ಈ ತಿಂಗಳು ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಆಗಮನವಾಗಲಿದೆ ಎಂಬ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ತಿಂಗಳು ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಆಗಮನವಾಗಲಿದೆ ಎಂಬ ಮಾಹಿತಿ ಇಲ್ಲಿದೆ

ಈ ತಿಂಗಳು ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಆಗಮನವಾಗಲಿದೆ ಎಂಬ ಮಾಹಿತಿ ಇಲ್ಲಿದೆ

  • ಆಗಸ್ಟ್‌ನಲ್ಲಿ ಒಟಿಟಿಯಲ್ಲಿಯೂ ಹಬ್ಬದ ವಾತಾವರಣ. ಸೌತ್‌ನ ಸಾಲು ಸಾಲು ಸ್ಟಾರ್‌ಗಳ ಸೂಪರ್‌ ಹಿಟ್‌ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಹಾಗಾದರೆ, ಯಾವೆಲ್ಲ ಚಿತ್ರಗಳನ್ನು, ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು? ಯಾವಾಗ ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಆಗಸ್ಟ್‌ನಲ್ಲಿ ಹಲವು ಸಿನಿಮಾಗಳು ಒಟಿಟಿ ಅಂಗಳಕ್ಕೆ ಬರಲಿವೆ. ಆ ಪೈಕಿ ಒಂದಷ್ಟು ಚಿತ್ರಗಳ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆದರೆ, ಇನ್ನು ಕೆಲವು ಚಿತ್ರಗಳ ಒಟಿಟಿ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. 
icon

(1 / 6)

(IMDb)

ಕಲ್ಕಿ 2898 ಎಡಿ: ಬಹುತಾರಾಗಣದ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಗಳಿಕೆ ಕಂಡಿದೆ. 1100 ಕೋಟಿ ಗಳಿಕೆ ಮಾಡಿ ಹೊಸ ದಾಖಲೆಯನ್ನೂ ಬರೆದಿದೆ ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್ ನಟನೆಯ ಈ ಸಿನಿಮಾ. ಇದೀಗ ಈ ಚಿತ್ರ ಒಟಿಟಿಯಲ್ಲಿ ಯಾವಾಗ ಎಂದು ನೋಡುವುದಾದರೆ, ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಆಗಸ್ಟ್ 23 ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನೇನು ಶೀಘ್ರದಲ್ಲಿ ಅಧಿಕೃತ ದಿನಾಂಕ ಘೋಷಣೆ ಆಗಲಿದೆ. 
icon

(2 / 6)

ಟರ್ಬೋ: ಮಮ್ಮೂಟ್ಟಿ, ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಟರ್ಬೋ ಸಿನಿಮಾ ಸಹ ನೋಡುಗರ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಅಂದಹಾಗೆ ಟರ್ಬೊ ಸಿನಿಮಾ ಸೋನಿ ಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಆಗಸ್ಟ್ 9ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಪ್ರಸಾರವಾಗಲಿದೆ.  ಟರ್ಬೊ ಚಿತ್ರವನ್ನು ವೈಶಾಖ್ ನಿರ್ದೇಶಿಸಿದ್ದಾರೆ. ಮಿಥುನ್ ಮ್ಯಾನುಯೆಲ್ ಥಾಮಸ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಮಮ್ಮುಟ್ಟಿ, ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ್ ಜಯಪ್ರಕಾಶ್, ಶಬರೀಶ್ ವರ್ಮಾ, ಸುನೀಲ್, ಕಬೀರ್ ದುಹಾನ್ ಸಿಂಗ್ ಮತ್ತು ನಿರಂಜನ್ ಅನುಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
icon

(3 / 6)

ಇಂಡಿಯನ್‌ 2: ಶಂಕರ್‌ ನಿರ್ದೇಶನದಲ್ಲಿ ಮೂಡಿಬಂದ ಕಮಲ್‌ ಹಾಸನ್‌ ಅವರ ಬಹುನಿರೀಕ್ಷಿತ ಸಿನಿಮಾ ಇಂಡಿಯನ್‌ 2, ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಲೈಕಾ ಸಂಸ್ಥೆ ನಿರ್ಮಾಣ ಮಾಡಿದ ಈ ಬಹುಕೋಟಿ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ಸೋತಿತು. ಈ ಸಿನಿಮಾ ಆಗಸ್ಟ್‌ 9ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(4 / 6)

ಮನಮೇಯ: ತೆಲುಗು ನಟ ಶರ್ವಾನಂದ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ನಟಿಸಿರುವ ಮನಮೇಯ ಸಿನಿಮಾ ಜೂನ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದೀಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ ಎಂದು ಕಾದು ಕೂತಿದ್ದ ಒಟಿಟಿ ಪ್ರಿಯರಿಗೆ ಸುದ್ದಿಯೊಂದು ಬಂದಿದೆ. ಅಮೆಜಾನ್‌ ಪ್ರೈಂನಲ್ಲಿ ಇದೇ ಆಗಸ್ಟ್‌ ಮೂರನೇ ವಾರದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನಲಾಗುತ್ತಿದೆ. 
icon

(5 / 6)

ರಾಯನ್: ಜುಲೈ 26ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ತಮಿಳು ನಟ ಧನುಷ್‌ ನಟನೆಯ ರಾಯನ್‌ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಓಟ ಮುಂದುವರಿಸಿದೆ. ಧನುಷ್‌ ಅವರ 50ನೇ ಸಿನಿಮಾ ಇದು ಎಂಬ ವಿಶೇಷಣದ ಜತೆಗೆ ಬಿಡುಗಡೆಯಾಗಿತ್ತು. ಸ್ವತಃ ಧನುಷ್‌ ಈ ಚಿತ್ರ ನಿರ್ದೇಶಿಸಿದ್ದರು. ಗಳಿಕೆಯಲ್ಲಿ 100 ಕೋಟಿ ದಾಟಿರುವ ಈ ಸಿನಿಮಾ ಸಹ ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ನಲ್ಲಿ ಒಟಿಟಿ ಅಂಗಳಕ್ಕೆ ಬರಲಿದೆ. ಬಹುತೇಕ ಸನ್‌ ನೆಕ್ಸ್ಟ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗುವ ಸಾಧ್ಯತೆ ಇದೆ. 
icon

(6 / 6)

ಇತರ ಗ್ಯಾಲರಿಗಳು