OTT Releases: ನೀವು ಹಾರರ್ ಪ್ರಿಯರಾಗಿದ್ರೆ, ಇಲ್ಲಿದೆ ಬೆಚ್ಚಿ ಬೀಳಿಸುವ ವೆಬ್‌ಸಿರೀಸ್; ಹೀಗಿದೆ ಬಿಡುಗಡೆ ದಿನಾಂಕ
- OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅದರಲ್ಲೂ ಭಯ ಹುಟ್ಟಿಸುವ ಖೌಫ್ ವೆಬ್ ಸಿರೀಸ್ ಈಗಾಗಲೇ ಟ್ರೇಲರ್ ಮೂಲಕವೇ ನೋಡುಗರನ್ನು ಹೆದರಿಸಿದೆ. ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತ ಮಾಹಿತಿ ಇಲ್ಲಿದೆ.
- OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅದರಲ್ಲೂ ಭಯ ಹುಟ್ಟಿಸುವ ಖೌಫ್ ವೆಬ್ ಸಿರೀಸ್ ಈಗಾಗಲೇ ಟ್ರೇಲರ್ ಮೂಲಕವೇ ನೋಡುಗರನ್ನು ಹೆದರಿಸಿದೆ. ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತ ಮಾಹಿತಿ ಇಲ್ಲಿದೆ.
(1 / 7)
OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅದರಲ್ಲೂ ಭಯ ಹುಟ್ಟಿಸುವ ಖೌಫ್ ವೆಬ್ ಸಿರೀಸ್ ಈಗಾಗಲೇ ಟ್ರೇಲರ್ ಮೂಲಕವೇ ನೋಡುಗರನ್ನು ಹೆದರಿಸಿದೆ. ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತ ಮಾಹಿತಿ ಇಲ್ಲಿದೆ.
(2 / 7)
ದಿ ಲಾಸ್ಟ್ ಆಫ್ ಅಸ್ ಸೀಸನ್ 2: ಏಪ್ರಿಲ್ 14ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸಿರೀಸ್ ಸ್ಟ್ರೀಮಿಂಗ್ ಆರಂಭಿಸಲಿದೆ. ಫಂಗಲ್ ಇನ್‌ಫೆಕ್ಷನ್ ಹಿನ್ನೆಲೆಯಲ್ಲಿ ಈ ಸಿರೀಸ್ ಸಾಗಲಿದೆ. ಈ ಸಿರೀಸ್ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
(3 / 7)
ಖೌಫ್: ಮಹಿಳಾ ಹಾಸ್ಟೆಲ್‌ನಲ್ಲಿ ನಡೆಯುವ ಸಸ್ಪೆನ್ಸ್‌ಫುಲ್ ಹಾರರ್ ಡ್ರಾಮಾ ಸಿರೀಸ್ ಈ ಖೌಫ್. ಸ್ಮಿತಾ ಸಿಂಗ್ ನಿರ್ದೇಶನದ ಈ ವೆಬ್‌ಸಿರೀಸ್ ಸದ್ಯ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿದೆ. ಸೂಕ್ಷ್ಮ ಮನಸ್ಸಿನವರಿಗೆ ಈ ಸೀರಿಸ್ ಭಯ ಹುಟ್ಟಿಸುವುದು ಗ್ಯಾರಂಟಿ. ಏಪ್ರಿಲ್ 18ರಿಂದ ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.
(4 / 7)
ಲಾಗೌಟ್: ಸೈಬರ್ ಕ್ರೈಂ ಹಿನ್ನೆಲೆಯ ಈ ಸಿನಿಮಾ, ಏಪ್ರಿಲ್ 18ರಿಂದ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ವೊಬ್ಬನ ಸುತ್ತ ಇಡೀ ಸಿನಿಮಾ ಸುತ್ತಲಿದೆ.
(5 / 7)
ದಾವೀದ್: ಗೋವಿಂದ್ ವಿಷ್ಣು ನಿರ್ದೇಶನದ ಮಲಯಾಳಂನ ದಾವೀದ್ ಸಿನಿಮಾ ಇದೀಗ ಒಟಿಟಿ ಪ್ಲೇ ಪ್ರೀಮಿಯಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಬೌನ್ಸರ್‌ವೊಬ್ಬನ ಜೀವನದ ಏರಿಳಿತಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿದ್ದಾರೆ. ಏಪ್ರಿಲ್ 18ರಿಂದ ಪ್ರಸಾರ ಕಾಣಲಿದೆ.
(6 / 7)
ಸೋತ್ಯಿ ಬೊಲೆ ಸೋತ್ಯಿ ಕಿಚ್ಚು ನೆಯ್: ಸೋತ್ಯಿ ಬೊಲೆ ಸೋತ್ಯಿ ಕಿಚ್ಚು ನೆಯ್ ಹೆಸರಿನ ಬೆಂಗಾಲಿ ಸಿನಿಮಾ ಏಪ್ರಿಲ್ 18ರಿಂದ hoichoi ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ.
ಇತರ ಗ್ಯಾಲರಿಗಳು