August OTT Release: ಒಟಿಟಿಯಲ್ಲಿ ಆಗಸ್ಟ್ ತಿಂಗಳಲ್ಲಿ ಹೊಸ ಸಿನಿಮಾ, ಸರಣಿಗಳ ಹಬ್ಬ; ದಿಲ್ರುಬಾದಿಂದ ಮನೋರಥಂಗಲ್‌ವರೆಗೆ
August ott releases 2024: ಆಗಸ್ಟ್ ತಿಂಗಳಿನಲ್ಲಿ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಹಿಂದಿ, ಮಲಯಾಳಂ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಕೆಲವು ಸಿನಿಮಾ, ಸರಣಿಗಳ ವಿವರ ಈ ಮುಂದಿನಂತೆ ಇದೆ.
(1 / 7)
August ott releases 2024: ಆಗಸ್ಟ್ ತಿಂಗಳಿನಲ್ಲಿ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಹಿಂದಿ, ಮಲಯಾಳಂ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಕೆಲವು ಸಿನಿಮಾ, ಸರಣಿಗಳ ವಿವರ ಈ ಮುಂದಿನಂತೆ ಇದೆ.
(2 / 7)
ಫಿರ್ ಆಯಿ ಹಸೀನ್ ದಿಲ್ರುಬಾ: ವಿಕ್ರಾಂತ್ ಮಾಸ್ಸೆ, ತಾಪ್ಸಿ ಪನ್ನು ಮತ್ತು ಸನ್ನಿ ಕೌಶಲ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಫಿರ್ ಆಯಿ ಹಸೀನ್ ದಿಲ್ರುಬಾ' ಆಗಸ್ಟ್ ತಿಂಗಳ ಆರಂಭದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಆಗಸ್ಟ್ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದು 2021 ರಲ್ಲಿ ಬಿಡುಗಡೆಯಾದ 'ಹಸೀನ್ ದಿಲ್ರುಬಾ' ಚಿತ್ರದ ಮುಂದುವರಿದ ಭಾಗವಾಗಿದೆ.
(3 / 7)
ಗ್ಯಾರಾ ಗ್ಯಾರಾ: ರಾಘವ್ ಜುಯಲ್ ಅವರು 'ಕಿಲ್' ನಿರ್ಮಾಪಕರೊಂದಿಗೆ ಹೊಸ ವೆಬ್ ಸರಣಿ 'ಗ್ಯಾರಾ ಗ್ಯಾರಾ' ಜೊತೆ ಬರುತ್ತಿದ್ದಾರೆ. ರಾಘವ್ ಜೊತೆಗೆ ಕೃತಿಕಾ ಕಮ್ರಾ ಮತ್ತು ಧೈರ್ಯ ಕರ್ವ ಕೂಡ ಈ ವೆಬ್ ಸರಣಿಯಲ್ಲಿದ್ದಾರೆ. ಈ ವೆಬ್ ಸರಣಿಯನ್ನು ಒಟಿಟಿ ಪ್ಲಾಟ್‌ಫಾರ್ಮ್ Zee5 ನಲ್ಲಿ ಆಗಸ್ಟ್ 9, 2024 ರಂದು ಬಿಡುಗಡೆ ಮಾಡಲಾಗುತ್ತದೆ.
(4 / 7)
ಲೈಫ್ ಹಿಲ್ ಗಯಿ: ದಿವ್ಯೇಂದು ಶರ್ಮಾ ಮತ್ತು ಕುಶಾ ಕಪಿಲಾ ಅವರ ವೆಬ್ ಸರಣಿ 'ಲೈಫ್ ಹಿಲ್ ಗಯಿ' ಆಗಸ್ಟ್ 9 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಕಾಮಿಡಿ ವೆಬ್ ಸರಣಿಯಲ್ಲಿ ದಿವ್ಯೇಂದು ಮತ್ತು ಕುಶಾ ಮಾತ್ರವಲ್ಲದೆ ವಿನಯ್ ಪಾಠಕ್ ಮತ್ತು ಭಾಗ್ಯಶ್ರೀ ಕೂಡ ಕಾಣಿಸಿಕೊಳ್ಳಲಿದ್ದಾರೆ.
(5 / 7)
ಮನೋರಥಂಗಲ್: ಮಲಯಾಳಂನ ಬಹುನಿರೀಕ್ಷಿತ ಸಿನಿಮಾ (ಸಣ್ಣಕಥೆಗಳ ಗುಚ್ಚ) ಮನೋರಥಂಗಲ್ ಆಗಸ್ಟ್ 15 ರಂದು ZEE5 ನಲ್ಲಿ ಬಿಡುಗಡೆಯಾಗಲಿದೆ. ಇದು 9 ಕಥೆಗಳನ್ನು ಹೊಂದಿದೆ. ಇದನ್ನು 8 ನಿರ್ದೇಶಕರು ನಿರ್ದೇಶಿಸಿದ್ದಾಆರೆ. ಈ ಸರಣಿಯಲ್ಲಿ ಕಮಲ್ ಹಾಸನ್, ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಫಹದ್ ಫಾಸಿಲ್ ಸೇರಿದಂತೆ ಅನೇಕ ದೊಡ್ಡ ಸೂಪರ್‌ಸ್ಟಾರ್‌ಗಳು ನಟಿಸಿದ್ದಾರೆ.
(6 / 7)
ಕಿಲ್: ಲಕ್ಷ್ಯ, ರಾಘವ್ ಜುಯಲ್ ಮತ್ತು ತಾನ್ಯಾ ಮಾಣಿಕ್ತಾಲಾ ಅವರ 'ಕಿಲ್' ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ನಿಖಿಲ್ ನಾಗೇಶ್ ಭಟ್ ನಿರ್ದೇಶನದ ಈ ಚಿತ್ರವು ಆಗಸ್ಟ್ ಮಧ್ಯದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ಗೆ ಬರಲಿದೆ. ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ ಕಿಲ್ ಸಿನಿಮಾವು 21.15 ಕೋಟಿ ರೂಪಾಯಿ ಗಳಿಸಿದೆ.
ಇತರ ಗ್ಯಾಲರಿಗಳು