GOAT OTT Release: ದಳಪತಿ ವಿಜಯ್ GOAT ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯಾವುದು?
- GOAT OTT Release: ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಮೂಲಕ ತೆರೆಮೇಲೆ ಅಪ್ಪಳಿಸಿದ್ದಾರೆ ಕಾಲಿವುಡ್ ನಟ ದಳಪತಿ ವಿಜಯ್. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡುತ್ತಿದೆ. ಹೀಗಿರುವಾಗಲೇ ಇದೇ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆಯೂ ಇದೀಗ ಒಂದಷ್ಟು ಅಪ್‌ಡೇಟ್ ಮಾಹಿತಿ ಲಭ್ಯವಾಗಿದೆ.

(1 / 5)
ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆ ನಿಮಿತ್ತ ಗೋಟ್ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿತ್ತು. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಾತ್ರ ಈ ಸಿನಿಮಾ ತೆರೆಗೆ ಬಂದಿತ್ತು.
(2 / 5)
ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 45 ಕೋಟಿ ಕಮಾಯಿ ಮಾಡಿತ್ತು. ಅದಾದ ಮೇಲೆ ಎರಡು ಮತ್ತು ಮೂರನೇ ದಿನ ಕ್ರಮವಾಗಿ 25.5 ಕೋಟಿ ರೂ, 33 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
(3 / 5)
ಒಟ್ಟಾರೆ ಶನಿವಾರದಷ್ಟೊತ್ತಿಗೆ 102 ಕೋಟಿ ರೂಪಾಯಿ ಗಳಿಸಿ ಭಾರತದಾದ್ಯಂತ ಮೋಡಿ ಮಾಡಿತ್ತು. ಇದೀಗ ಇದೇ ಸಿನಿಮಾ ಚಿತ್ರಮಂದಿರದಲ್ಲಿ ಮುನ್ನುಗ್ಗುತ್ತಿರುವ ಹೊತ್ತಲ್ಲೇ ಒಟಿಟಿ ಬಗ್ಗೆ ಅಪ್‌ಡೇಟ್ ಮಾಹಿತಿ ಹೊರಬಿದ್ದಿದೆ.
(4 / 5)
ಸದ್ಯದ ಮಾಹಿತಿ ಪ್ರಕಾರ ಗೋಟ್ ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ಈ ಸಿನಿಮಾ ಚಿತ್ರಮಂದಿರದಲ್ಲಿ ನಾಲ್ಕು ವಾರಗಳ ಕಾಲ ಓಡಿದ ಬಳಿಕವಷ್ಟೇ ಒಟಿಟಿಗೆ ಆಗಮಿಸಲಿದೆ. ಅಂದರೆ, ಅಕ್ಟೋಬರ್ 4 ಅಥವಾ 11ರಂದು ಸ್ಟ್ರೀಮಿಂಗ್ ಆರಂಭಿಸಲಿದೆ.
ಇತರ ಗ್ಯಾಲರಿಗಳು