ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳದ್ದೇ ಅಬ್ಬರ, ಇಲ್ಲಿವೆ ನೋಡಿ ಟಾಪ್ 5 ಚಿತ್ರಗಳ ವಿವರ
ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಆಗಮನವಾಗಲಿದೆ. ಅದರಲ್ಲಿ ಮಲಯಾಳಂನ ಬ್ಲಾಕ್‌ಬಸ್ಟರ್ ಹಿಟ್ ʻತುಡರಮ್ʼ ಸಹ ಒಟಿಟಿಗೆ ಬರಲಿದೆ. ಅಮೆಜಾನ್ ಪ್ರೈಂ, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ಗೆ ಬರಲಿರುವ 5 ಸಿನಿಮಾಗಳು ಹೀಗಿವೆ.
(1 / 6)
ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಆಗಮನವಾಗಲಿದೆ. ಅದರಲ್ಲಿ ಮಲಯಾಳಂನ ಬ್ಲಾಕ್‌ಬಸ್ಟರ್ ಹಿಟ್ ʻತುಡರಮ್ʼ ಸಹ ಒಟಿಟಿಗೆ ಬರಲಿದೆ.
(2 / 6)
ತುಡರುಮ್: ಮಲಯಾಳಂ ಸ್ಟಾರ್ ಮೋಹನ್‌ಲಾಲ್ ನಟಿಸಿರುವ ʻತುಡರುಮ್ʼ ಸಿನಿಮಾ ಹಿಟ್ ಆಗಿದೆ. ತರುಣ್ ಮೂರ್ತಿ ನಿರ್ದೇಶಿಸಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರ, ಏಪ್ರಿಲ್ 26ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. 28 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ, 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಕ್ಸಸ್ ಆಗಿದೆ. ಈ ಸಿನಿಮಾ ಜೂನ್‌ನಲ್ಲಿ ಜಿಯೋ ಹಾಟ್‌ಸ್ಟಾರ್ ಒಟಿಟಿಗೆ ಬರುವ ಸಾಧ್ಯತೆ ಇದೆ.
(3 / 6)
ಟೂರಿಸ್ಟ್ ಫ್ಯಾಮಿಲಿ: ಕಾಲಿವುಡ್‌ನ ʻಟೂರಿಸ್ಟ್ ಫ್ಯಾಮಿಲಿʼ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಶಿಕುಮಾರ್ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 16 ಕೋಟಿ ಬಜೆಟ್‌ನಲ್ಲಿ ಮೂಡಿಬಂದ ಈ ಸಿನಿಮಾ 75 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಅಭಿಷಾನ್ ಜೀವಂತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜೂನ್ ಮೊದಲ ವಾರದಲ್ಲಿ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿಈ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.
(4 / 6)
ಅಲಪ್ಪುಝ ಜಿಂಖಾನಾ: ಮಲಯಾಳಂ ಸ್ಪೋರ್ಟ್ಸ್ ಕಾಮಿಡಿ ‘ಅಲಪ್ಪುಝ ಜಿಂಖಾನಾ’ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡ ಸಿನಿಮಾ. ನೆಸ್ಲನ್ ಗಫೂರ್ ನಟಿಸಿರುವ ಈ ಚಿತ್ರ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾವನ್ನು ಖಾಲಿದ್ ರಹಮಾನ್ ನಿರ್ದೇಶನ ಮಾಡಿದ್ದಾರೆ. ಜೂನ್‌ನಲ್ಲಿ ಸೋನಿಲಿವ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
(5 / 6)
ರೆಟ್ರೋ: ತಮಿಳು ಹೀರೋ ಸೂರ್ಯ ನಟಿಸಿರುವ ರೆಟ್ರೋ ಚಿತ್ರ ಮೇ 1ರಂದು ಬಿಡುಗಡೆಯಾಯಿತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿರುವ ಈ ಚಿತ್ರ 70 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಜೂನ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
(6 / 6)
ಸಿಂಗಲ್: ಶ್ರೀ ವಿಷ್ಣು ನಟಿಸಿರುವ ತೆಲುಗು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಸಿಂಗಲ್’ ಚಿತ್ರ ಮೇ 9ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. 10 ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಾರ್ತಿಕ್ ರಾಜು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜೂನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಇತರ ಗ್ಯಾಲರಿಗಳು