ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಸೀಸನ್-2 ಬಿಡುಗಡೆ ದಿನಾಂಕ ಪ್ರಕಟ; ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್
- ಒಟಿಟಿ ಪ್ರಿಯರನ್ನು ಸೆಳೆದಿರುವ ಅತ್ಯಂತ ಜನಪ್ರಿಯ ಸೀರಿಸ್ ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್‌ನ ಎರಡನೇ ಸೀಸನ್ ಟೀಸರ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
- ಒಟಿಟಿ ಪ್ರಿಯರನ್ನು ಸೆಳೆದಿರುವ ಅತ್ಯಂತ ಜನಪ್ರಿಯ ಸೀರಿಸ್ ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್‌ನ ಎರಡನೇ ಸೀಸನ್ ಟೀಸರ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
(1 / 7)
ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಎನ್ನುವುದು ಅಮೆಜಾನ್ ಪ್ರೈಮ್ ವೀಡಿಯೋದ ಅತ್ಯುನ್ನತ ಒರಿಜಿನಲ್ ಸಿರೀಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಪಡೆದಿದೆ ಎಂದ ಅಮೆಜಾನ್ ಪ್ರೈಮ್ ತಿಳಿಸಿದೆ.
(2 / 7)
ಎರಡನೇ ಸೀಸನ್ ಯಾವಾಗ?: 2024 ಆಗಸ್ಟ್ 29 ರಂದು ಎರಡನೇ ಸೀಸನ್ ಜಾಗತಿಕವಾಗಿ ಅನಾವರಣಗೊಳ್ಳಲಿದೆ ಎಂದು ಪ್ರೈಮ್ ವೀಡಿಯೋ ಘೋಷಿಸಿದೆ. ಇದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಹಲವು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದೆ.
(3 / 7)
ಅದ್ಭುತ ಹೊಸ ಸೀಸನ್‌ನ ಟೀಸರ್ ಅನಾವರಣಗೊಳಿಸಲಾಗಿದೆ. ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್ ಪಾತ್ರದಲ್ಲಿ ಚಾರ್ಲಿ ವಿಕರ್ಸ್ ವಾಪಸ್ ಬರುವುದನ್ನು ಈ ಟೀಸರ್ ಬಹಿರಂಗಪಡಿಸಿದೆ. ಈ ಬಾರಿ ಅವರು ವಿಭಿನ್ನ ರೂಪದಲ್ಲಿ ಆಗಮಿಸಲಿದ್ದಾರೆ.
(4 / 7)
ಈ ಟೀಸರ್ ಪ್ರೇಕ್ಷಕರನ್ನು ಹೊಸ ಪಯಣವೊಂದಕ್ಕೆ ಕರೆದೊಯ್ದಿದೆ. ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿ ಈ ಟೀಸರ್‌ನಲ್ಲಿ ಕಾಣಿಸಿದೆ.
(5 / 7)
ದೃಶ್ಯ ವೈಭವಕ್ಕೆ ಹೆಸರಾಗಿರುವ ಈ ಸಿರೀಸ್, ಅತ್ಯಂತ ಜನಪ್ರಿಯವಾದ ಹಲವು ಪಾತ್ರಗಳನ್ನು ಒಳಗೊಳ್ಳಲಿದೆ. ಗ್ಯಾಲಾಡ್ರಿಯೆಲ್, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್ ಮುಂತಾದ ಪಾತ್ರದಾರಿಗಳು ಇದ್ದಾರೆ.
(6 / 7)
ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಎರಡನೇ ಸೀಸನ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರೈಮ್ ವೀಡಿಯೋದಲ್ಲಿ ಲಭ್ಯವಿರಲಿದೆ.
ಇತರ ಗ್ಯಾಲರಿಗಳು