ಮೇ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಮನರಂಜನೆ; ಸಲ್ಮಾನ್ ಖಾನ್ ಚಿತ್ರ ಸೇರಿ ಒಟಿಟಿಗೆ ಬರ್ತಿದೆ 8 ಸಿನಿಮಾ, ವೆಬ್‌ಸರಣಿಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಮನರಂಜನೆ; ಸಲ್ಮಾನ್ ಖಾನ್ ಚಿತ್ರ ಸೇರಿ ಒಟಿಟಿಗೆ ಬರ್ತಿದೆ 8 ಸಿನಿಮಾ, ವೆಬ್‌ಸರಣಿಗಳು

ಮೇ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಮನರಂಜನೆ; ಸಲ್ಮಾನ್ ಖಾನ್ ಚಿತ್ರ ಸೇರಿ ಒಟಿಟಿಗೆ ಬರ್ತಿದೆ 8 ಸಿನಿಮಾ, ವೆಬ್‌ಸರಣಿಗಳು

ಸಿನಿ ಪ್ರಿಯರಿಗೆ ಮೇ ತಿಂಗಳಲ್ಲಿ ದುಪ್ಪಟ್ಟಾಗಲಿದೆ ಮನರಂಜನೆ. ಕ್ರೈಮ್ ಥ್ರಿಲ್ಲರ್‌ನಿಂದ ಫ್ಯಾಮಿಲಿ ಡ್ರಾಮಾವರೆಗೆ ಒಟ್ಟು 8 ಸಿನಿಮಾ ಹಾಗೂ ವೆಬ್‌ ಸರಣಿಗಳು ಬಿಡುಗಡೆಯಾಗಲಿವೆ. ಇದರಲ್ಲಿ ಸಲ್ಮಾನ್ ಖಾನ್ ಚಿತ್ರವೂ ಸೇರಿದೆ.

ಮೇ ತಿಂಗಳು ವಾರಾಂತ್ಯವನ್ನು ಹೇಗೆ ಕಳೆಯೋದು ಅನ್ನೋ ಚಿಂತೆ ಬಿಡಿ. ಮನೆಯಲ್ಲಿ ಕೂತು ಸಿನಿಮಾ, ವೆಬ್‌ ಸರಣಿ ನೋಡುತ್ತಾ ಟೈಮ್‌ಪಾಸ್ ಮಾಡಬಹುದು. ಈ ತಿಂಗಳಲ್ಲಿ ಬರೋಬ್ಬರಿ 8 ಸಿನಿಮಾ ಹಾಗೂ ವೆಬ್‌ಸರಣಿಗಳು ಬಿಡುಗಡೆಯಾಗಲಿವೆ. ಹಾಗಾದರೆ ಯಾವೆಲ್ಲಾ ಸಿನಿಮಾ, ವೆಬ್‌ಸಿರೀಸ್ ಒಟಿಟಿಗೆ ಬರ್ತಿದೆ ನೋಡಿ.
icon

(1 / 9)

ಕೋಸ್ಟಾವೊ: ನವಾಜುದ್ದೀನ್ ಸಿದ್ದಿಕಿ ನಾಯಕನಾಗಿ ನಟಿಸಿರುವ ಚಿತ್ರ ‘ಕೋಸ್ಟಾವೊ‘. ಈ ಸಿನಿಮಾದಲ್ಲಿ ನವಾಜ್ ಕಸ್ಟಮ್ಸ್ ಅಧಿಕಾರಿ ಕೋಸ್ಟಾವೊ ಫೆರ್ನಾಂಡಿಸ್ ಪಾತ್ರವನ್ನು ಮಾಡಿದ್ದಾರೆ. ಇದೊಂದು ಕ್ರೈಂ ಆಧಾರಿತ ಸಿನಿಮಾ. ಇದು ಮೇ 01 ರಿಂದ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಸ್ಟ್ರೀಮ್ ಆಗಲಿದೆ.
icon

(2 / 9)

ಅನದರ್ ಸಿಂಪಲ್ ಫ್ಲೇವರ್: ಇದು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ. ಮೇ 1 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಕಪಟ ಹಾಸ್ಯ ಆಧಾರಿತ ಸಿನಿಮಾ ಇದಾಗಿದೆ.
icon

(3 / 9)

‘ಕುಲ್: ದಿ ಲೆಗಸಿ ಆಫ್ ರೇಜಿಂಗ್ ಬುಲ್ಸ್‘: ನಿಮ್ರತ್ ಕೌರ್, ರಿದ್ಧಿ ಡೋಗ್ರಾ, ಅಮೋಲ್ ಪರಾಶರ್, ಗೌರವ್ ಅರೋರಾ, ರೋಹಿತ್ ತಿವಾರಿ ಮತ್ತು ರಾಹುಲ್ ವೋಹ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವೆಬ್ ಸರಣಿ ಇದು. ಏಕ್ತಾ ಕಪೂರ್‌, ಶೋಭಾ ಕಪೂರ್‌ ಬಾಲಾಜಿ ಡಿಜಿಟಲ್‌ ಬ್ಯಾನ್ಸರ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಈ ಸರಣಿಯು ಮೇ 2 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಲಿದೆ.
icon

(4 / 9)

ಬ್ಲ್ಯಾಕ್ ವೈಟ್ ಅಂಡ್ ಗ್ರೇ: ಲವ್ ಕಿಲ್ಸ್‌: ಕೋಟ ಫ್ಯಾಕ್ಟರಿ ಸರಣಿಯ ನಾಯಕ ಮಯೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಇನ್ನೊಂದು ಸರಣಿ ಬ್ಲ್ಯಾಕ್ ವೈಟ್ ಅಂಡ್ ಗ್ರೇ: ಲವ್ ಕಿಲ್ಸ್‌. ಇದೊಂದು ಕ್ರೈಮ್ ಥ್ರಿಲ್ಲರ್ ಸರಣಿಯಾಗಿದೆ. ಇದು ಮೇ 2 ರಿಂದ ಸೋನಿ ಲಿವ್‌ನಲ್ಲಿ ಪ್ರಸಾರವಾಗಲಿದೆ.
icon

(5 / 9)

ದಿ ರಾಯಲ್ಸ್: ಈ ಸರಣಿಯಲ್ಲಿ ಇಶಾನ್ ಖಟ್ಟರ್, ಭೂಮಿ ಪೆಡ್ನೇಕರ್, ಸಾಕ್ಷಿ ತನ್ವರ್, ಜೀನತ್ ಅಮನ್, ನೋರಾ ಫತೇಹಿ, ಮಿಲಿಂದ್ ಸೋಮನ್, ಡಿನೋ ಮೋರಿಯಾ ಮತ್ತು ಚಂಕಿ ಪಾಂಡೆ ನಟಿಸಿದ್ದಾರೆ. ಇದು ಮೇ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
icon

(6 / 9)

ದಿ ಡಿಪ್ಲೊಮ್ಯಾಟ್: ಮಾರ್ಚ್ 14 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ ದಿ ಡಿಪ್ಲೊಮ್ಯಾಟ್ ಸಿನಿಮಾದಲ್ಲಿ ಜಾನ್ ಅಬ್ರಾಹಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮೇ 9 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
icon

(7 / 9)

ಹೇ ಜುನೂನ್‌ ಡ್ರೀಮ್‌ ಡೇರ್ ಡಾಮಿನೇಟ್‌: ಇದೊಂದು ಮ್ಯೂಸಿಕಲ್ ವೆಬ್‌ ಸಿರೀಸ್‌. ನೀಲ್ ನಿತಿನ್ ಮುಖೇಶ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ಮೇ 16 ರಿಂದ ನೀವೂ ವೀಕ್ಷಿಸಬಹುದು.
icon

(8 / 9)

ಸಿಕಂದರ್‌: ಸಲ್ಮಾನ್ ಖಾನ್ ನಟನೆಯ ‘ಸಿಕಂದರ್‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಮೇ 30 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು