುವ ದೆವ್ವದ ಸಿನಿಮಾಗಳ ಪಟ್ಟಿ ಇಲ್ಲಿದೆ
ನೀವು ಹಾರರ್ ಥ್ರಿಲ್ಲರ್ ಶೈಲಿಯ ಸಿನಿಮಾ ಪ್ರಿಯರಾಗಿದ್ದರೆ, ಸೌತ್‌ನ ಹಲವು ಹಾರರ್ ಸಿನಿಮಾಗಳ ಕಿರು ಮಾಹಿತಿ ಇಲ್ಲಿದೆ. ಆ ಚಿತ್ರಗಳು ಯಾವ ಒಟಿಟಿಯಲ್ಲಿ ಲಭ್ಯ ಎಂಬ ವಿವರವೂ ಇದೆ.
(1 / 6)
ತಾಪ್ಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ತೆಲುಗು ಚಿತ್ರ ಆನಂದೋಬ್ರಹ್ಮ ಜಿ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮಹಿ ವಿ. ರಾಘವ್ ನಿರ್ದೇಶನದ ಈ ಚಿತ್ರವು ಕಮರ್ಷಿಯಲ್ ಹಿಟ್ ಆಗಿತ್ತು. ಇದರಲ್ಲಿ ಶ್ರೀನಿವಾಸ ರೆಡ್ಡಿ, ವೆನ್ನೆಲಾ ಕಿಶೋರ್ ಮತ್ತು ಶಕಲಕ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(2 / 6)
ಹನ್ಸಿಕಾ ಮತ್ತು ಆಂಡ್ರಿಯಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಮಿಳಿನ ಅರಣ್ಮನೈ ಪ್ರೇಕ್ಷಕರನ್ನು ಭಯಭೀತರನ್ನಾಗಿ ಮಾಡಿದೆ. ಈ ಹಿಟ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
(3 / 6)
ಸಂತಾನಂ ನಾಯಕನಾಗಿ ನಟಿಸಿರುವ ತಮಿಳಿನ ಕಾಮಿಡಿ ಶೈಲಿಯ ಹಾರರ್ ಕಥಾಹಂದರದ ದಿಲುಕು ದುಡ್ಡು ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಚಿತ್ರವನ್ನು 1 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಈ ಚಿತ್ರ 15 ಕೋಟಿ ಗಳಿಕೆ ಕಂಡಿತ್ತು.
(4 / 6)
ತಮಿಳಿನಲ್ಲಿ ಲಾರೆನ್ಸ್ ಅವರ ಕಾಂಚನಾ ಸರಣಿಯ ಸಿನಿಮಾಗಳು, ದೊಡ್ಡ ಮಟ್ಟದ ಯಶಸ್ಸು ಗಳಿಸಿವೆ. ಈ ಪೈಕಿ ಕಾಂಚನಾ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಕಾಂಚನಾ 3 ಜೀ 5 ನಲ್ಲಿ ವೀಕ್ಷಿಸಬಹುದು.
(5 / 6)
ಗೀತಾಂಜಲಿ ತೆಲುಗಿನ ಭಯಾನಕ ಹಾಸ್ಯ ಚಿತ್ರಗಳಲ್ಲಿ ಒಂದಾಗಿದೆ. ಜೀ 5 ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಈ ಚಿತ್ರದಲ್ಲಿ ನಾಯಕಿಯಾಗಿ ಅಂಜಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು