ನೀವು ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಯಲ್ಲಿ ನೋಡಬಹುದಾದ ಐದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ವಿವರ ಇಲ್ಲಿದೆ
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಪ್ರೇಕ್ಷಕರ ಕಲ್ಪನೆಗೂ ಮೀರಿದ ತಿರುವುಗಳ ಜತೆಗೆ ನೋಡಿಸಿಕೊಂಡು ಹೋಗುತ್ತವೆ. ಆ ಪೈಕಿ ವೀಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವ ಆಯ್ದ ಐದು ಮಲಯಾಳಂ ಸಿನಿಮಾಗಳ ಮಾಹಿತಿ ಮತ್ತು ಯಾವ ಒಟಿಟಿಯಲ್ಲಿ ವೀಕ್ಷಣೆ ಎಂಬ ವಿವರ ಇಲ್ಲಿದೆ.
(1 / 5)
ಜೋರು ಜಾರ್ಜ್ ದ್ವಿಪಾತ್ರದಲ್ಲಿ ನಟಿಸಿರುವ ಮಲಯಾಳಂ ಚಿತ್ರ ಇರಟ್ಟಾ, ಕೌತುಕಮಯ ಸಿನಿಮಾ. ಕೊನೇ ವರೆಗೂ ಆ ರೋಚಕತೆಯನ್ನು ಇಮ್ಮಡಿಗೊಳಿಸುತ್ತಲೇ ಹೋಗುತ್ತದೆ. ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
(2 / 5)
ಮೋಹನ್ ಲಾಲ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಗ್ರ್ಯಾಂಡ್ ಮಾಸ್ಟರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(3 / 5)
2007ರಲ್ಲಿ ತೆರೆಗೆ ಬಂದ ಸುರೇಶ್ ಗೋಪಿ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಚಿತ್ರ ಡಿಟೆಕ್ಟಿವ್. ಊಹಿಸಲಾಗದ ತಿರುವುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು ಈ ಸಿನಿಮಾ. ಈ ಚಿತ್ರ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
(4 / 5)
ಜೋಜು ಜಾರ್ಜ್ ಅವರ ಮಲಯಾಳಂ ಚಿತ್ರ ಜೋಸೆಫ್ ಅಮೆಜಾನ್ ಪ್ರೈಮ್‌ನಲ್ಲಿ ಒಟಿಟಿ ವೀಕ್ಷಕರಿಗೆ ಲಭ್ಯವಿದೆ. ನಿವೃತ್ತ ಪೊಲೀಸ್ ಅಧಿಕಾರಿ ತನ್ನ ಮಾಜಿ ಹೆಂಡತಿಯ ಕೊಲೆಯನ್ನು ಹೇಗೆ ಬೇಧಿಸುತ್ತಾನೆ ಎಂಬ ಕಥೆ ಈ ಚಿತ್ರದಲ್ಲಿದೆ.
ಇತರ ಗ್ಯಾಲರಿಗಳು