OTT Movies: ಕರ್ನಾಟಕ ಬಂದ್‌ಗೆ ಮನೆಯಲ್ಲಿ ಏನ್ಮಾಡ್ತಿರಾ, ಒಟಿಟಿಯಲ್ಲಿ ಈ 8 ಕನ್ನಡ ಸಿನಿಮಾಗಳನ್ನು ನೋಡುವಿರ, ಪರಿಶೀಲಿಸಿ
- OTT Movies Kannada: ಕರ್ನಾಟಕ ಬಂದ್ ಸಮಯದಲ್ಲಿ ಮನೆಯಿಂದ ಹೊರಕ್ಕೆ ಹೋಗದೆ ಏನು ಮಾಡುವುದೆಂದು ಯೋಚಿಸುವವರು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಝೀ5 ಮುಂತಾದ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಈ 8 ಸಿನಿಮಾಗಳನ್ನು ನೋಡಬಹುದು. ಇವುಗಳಲ್ಲಿ ಕೆಲವು ಕನ್ನಡ ಮೂಲದ ಸಿನಿಮಾಗಳಾದರೆ ಇನ್ನು ಕೆಲವು ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ.
- OTT Movies Kannada: ಕರ್ನಾಟಕ ಬಂದ್ ಸಮಯದಲ್ಲಿ ಮನೆಯಿಂದ ಹೊರಕ್ಕೆ ಹೋಗದೆ ಏನು ಮಾಡುವುದೆಂದು ಯೋಚಿಸುವವರು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಝೀ5 ಮುಂತಾದ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಈ 8 ಸಿನಿಮಾಗಳನ್ನು ನೋಡಬಹುದು. ಇವುಗಳಲ್ಲಿ ಕೆಲವು ಕನ್ನಡ ಮೂಲದ ಸಿನಿಮಾಗಳಾದರೆ ಇನ್ನು ಕೆಲವು ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ.
(1 / 8)
ಜೈಲರ್: ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ನಡೆಯುವ ಸಮಯದಲ್ಲಿ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಇದು ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಇದರಲ್ಲಿ ಸ್ಯಾಂಡಲ್‌ವುಡ್‌ನ ಶಿವರಾಜ್ ಕುಮಾರ್ ನಟಿಸಿದ್ದು, ಜೈಲರ್ ಇನ್ನೂ ನೋಡಿಲ್ಲವೆಂದಾದರೆ ನೋಡಿ. ಇದನ್ನು ಕನ್ನಡ ಭಾಷೆಯಲ್ಲಿಯೂ ನೋಡಬಹುದು.
(2 / 8)
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ: ಕನ್ನಡದ ಕ್ಯಾಂಪಸ್ ಕಾಮಿಡಿ ಸ್ಟೋರಿಯು ಒಟಿಟಿಯಲ್ಲಿದ್ದು, ಕರ್ನಾಟಕ ಬಂದ್ ಸಮಯದಲ್ಲಿ ಮನೆಯಲ್ಲಿದ್ದುಕೊಂಡು ನೋಡಬಹುದು. ಇದು ಝೀ5 ಚಾನೆಲ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
(3 / 8)
ಆದಿಪುರುಷ್: ರಾಮಾಯಣ ಆಧರಿತ ಆದಿಪುರುಷ್ ಸಿನಿಮಾವನ್ನು ಇನ್ನೂ ನೋಡಿಲ್ಲವೆಂದಾದರೆ ಈ ಕರ್ನಾಟಕ ಬಂದ್ ಸಮಯದಲ್ಲಿ ನೋಡಿ ಮುಗಿಸಬಹುದು. ಆದರೆ, ಈ ಸಿನಿಮಾಕ್ಕೆ ಐಎಂಬಿಡಿಯಲ್ಲಿ 3.8 ರೇಟಿಂಗ್ ದೊರಕಿದೆ ಎನ್ನುವುದು ನೆನಪಿರಲಿ. ಇದು ಕನ್ನಡ ಅವತರಣಿಕೆಯಲ್ಲೂ ಲಭ್ಯ.
(4 / 8)
ಮಾಮಾನನ್: ಕಾವೇರಿ ನೀರು ಹಂಚಿಕೆ ವಿರುದ್ಧದ ಹೋರಾಟದ ಸಮಯದಲ್ಲಿ ತಮಿಳು ಮೂವಿ ಒಟಿಟಿಯಲ್ಲಿ ನೋಡಲು ಬಯಸಿದರೆ ಮಾಮಾನನ್ ಎಂಬ ವಡಿ ವೇಲು ಸಿನಿಮಾ ನೋಡಬಹುದು. ಇದು ನೆಟ್‌ಫ್ಲಿಕ್ಸ್‌ನಲ್ಲಿದೆ. ಕನ್ನಡ ಭಾಷೆಯಲ್ಲಿಯೂ ಈ ಸಿನಿಮಾ ನೋಡಬಹುದು.
(5 / 8)
ತಂದತ್ತಿ (Thandatti): ತಂದತ್ತಿ ಎಂಬ ತಮಿಳು ಸಿನಿಮಾ ಕೂಡ ಉತ್ತಮವಾಗಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು. ಇದು ಕೂಡ ಕನ್ನಡ ಭಾಷೆಯಲ್ಲಿ ಲಭ್ಯ.
(6 / 8)
ಶಿವಾಜಿ ಸುರತ್ಕಲ್: ಬೇರೆ ಭಾಷೆಯ ಚಿತ್ರ ನೋಡುವುದೇಕೆ ಕನ್ನಡ ಸಿನಿಮಾ ನೋಡ್ತಿವಿ ಅನ್ನುವವರು ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಸಿನಿಮಾ ನೋಡಬಹುದು. ಇದು ಒಟಿಟಿಯಲ್ಲಿ ರಿಲೀಸ್ ಆಗಿ ಕೆಲವು ಸಮಯವಾಗಿದೆ. ಇನ್ನೂ ನೋಡಿಲ್ಲವೆಂದಾರೆ ಝೀ5ಯಲ್ಲಿ ಇಂದೇ ನೋಡಿ.
(7 / 8)
ನಾನು ರೌಡಿ: ಬೆಂಗಳೂರು ನಗರದ ರೌಡಿಯಿಸಂ ಸ್ಟೋರಿ ಇರುವ ಈ ಸಿನಿಮಾ ಕೂಡ ನಿಮಗೆ ಇಷ್ಟವಾಗಬಹುದು. ಇದು ಸಿನಿಬಜಾರ್ ಒಟಿಟಿಯಲ್ಲಿ ಲಭ್ಯ.
ಇತರ ಗ್ಯಾಲರಿಗಳು