ಒಟಿಟಿ ವೀಕ್ಷಕರಿಗೆ ಸೂಪರ್ ವಾರವಿದು; ಒಟಿಟಿಗೆ ಬಂದ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳ ವಿವರ ಇಲ್ಲಿದೆ
- ಒಟಿಟಿ ವೀಕ್ಷಕರಿಗೆ ಈ ವಾರ ಸೂಪರ್ ವಾರವಾಗಲಿದೆ. ಏಕೆಂದರೆ ಚಿತ್ರಮಂದಿರಗಳಲ್ಲಿ ತೆರೆಕಂಡು ಒಂದು ಹೊಸ ದಾಖಲೆ ಸೃಷ್ಟಿಸಿರುವ ಸಿನಿಮಾಗಳು, ಈ ವಾರ ಹಲವು ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ.
- ಒಟಿಟಿ ವೀಕ್ಷಕರಿಗೆ ಈ ವಾರ ಸೂಪರ್ ವಾರವಾಗಲಿದೆ. ಏಕೆಂದರೆ ಚಿತ್ರಮಂದಿರಗಳಲ್ಲಿ ತೆರೆಕಂಡು ಒಂದು ಹೊಸ ದಾಖಲೆ ಸೃಷ್ಟಿಸಿರುವ ಸಿನಿಮಾಗಳು, ಈ ವಾರ ಹಲವು ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ.
(1 / 8)
ಮಲಯಾಳಂನ ʻಎಲ್2; ಎಂಪುರಾನ್ʼ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಚಿಯಾನ್ ವಿಕ್ರಮ್ ನಟನೆಯ ಚಿತ್ರವೂ ಸಹ ಸ್ಟ್ರೀಮಿಂಗ್‌ಗೆ ಬರಲಿದೆ. ಈ ವಾರ ಡಿಜಿಟಲ್ ವೇದಿಕೆ ಪ್ರವೇಶಿಸಲಿರುವ 6 ಸಿನಿಮಾಗಳ ವಿವರ ಹೀಗಿದೆ.
(2 / 8)
ವೀರ ಧೀರ ಸೂರನ್: ಕಾಲಿವುಡ್ ನಟ ಚಿಯಾನ್ ವಿಕ್ರಮ್ ನಟನೆಯ ʻವೀರ ಧೀರ ಸೂರನ್: ಪಾರ್ಟ್ 2ʼ ಚಿತ್ರವು ಏಪ್ರಿಲ್ 24ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಪ್ರಸಾರವಾಗಲಿದೆ. ತಮಿಳು ಜೊತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ವೀಕ್ಷಿಸಬಹುದು. ಅರುಣ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
(3 / 8)
ಎಲ್2; ಎಂಪುರಾನ್: ಮಾಲಿವುಡ್ ನಟ ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಎಲ್2; ಎಂಪುರಾನ್ ಸಿನಿಮಾ ಏಪ್ರಿಲ್ 24ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರಕ್ಕೆ ಪೃಥ್ವಿರಾಜ್ ನಿರ್ದೇಶನ ಮಾಡಿದ್ದಾರೆ. ಮಲಯಾಳಿ ಭಾಷೆಯ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಸ್ಟ್ರೀಮ್ ಆಗಲಿದೆ.
(4 / 8)
ಮ್ಯಾಡ್ ಸ್ಕ್ವೇರ್: ಟಾಲಿವುಡ್‌ನ ಮ್ಯಾಡ್ ಸ್ಕ್ವೇರ್ ಸಿನಿಮಾ ಏಪ್ರಿಲ್ 25 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸಂಗೀತ್ ಶೋಭನ್, ನಾರ್ನೆ ನಿತಿನ್, ರಾಮ್ ನಿತಿನ್ ಮತ್ತು ವಿಷ್ಣು ಓಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಲ್ಯಾಣ್ ಶಂಕರ್ ನಿರ್ದೇಶನ ಮಾಡಿದ್ದಾರೆ.
(5 / 8)
ಸೂಪರ್ ಬಾಯ್ಸ್ ಆಫ್ ಮಾಲೇಂಗಾವ್: ಸೂಪರ್ ಬಾಯ್ಸ್ ಆಫ್ ಮಾಲೇಂಗಾವ್ ಚಿತ್ರ ಏಪ್ರಿಲ್ 25ರಂದು ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಆದರ್ಶ್ ಗೌರವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಏಪ್ರಿಲ್ 25ರಂದು ಎಲ್ಲ ಪ್ರೈಂ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗಲಿದೆ. ಈ ಸಿನಿಮಾಕ್ಕೆ ರೀಮಾ ಕಾಗ್ತಿ ನಿರ್ದೇಶನ ಮಾಡಿದ್ದಾರೆ.
(6 / 8)
ಜುವೆಲ್ ಥೀಫ್: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಜುವೆಲ್ ಥೀಫ್ ಸಿನಿಮಾ ಏಪ್ರಿಲ್ 25ರಂದು ನೇರವಾಗಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸೈಫ್ ಅಲಿ ಖಾನ್ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಹಿಂದಿ ಆಕ್ಷನ್ ಥ್ರಿಲ್ಲರ್ ಚಿತ್ರ ಕನ್ನಡದಲ್ಲಿಯೂ ಡಬ್ ಆಗಿ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆ ಇದೆ.
(7 / 8)
ಕ್ರೇಜಿ: ಬಾಲಿವುಡ್ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಕ್ರೇಜಿ ಸಿನಿಮಾ ಏಪ್ರಿಲ್ 25ರಂದು ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕ್ರೇಜಿ ಚಿತ್ರಕ್ಕೆ ಗಿರೀಶ್ ಕೊಹ್ಲಿ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 28ರಂದು ಈ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ.
ಇತರ ಗ್ಯಾಲರಿಗಳು