OTT News: ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ ಟಾಪ್ 8 ಸಿನಿಮಾ, ವೆಬ್‌ಸರಣಿಗಳ ಲಿಸ್ಟ್ ಹೀಗಿದೆ
Top 8 OTT Movies To Watch This Weekend: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ ಟಾಪ್ 8 ಸಿನಿಮಾಗಳ ಲಿಸ್ಟ್ ಇಲ್ಲಿದೆ. ಆ ಪೈಕಿ ನಟ ಅಕ್ಷಯ್ ಕುಮಾರ್ ಅವರದ್ದೇ ಎರಡು ಸಿನಿಮಾಗಳಿವೆ. ಜತೆಗೆ ಹಾರರ್ ಥ್ರಿಲ್ಲರ್ ಸಿನಿಮಾ ಸಹ ವೀಕ್ಷಣೆ ಮಾಡಬಹುದು.
(1 / 9)
ಈ ವಾರ ಸಾಕಷ್ಟು ಸಿನಿಮಾ ಮತ್ತು ವೆಬ್ ಸರಣಿಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಗಿದ್ದ 'ಸ್ತ್ರೀ 2' ಒಟಿಟಿಗೆ ಅಪ್ಪಳಿಸಿದೆ.
(2 / 9)
ಬಹುತಾರಾಗಣದ 'ಖೇಲ್ ಖೇಲ್ ಮೇ' ಒಟಿಟಿಗೆ ಎಂಟ್ರಿಕೊಟ್ಟಿದೆ. ಈ ಚಿತ್ರವು ಅಕ್ಟೋಬರ್ 9ರಿಂದ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಸ್ಯ ಪ್ರಕಾರದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ವಾಣಿ ಕಪೂರ್, ತಾಪ್ಸಿ ಪನ್ನು, ಆಮಿ ವಿರ್ಕ್ ಮತ್ತು ಫರ್ದೀನ್ ಖಾನ್ ನಟಿಸಿದ್ದಾರೆ.
(3 / 9)
ಬರುನ್ ಸೋಬ್ತಿ, ಅಂಜಲಿ ಆನಂದ್ ಮತ್ತು ಪ್ರಿಯಾ ಬಾಪಟ್ ಅಭಿನಯದ ಕಾಮಿಡಿ ಡ್ರಾಮಾ ಸಿರೀಸ್ 'ರಾತ್ ಜವಾನ್ ಹೈ' ಅಕ್ಟೋಬರ್ 11 ರಂದು ಸೋನಿ ಲೀವ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ.
(4 / 9)
ಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಹಾರರ್ ಥ್ರಿಲ್ಲರ್ ಚಿತ್ರ 'ಸ್ತ್ರೀ 2' ಅಕ್ಟೋಬರ್ 10ರಿಂದ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ.
(5 / 9)
ಅಕ್ಷಯ್ ಕುಮಾರ್ ನಟಿಸಿರುವ ಮತ್ತೊಂದು ಚಿತ್ರ ಸರ್ಫಿರಾ. ಈ ಚಿತ್ರವು ಅಕ್ಟೋಬರ್ 11ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಕ್ಷಯ್ ಕುಮಾರ್ ಅಭಿನಯದ 'ಖೇಲ್ ಖೇಲ್ ಮೇ' ಈಗಾಗಲೇ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಆರಂಭಿಸಿದೆ.
(6 / 9)
ಅಕ್ಟೋಬರ್ 11 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತಮಿಳಿನ 'ವಾಳೈ' ಸಿನಿಮಾ ಸಹ ಸ್ಟ್ರೀಮಿಂಗ್ ಆರಂಭಿಸಲಿದೆ.
(7 / 9)
ಸಿಟಾಡೆಲ್ ಫ್ರ್ಯಾಂಚೈಸ್‌ನ ಮತ್ತೊಂದು ವೆಬ್ ಸರಣಿ 'ಸಿಟಾಡೆಲ್: ಡಯಾನಾ'. ಈ ಇಟಾಲಿಯನ್ ವೆಬ್ ಸರಣಿ ಅಕ್ಟೋಬರ್ 10ರಿಂದ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ.
(8 / 9)
ಅಕ್ಟೋಬರ್ 11 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ ರೊಮ್ಯಾಂಟಿಕ್ ವೆಬ್ ಸರಣಿ 'ಲೋನ್ಲಿ ಪ್ಲಾನೆಟ್'. ಈ ಸಿನಿಮಾವನ್ನು ಕುಟುಂಬದೊಂದಿಗೆ ನೋಡುವುದು ಕಷ್ಟ.
ಇತರ ಗ್ಯಾಲರಿಗಳು