ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಟಿಟಿಗೆ ಬರಲು ರೆಡಿಯಾದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌ ಶುರು? ಹೀಗಿದೆ ಮಾಹಿತಿ

ಒಟಿಟಿಗೆ ಬರಲು ರೆಡಿಯಾದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌ ಶುರು? ಹೀಗಿದೆ ಮಾಹಿತಿ

  • ಹೇಳಿಕೊಳ್ಳುವಂಥ ಯಶಸ್ಸು ಕಾಣದ ರಣದೀಪ್‌ ಹೂಡಾ ನಟಿಸಿ, ನಿರ್ದೇಶಿಸಿದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರ, ಮಾರ್ಚ್‌ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬಂದರೂ, ಹೆಚ್ಚು ದಿನ ನೆಲೆ ನಿಲ್ಲಲಿಲ್ಲ. ಈಗ ಇದೇ ಸಿನಿಮಾ ಸಾವರ್ಕರ್‌ ಜಯಂತಿ ಪ್ರಯುಕ್ತ ಒಟಿಟಿಗೆ ಆಗಮಿಸುತ್ತಿದೆ. 

ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಚಿತ್ರಮಂದಿರಕ್ಕೆ ಬಂದಿತ್ತು ಬಾಲಿವುಡ್‌ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ. ಅಂದರೆ ಮಾರ್ಚ್ 22ರಂದು ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. 
icon

(1 / 6)

ಚಿತ್ರದಲ್ಲಿ ರಣದೀಪ್ ಹೂಡಾ ರಾಜಕಾರಣಿ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ನೋಡುಗರನ್ನು ಸೆಳೆದಿದ್ದರು. ಬರೀ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಅವರಿಗಿದು ಮೊದಲ ಸಿನಿಮಾವಾಗಿತ್ತು. 
icon

(2 / 6)

ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ, ಇದೂ ಸಹ ಪ್ರಾಪಗಂಡ (ಪ್ರಚಾರಾಂದೋಲನ) ಚಿತ್ರ ಎಂದೇ ಬಿಂಬಿತವಾಗಿತ್ತು. ಅಷ್ಟೇನೂ ಹೈಪ್‌ ಸೃಷ್ಟಿಸದ ಈ ಚಿತ್ರ, ಸುದೀರ್ಘ ಹೋರಾಟದ ಬಳಿಕ ಚಿತ್ರಮಂದಿರಕ್ಕೆ ಬಂದಿತ್ತು. ಹಾಗೆ ಬಂದ ಈ ಸಿನಿಮಾ ಗಳಿಕೆ ವಿಚಾರದಲ್ಲಿ ಎರಡಂಕಿಯನ್ನೂ ದಾಟಲಿಲ್ಲ. 
icon

(3 / 6)

ಮೊದಲ ದಿನ ಕೇವಲ 1 ಕೋಟಿ 15 ಲಕ್ಷ ಗಳಿಕೆ ಕಂಡ ಈ ಸಿನಿಮಾ, ನೋಡುಗರಿಂದ ಮೆಚ್ಚುಗೆ ಮತ್ತು ಪಾಸಿಟಿವ್‌ ವಿಮರ್ಶೆ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಹಿಂದುಳಿದಿತ್ತು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಆಗಮಿಸಿದೆ. 
icon

(4 / 6)

ಇದಕ್ಕೂ ಮೊದಲು ಪ್ರಚಾರಾಂದೋಲನದ ಸಿನಿಮಾ ಎಂದೇ ಬಿಂಬಿತವಾಗಿ ಸದ್ದು ಮಾಡಿದ್ದ ದಿ ಕಾಶ್ಮೀರ್‌ ಫೈಲ್ಸ್‌ ಮತ್ತು ದಿ ಕೇರಳ ಸ್ಟೋರಿ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಆದರೆ, ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಮಾತ್ರ ಆ ಸಾಲಿಗೆ ಸೇರಲಿಲ್ಲ. 
icon

(5 / 6)

ಇದೀಗ ಜೀ5 ಒಟಿಟಿಯಲ್ಲಿ ಮೇ 28ರಂದು ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ವಿಶೇಷ ಏನೆಂದರೆ ಮೇ 28, ವಿನಾಯಕ ದಾಮೋದರ್ ಸಾವರ್ಕರ್ ಅವರ 141ನೇ ಜಯಂತಿ. ಈ ನಿಮಿತ್ತ ಚಿತ್ರದ ಸ್ಟ್ರೀಮಿಂಗ್‌ ಮಾಡಲು ಮುಂದಾಗಿದೆ ಜೀ 5.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು