ಸೆನ್ಸಾರ್ ಬೀಪ್ ಸದ್ದಿನ ಸಹವಾಸ ಬೇಡವೆಂದು ನೇರ ಒಟಿಟಿಗೆ ಚೈತ್ರಾ ಜೆ ಆಚಾರ್ ಸಿನಿಮಾ; ಜೂನ್ 28ರಿಂದ ಒಂದಲ್ಲ 5 ಒಟಿಟಿಗಳಲ್ಲಿ ರಿಲೀಸ್
- Chaitra J Achar Happy birthday to me Movie: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ರಕ್ಷಿತ್ ಶೆಟ್ಟಿ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್ ನಟನೆಯ ಸಿನಿಮಾವು ಥಿಯೇಟರ್‌ನಲ್ಲಿ ಬಿಡುಗಡೆಯಾಗದೆ ನೇರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದೇ ಜೂನ್ 28ರಿಂದ ಹ್ಯಾಪಿ ಬರ್ತ್‌ಡೇ ಟು ಮೀ ಸಿನಿಮಾ ವಿವಿಧ ಒಟಿಟಿಗಳಲ್ಲಿ ಪ್ರೀಮಿಯರ್ ಆಗಲಿದೆ.
- Chaitra J Achar Happy birthday to me Movie: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ರಕ್ಷಿತ್ ಶೆಟ್ಟಿ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್ ನಟನೆಯ ಸಿನಿಮಾವು ಥಿಯೇಟರ್‌ನಲ್ಲಿ ಬಿಡುಗಡೆಯಾಗದೆ ನೇರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದೇ ಜೂನ್ 28ರಿಂದ ಹ್ಯಾಪಿ ಬರ್ತ್‌ಡೇ ಟು ಮೀ ಸಿನಿಮಾ ವಿವಿಧ ಒಟಿಟಿಗಳಲ್ಲಿ ಪ್ರೀಮಿಯರ್ ಆಗಲಿದೆ.
(1 / 8)
ಚೈತ್ರಾ ಜೆ ಆಚಾರ್ ನಟನೆಯ ಹ್ಯಾಪಿ ಬರ್ತ್‌ಡೇ ಟು ಮೀ ಸಿನಿಮಾ ಥಿಯೇಟರ್ ಬಿಟ್ಟು ನೇರವಾಗಿ ಒಟಿಟಿಗಳಲ್ಲಿ ಬಿಡುಗಡೆಯಾಗಲು ಕಾರಣವಿದೆ. ಚೈತ್ರಾ ಜೆ ಆಚಾರ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳನ್ನು ನೋಡುತ್ತ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾದ ಒಟಿಟಿ ವಿವರ ಪಡೆಯೋಣ ಬನ್ನಿ.(All photo credits: chaithra.j.achar instagram)
(2 / 8)
ಮೇ 31ರಂದೇ ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿ ಬರ್ತ್‌ಡೇ ಟು ಮೀ ಚಿತ್ರದ ಅಪ್‌ಡೇಟ್ ನೀಡಿದ್ದರು. ಒಂದು ಫನ್-ಟಾಸ್ಟಿಕ್ ಪ್ರಯಾಣ ನೋಡಲು ರೆಡಿಯಾಗಿ ಎಂದು ಅಪ್‌ಡೇಟ್ ನೀಡಿದ್ದರು.
(3 / 8)
ಒಂದಲ್ಲ 5 ಒಟಿಟಿಗಳಲ್ಲಿ ಬಿಡುಗಡೆಯಾಗಲಿದೆ ಚೈತ್ರಾ ಜೆ ಆಚಾರ್ ನಟನೆಯ ಸಿನಿಮಾ. ಏರ್‌ಟೆಲ್‌ಎಕ್ಸ್‌ಟ್ರೀಮ್, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್ ಒಟಿಟಿಗಳಲ್ಲಿ ಹ್ಯಾಪಿ ಬರ್ತ್‌ಡೇ ಟು ಮಿ ರಿಲೀಸ್ ಆಗಲಿದೆ.
(4 / 8)
ಯಾಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ?: ಚೈತ್ರಾ ಜೆ ಆಚಾರ್ ನಟನೆಯ ಸಿನಿಮಾದಲ್ಲಿ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗಕ್ಕೆ ಒಳಗಾಗುವಂತಹ ಬೋಲ್ಡ್ ದೃಶ್ಯಗಳಿವೆಯಾ? ಈ ಪ್ರಶ್ನೆಗೆ ಉತ್ತರ ಇಲ್ಲ ಎನ್ನಲಾಗುತ್ತಿದೆ. ಆದರೆ, ಸೆನ್ಸಾರ್ ಸಹವಾಸ ಬೇಡವೆಂದು ನಿರ್ಧರಿಸಲು ಬೇರೆಯದ್ದೇ ಕಾರಣವಿದೆ.
(5 / 8)
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಚೈತ್ರಾ ಜೆ ಆಚಾರ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು. ಒಟಿಟಿ ಸಿನಿಮಾವನ್ನು ರಾಕೇಶ್ ಕದ್ರಿ ನಿರ್ದೇಶಿಸಿದ್ದಾರೆ.
(6 / 8)
ಕೊರೊನಾ ಸಾಂಕ್ರಾಮಿಕ ಮುಗಿದ ತಕ್ಷಣ ಮಾಡಿದ ಸಿನಿಮಾವಿದು. ಇದರಲ್ಲಿ ಸಾಕಷ್ಟು ಫನ್ ಮತ್ತು ನಗು ಇದೆ. ಇದು ಯುವ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಚೈತ್ರಾ ಜೆ ಆಚಾರ್ ಹೇಳಿದ್ದಾರೆ.
(7 / 8)
ಮನ್ಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾದಿಂದಾಗಿ ಒಟಿಟಿ ಐಡಿಯಾ ಬಂತಂತೆ. ಈಗ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಒಟಿಟಿ ಮೂಲಕ ಸಾಕಷ್ಟು ಯುವ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ ಎನ್ನುವ ಕಾರಣವೂ ಈ ಒಟಿಟಿ ರಿಲೀಸ್ ಹಿಂದಿದೆ. ಇದಕ್ಕೂ ಪ್ರಮುಖ ಕಾರಣ ಈ ಚಿತ್ರದಲ್ಲಿರುವ "ಕೆಟ್ಟ ಪದಗಳು".
(8 / 8)
ಈ ಸಿನಿಮಾದಲ್ಲಿ ಒಂದಿಷ್ಟು ಪದಗಳಿವೆ. ಈ ಪದಗಳನ್ನು ಕೇಳಿದರೆ ಸಿನಿಮಾ ಸೆನ್ಸಾರ್ ಮಂಡಳಿಯವರು ಬೀಪ್ ಸೌಂಡ್ ಹಾಕಿಸೋದು ಖಚಿತ. ಈ ಪದಗಳಿಗೆ ಬೀಪ್ ಸೌಂಡ್ ಹಾಕಿದ್ರೆ ಚಿತ್ರದ ನಿಜವಾದ ಮಜ ಸಿಗುವುದಿಲ್ಲ. ಆದರೆ, ಇವು ಅಸಹ್ಯ ಪದಗಳಲ್ಲ. ಈಗಿನ ತಲೆಮಾರಿನ ಯುವ ಜನತೆ ನಿತ್ಯ ಬದುಕಿನಲ್ಲಿ, ದಿನನಿತ್ಯ ಮಾತನಾಡುವಂತಹ ಬಳಕೆಯಲ್ಲಿರುವ ಪದಗಳೇ ಆಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತರ ಗ್ಯಾಲರಿಗಳು