ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಯುವಿಕೆಗೆ ಬಿತ್ತು ಬ್ರೇಕ್‌, ಒಟಿಟಿಗೆ ಎಂಟ್ರಿ ಕೊಟ್ಟ ಸರ್ವೈವಲ್‌ ಥ್ರಿಲ್ಲರ್‌ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ

ಕಾಯುವಿಕೆಗೆ ಬಿತ್ತು ಬ್ರೇಕ್‌, ಒಟಿಟಿಗೆ ಎಂಟ್ರಿ ಕೊಟ್ಟ ಸರ್ವೈವಲ್‌ ಥ್ರಿಲ್ಲರ್‌ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ

  • ಮಲಯಾಳಂ ಬ್ಲಾಕ್ ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಸಿನಿಮಾ  ಒಟಿಟಿಗೆ ಎಂಟ್ರಿಕೊಟ್ಟಿದೆ. ಚಿತ್ರಮಂದಿರದಲ್ಲಿ ಬರೋಬ್ಬರಿ 200 ಕೋಟಿ ರೂ. ಬಾಚಿದ ಈ ಸಿನಿಮಾಕ್ಕೆ ಒಟಿಟಿ ಪ್ರಿಯರು ಚಾತಕ ಪಕ್ಷಿಯಂತೆ ಕಾದಿದ್ದರು. ಆ ಕಾಯುವಿಕೆಗೆ ಈಗ ಬ್ರೇಕ್‌ ಬಿದ್ದಿದೆ. 

ಮಂಜುಮ್ಮೆಲ್ ಬಾಯ್ಸ್ ಮಲಯಾಳಂನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸಾರ್ವಕಾಲಿಕ ಗಳಿಕೆಯನ್ನೂ ಕಂಡಿದೆ ಈ ಸಿನಿಮಾ. ಈಗ ಬಹುದಿನಗಳ ಬಳಿಕ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.
icon

(1 / 5)

ಮಂಜುಮ್ಮೆಲ್ ಬಾಯ್ಸ್ ಚಿತ್ರವು ಇಂದು (ಮೇ 5) ಡಿಸ್ನಿ + ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರ ಕಾಣುತ್ತಿದೆ. 
icon

(2 / 5)

ಮಂಜುಮ್ಮೆಲ್ ಬಾಯ್ಸ್ ಫೆಬ್ರವರಿ 22ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಕಲೆಕ್ಷನ್ ವಿಚಾರದಲ್ಲಿ ಸುನಾಮಿಯನ್ನೇ ಸೃಷ್ಟಿಸಿ ಬರೋಬ್ಬರಿ 200 ಕೋಟಿ ರೂ.ಗಳನ್ನು ಗಳಿಸಿದ ಮೊದಲ ಮಲಯಾಳಂ ಸಿನಿಮಾ ಆಗಿ ಹೊರಹೊಮ್ಮಿತು. 
icon

(3 / 5)

ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 73 ದಿನಗಳ ನಂತರ ಈ ಚಿತ್ರವು ಇಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(4 / 5)

ಮಂಜುಮ್ಮೆಲ್ ಬಾಯ್ಸ್ ಚಿತ್ರವನ್ನು ಚಿದಂಬರಂ ನಿರ್ದೇಶಿಸಿದ್ದು, ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್ ಮತ್ತು ಅರುಣ್ ಕುರಿಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಪವಾರ ಫಿಲ್ಮ್ಸ್ ನಿರ್ಮಿಸಿದೆ ಮತ್ತು ಸುಶಿನ್ ಶ್ಯಾಮ್ ಸಂಗೀತ ನೀಡಿದ್ದಾರೆ.  
icon

(5 / 5)

IPL_Entry_Point

ಇತರ ಗ್ಯಾಲರಿಗಳು