Ekam web series: ರಕ್ಷಿತ್ ಶೆಟ್ಟಿಯ ಏಕಂ ಕನ್ನಡ ವೆಬ್ ಸರಣಿ ನೋಡಲು ರೆಡಿಯಾಗಿ, ಎಲ್ಲಿ, ಯಾವಾಗ ನೋಡಬಹುದು? ಇಲ್ಲಿದೆ ವಿವರ
- Ekam web series: ಕನ್ನಡ ಭಾಷೆಯಲ್ಲಿ ವೆಬ್ ಸರಣಿಗಳ ಆರಂಭಕ್ಕೆ ರಕ್ಷಿತ್ ಶೆಟ್ಟಿ ಮುನ್ನುಡಿ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ತಂಡದ ಏಕಂ ವೆಬ್ ಸರಣಿ ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಜುಲೈ 13ರಿಂದ ಈ ವೆಬ್ ಸರಣಿಯನ್ನು ವೀಕ್ಷಿಸಬಹುದು.
- Ekam web series: ಕನ್ನಡ ಭಾಷೆಯಲ್ಲಿ ವೆಬ್ ಸರಣಿಗಳ ಆರಂಭಕ್ಕೆ ರಕ್ಷಿತ್ ಶೆಟ್ಟಿ ಮುನ್ನುಡಿ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ತಂಡದ ಏಕಂ ವೆಬ್ ಸರಣಿ ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಜುಲೈ 13ರಿಂದ ಈ ವೆಬ್ ಸರಣಿಯನ್ನು ವೀಕ್ಷಿಸಬಹುದು.
(1 / 11)
Ekam web series:ರಕ್ಷಿತ್ ಶೆಟ್ಟಿ ಏಕಂ ವೆಬ್ ಸರಣಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ. ಇದೇ ಜುಲೈ 13ರಿಂದ ಈ ವೆಬ್ ಸರಣಿಯನ್ನು ವೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ. ಏಕಂ ವೆಬ್ ಸರಣಿಯ ಸೀಸನ್ 1ರಲ್ಲಿ ಒಟ್ಟು ಏಳು ಸರಣಿಗಳು ಇರಲಿವೆ. ಕೇಶವ ಮಾಮಾ, ದೇವದತ್ತನ್, ಮಂಜುಲಾ ಮತ್ತು ಖುಷಿ ಮುಂತಾದವರ ಕಥೆಗಳು ಇರಲಿವೆ.
(2 / 11)
ಏಕಂ ವೆಬ್ ಸರಣಿಯನ್ನು ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಸಿನಿಮಾ, ಝೀ 5, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸೇರಿದಂತೆ ಯಾವುದೇ ಒಟಿಟಿಗಳಲ್ಲಿ ಈ ವೆಬ್ ಸರಣಿ ಬಿಡುಗಡೆಯಾಗುತ್ತಿಲ್ಲ.
(3 / 11)
ಒಟಿಟಿ ಕಂಪನಿಗಳು ಕನ್ನಡ ವೆಬ್ ಸರಣಿಗಳ ಕುರಿತು ತಾತ್ಸಾರದಿಂದ ನೋಡುತ್ತಿವೆ. ಇದರಿಂದ ನೊಂದ ರಕ್ಷಿತ್ ಶೆಟ್ಟಿ ಮತ್ತು ಅವರ ತಂಡ ಸ್ವಂತ ಒಟಿಟಿ ತಾಣದ ಮೂಲಕ ಈ ವೆಬ್ ಸರಣಿಯನ್ನು ಬಿಡುಗಡೆ ಮಾಡುತ್ತಿದೆ.
(4 / 11)
ekamtheseries.com ಎಂಬ ವೆಬ್‌ಸೈಟ್‌ನಲ್ಲಿ ಏಕಂ ವೆಬ್ ಸರಣಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆಸಕ್ತರು 149 ರೂಪಾಯಿ ನೀಡಿ ಈ ವೆಬ್‌ಸೈಟ್ ಚಂದಾದಾರಾಗಬಹುದು. ಒಂದು ಸಿನಿಮಾ ಟಿಕೆಟ್ ದರದಲ್ಲಿ ಏಕಂನ ಎಲ್ಲಾ ಸರಣಿಗಳನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರಕಲಿದೆ.
(5 / 11)
ಈ ರೀತಿ ಚಂದಾದಾರರಾದವರಿಗೆ ಚಿಲ್ಡ್ರನ್ ಆಫ್ ಸಿನೆಮಾ ಎಂಬ ಡಾಕ್ಯುಮೆಂಟರಿಯ 4 ಎಪಿಸೋಡ್ ನೋಡುವ ಅವಕಾಶ ದೊರಕಲಿದೆ. ಇದರೊಂದಿಗೆ ಏಕಂನ ಎಲ್ಲಾ ಎಪಿಸೋಡ್‌ಗಳ ಮೂಲ ಸ್ಕ್ರಿಪ್ಟ್ ಮತ್ತು ಸ್ಕ್ರೀನ್‌ಪ್ಲೇ ಕೂಡ ದೊರಕಲಿದೆ. ಇದರೊಂದಿಗೆ ಏಕಂ ತಂಡದ ಜತೆ ಸಂವಾದದಲ್ಲಿ ಭಾಗಿಯಾಗುವ ಅವಕಾಶವೂ ದೊರಕಲಿದೆ.
(6 / 11)
ಏಕಂ ವೆಬ್ ಸರಣಿ ಬಿಡುಗಡೆ ಮಾಡಲು ಯಾವುದೇ ಒಟಿಟಿ ವೇದಿಕೆಗಳು ಮುಂದೆ ಬಾರದ ಹಿನ್ನಲೆಯಲ್ಲಿ ರಕ್ಷಿತ್ ಶೆಟ್ಟಿ ಅವರು ಈ ವೆಬ್ ತಾಣದ ಮೂಲಕ ಈ ಸರಣಿ ಬಿಡುಗಡೆ ಮಾಡಿ ಒಟಿಟಿ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದಾರೆ.
(7 / 11)
‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! ‘ಏಕಂ’ ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ ಹಾಗು ಹಕ್ಕು ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
(8 / 11)
ಕನ್ನಡದ ಮೊದಲ ಪ್ರಮುಖ ವೆಬ್ ಸರಣಿಗೆ ಪ್ರೋತ್ಸಾಹ ನೀಡಲು ಬಯಸುವವರು ekamtheseries ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ತಾಣದಲ್ಲಿ ಈ ವೆಬ್ ಸರಣಿಗೆ ಸಂಬಂಧಪಟ್ಟಂತೆ ಹಲವು ವಿಡಿಯೋಗಳು ಇವೆ.
ಇತರ ಗ್ಯಾಲರಿಗಳು