OTT Movies: ಥಿಯೇಟರ್‌ಗಳಿಂದ ಬ್ಯಾನ್ ಆದ ಈ ಹಿಂದಿ ಸಿನಿಮಾಗಳು ಒಟಿಟಿಯಲ್ಲಿ ಲಭ್ಯ; ದಿ ಪೇಂಟೆಡ್ ಹೌಸ್‌ನಿಂದ ಪಾಂಚ್‌ವರೆಗೆ
- OTT Movies: ಕೆಲವೊಂದು ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಪಾಸ್ ಆಗದೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವುದಿಲ್ಲ. ಕೆಲವು ಸಿನಿಮಾಗಳ ವಿಷಯ, ಅಶ್ಲೀಲತೆ ಇದಕ್ಕೆ ಕಾರಣವಾಗಿರಬಹುದು. ಆದರೆ, ಒಟಿಟಿಗೆ ಅಂತಹ ಲಗಾಮ್ ಇಲ್ಲ. ಹೀಗಾಗಿ, ಚಿತ್ರಮಂದಿರಗಳಲ್ಲಿ ನೋಡಲಾಗದ ಕೆಲವು ಸಿನಿಮಾಗಳನ್ನು ವಯಸ್ಕರು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು.
- OTT Movies: ಕೆಲವೊಂದು ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಪಾಸ್ ಆಗದೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವುದಿಲ್ಲ. ಕೆಲವು ಸಿನಿಮಾಗಳ ವಿಷಯ, ಅಶ್ಲೀಲತೆ ಇದಕ್ಕೆ ಕಾರಣವಾಗಿರಬಹುದು. ಆದರೆ, ಒಟಿಟಿಗೆ ಅಂತಹ ಲಗಾಮ್ ಇಲ್ಲ. ಹೀಗಾಗಿ, ಚಿತ್ರಮಂದಿರಗಳಲ್ಲಿ ನೋಡಲಾಗದ ಕೆಲವು ಸಿನಿಮಾಗಳನ್ನು ವಯಸ್ಕರು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು.
(1 / 8)
Movies banned in India by Censor Board: ಕೆಲವು ಸಿನಿಮಾ ನಿರ್ಮಾಪಕರು ಮಾಡುವ ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆಯದಂತೆ ಇರುತ್ತದೆ. ಸೆನ್ಸಾರ್‌ನವರು ಏನು ಮಾಡಬಾರದು ಎಂದು ಹೇಳುತ್ತಾರೋ ಅದೇ ವಿಷಯಗಳು ಅಂತಹ ಚಿತ್ರಗಳಲ್ಲಿ ಇರುತ್ತವೆ. ಒಂದಲ್ಲ ಒಂದು ಕಾರಣದಿಂದ ಸೆನ್ಸಾರ್‌ನಿಂದ ಅನುಮತಿ ಪಡೆಯದ, ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳದ ಚಲನಚಿತ್ರಗಳು ಈಗಿನ ಒಟಿಟಿಯುಗದಲ್ಲಿ ಆನ್‌ಲೈನ್‌ನಲ್ಲಿ ಲಭ್ಯ ಇವೆ.
(2 / 8)
ಫೈರ್: ಶಬಾನಾ ಅಜ್ಮಿ ಮತ್ತು ನಂದಿತಾ ದಾಸ್ ಅಭಿನಯಿಸಿದ 1996 ರ ಚಲನಚಿತ್ರ ಫೈರ್ ಸಿನಿಮಾವು ಸಲಿಂಗಕಾಮಿ ದಂಪತಿಯ ಕಥೆಯಾಗಿದೆ. ಆ ಸಮಯದಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೆ, ಈಗ ನೀವು ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.
(3 / 8)
ಅನ್‌ಫ್ರೀಡಂ (Unfreedom): ಈ ಸಿನಿಮಾದಲ್ಲಿ ಲೆಸ್ಬಿಯನ್ ಕಥೆಯ ಜತೆಗೆ ಭಯೋತ್ಪಾದನೆ, ಮೂಲಭೂತವಾದಿಗಳ ವಿಷಯವೂ ಇದೆ. ರಾಜ್ ಅಮಿರ್ ಕುಮಾರ್ ನಿರ್ದೇಶಣದ ಈ ಸಿನಿಮಾ 2014ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.
(4 / 8)
ವಾಟರ್: 2005ರಲ್ಲಿ ಬಿಡುಗಡೆಯಾದ ಜಾನ್ ಅಬ್ರಹಾಂ ಮತ್ತು ಲಿಸಾ ರೇ ನಟನೆಯ'ವಾಟರ್' ಸಿನಿಮಾವೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವಲ್ಲಿ ವಿಫಲವಾಯಿತು. 1938 ರಲ್ಲಿ ಬನಾರಸ್‌ನಲ್ಲಿನ ಮಕ್ಕಳು ಮತ್ತು ವಿಧವೆಯರ ದುಃಸ್ಥಿತಿಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ. ಚಿತ್ರದ ಕಥೆ ಹೃದಯ ವಿದ್ರಾವಕವಾಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.
(5 / 8)
ಬ್ಲ್ಯಾಕ್ ಫ್ರೈಡೆ: ಅನುರಾಗ್ ಕಶ್ಯಪ್ ನಿರ್ದೇಶನದ ಬ್ಲ್ಯಾಕ್ ಫ್ರೈಡೆ 2004 ರಲ್ಲಿ ಬಿಡುಗಡೆಯಾಯಿತು. ಇದು 1993 ರ ಬಾಂಬ್ ಸ್ಫೋಟ ಮತ್ತು ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳನ್ನು ಆಧರಿಸಿದೆ. ಈ ಸಿನಿಮಾವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ವೀಕ್ಷಿಸಬಹುದು.
(6 / 8)
ಕಿಸ್ಸಾ ಕುರ್ಸಿ ಕಾ (Kissa Kursi Ka): ಈ ಸಿನಿಮಾದಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದವರ ಕುರಿತಾಗಿ ಇದೆ. ಈ ಸಿನಿಮಾದಲ್ಲಿರುವ ರಾಜಕೀಯ ಅಂಶಗಳು ಚಿತ್ರ ಬ್ಯಾನ್ ಆಗಲು ಪ್ರಮುಖ ಕಾರಣ. ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ವಿಷಯಗಳೂ ಇರುವ ಕಾರಣ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ದೊರಕಲಿಲ್ಲ. ಈ ಸಿನಿಮಾ ಯೂಟ್ಯೂಬ್‌ನಲ್ಲಿದೆ.
(7 / 8)
ದಿ ಪೇಂಟೆಡ್ ಹೌಸ್ : 2002ರಲ್ಲಿ ನಿರ್ಮಿಸಿದ ದಿ ಪೇಂಟೆಡ್ ಹೌಸ್ ಸಿನಿಮಾದಲ್ಲಿ ಲೈಂಗಿಕ ಹಿಂಸಾಚಾರದ ದೃಶ್ಯಗಳನ್ನು ತೋರಿಸಿದ್ದರಿಂದ ನಿಷೇಧಿಸಲಾಯಿತು. ಈ ಸಿನಿಮಾದಲ್ಲಿ ವಯಸ್ಕರ ದೃಶ್ಯಗಳು ಇವೆ. ಯೂಟ್ಯೂಬ್‌ನಲ್ಲಿದೆ.
ಇತರ ಗ್ಯಾಲರಿಗಳು