OTT Top 5 Movies This week: ಒಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಲಿರುವ ಟಾಪ್‌ 5 ಮಸ್ಟ್‌ ವಾಚ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Top 5 Movies This Week: ಒಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಲಿರುವ ಟಾಪ್‌ 5 ಮಸ್ಟ್‌ ವಾಚ್‌ ಸಿನಿಮಾಗಳಿವು

OTT Top 5 Movies This week: ಒಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಲಿರುವ ಟಾಪ್‌ 5 ಮಸ್ಟ್‌ ವಾಚ್‌ ಸಿನಿಮಾಗಳಿವು

  • Top 5 OTT Releases This Week: ಈಗಾಗಲೇ ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಒಂದಷ್ಟು ಸಿನಿಮಾಗಳೂ ಈ ವಾರ (ನ. 8) ಒಟಿಟಿಗೆ ಆಗಮಿಸುತ್ತಿವೆ. ಇಲ್ಲಿವೆ ನೋಡಿ ಟಾಪ್‌ 5 ಸಿನಿಮಾಗಳು.

ಈ ವಾರ ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ಹಾಗಾದರೆ ಆ ಸಿನಿಮಾಗಳು ಯಾವವು, ಯಾವ ಒಟಿಟಿಯಲ್ಲಿ ಆ ಚಿತ್ರಗಳನ್ನು ನೋಡಬಹುದು? ಇಲ್ಲಿದೆ ಮಾಹಿತಿ.  
icon

(1 / 6)

ದೇವರ: ಟಾಲಿವುಡ್‌ನ ಬಹು ನಿರೀಕ್ಷಿತ ದೇವರ ಸಿನಿಮಾ ಸೆಪ್ಟೆಂಬರ್‌ 27ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಜೂನಿಯರ್‌ ಎನ್‌ಟಿಆರ್‌, ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ಮತ್ತು ಜಾಹ್ನವಿ ಕಪೂರ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ದೊಡ್ಡ ಮಟ್ಟದ ಹೈಪ್‌ ಜತೆಗೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿತ್ತು. ಈಗ ಇದೇ ಸಿನಿಮಾ, ನವೆಂಬರ್‌ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. 
icon

(2 / 6)

ಎಆರ್‌ಎಂ ಮಲಯಾಳಂ ಸಿನಿಮಾ: ಸೆಪ್ಟೆಂಬರ್‌ 12ರಂದು ಮಲಯಾಳಂನಲ್ಲಿ ಅಜೆಯಂದೆ ರಂಡಾಂ ಮೋಷಣಂ (ARM) ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ನವೆಂಬರ್ 8 ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಚಿತ್ರದಲ್ಲಿ ಟೊವಿನೋ ಥಾಮಸ್, ಕೃತಿ ಶೆಟ್ಟಿ, ಸುರಭಿ ಲಕ್ಷ್ಮಿ, ಐಶ್ವರ್ಯ ರಾಜೇಶ್ ಮತ್ತು ಬಾಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  
icon

(3 / 6)

ವೆಟ್ಟೈಯನ್‌: ರಜನಿಕಾಂತ್, ಅಮಿತಾಬ್‌ ಬಚ್ಚನ್‌ ನಟಿಸಿರುವ 'ವೆಟ್ಟೈಯನ್- ದಿ ಹಂಟರ್' ಚಿತ್ರ, ಈಗಾಗಲೇ ಚಿತ್ರಮಂದಿರದಲ್ಲಿ (ಅಕ್ಟೋಬರ್‌ 10) ಬಿಡುಗಡೆ ಆಗಿ, ಸೂಪರ್‌ ಹಿಟ್‌ ಎನಿಸಿಕೊಂಡಿದೆ. ತಮಿಳಿನ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿಯಲ್ಲಿ ವೆಟ್ಟೈಯನ್‌ ಸಿನಿಮಾಕ್ಕೆ ಸುಭಾಸ್ಕರನ್ ಬಂಡವಾಳ ಹೂಡಿದ್ದಾರೆ. ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ನವೆಂಬರ್‌ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. 
icon

(4 / 6)

ನೆಟ್‌ಫ್ಲಿಕ್ಸ್‌ ಮತ್ತು ಯಶ್‌ ರಾಜ್‌ ಫಿಲಂಸ್‌ ನಿರ್ಮಿಸಿರುವ ಸಿನಿಮಾ ವಿಜಯ್‌ 69. ಅನುಪಮ್‌ ಖೇರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಇದೇ ನವೆಂಬರ್‌ 8ರಿಂದ ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದಾಗಿದೆ. 69 ವರ್ಷದ ವಿಜಯ್‌ ಹೇಗೆ ಟ್ರಯಾಥ್ಲಾನ್‌ಗೆ ಸಿದ್ಧಗೊಳ್ಳುತ್ತಾರೆ, ಒಂದೂವರೆ ಕಿಲೋಮೀಟರ್‌ ಈಜು ಮತ್ತು 4 ಕಿಲೋಮೀಟರ್‌ ಸೈಕ್ಲಿಂಗ್‌ ಮತ್ತು ಓಟದಲ್ಲೂ ಮುಂದಿರಬೇಕು. ಈ ರೇಸ್‌ನಲ್ಲಿ 69ರ ಹರೆಯದ ವಿಜಯ್‌ ಗೆಲ್ಲುತ್ತಾನಾ? ಇದೇ ಈ ಚಿತ್ರದ ಎಳೆ. 
icon

(5 / 6)

ಸಿಟಾಡೆಲ್: ಹನಿ ಬನ್ನಿ: ಈ ವೆಬ್‌ ಸಿರೀಸ್‌ ನವೆಂಬರ್ 7 ರಂದು ಭಾರತ ಸೇರಿ 240ಕ್ಕೂ ಹೆಚ್ಚು ದೇಶಗಳಲ್ಲಿ ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯನ್ನು ರಾಜ್ ಮತ್ತು ಡಿಕೆ (ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ) ನಿರ್ದೇಶಿಸಿದ್ದಾರೆ. ಈ ಸರಣಿಯನ್ನು D2R ಫಿಲ್ಮ್ಸ್, ಅಮೆಜಾನ್ MGM ಸ್ಟುಡಿಯೋಸ್ ಮತ್ತು AGBOನ ರುಸ್ಸೋ ಬ್ರದರ್ಸ್ ನಿರ್ಮಿಸಿದ್ದಾರೆ. ಹನಿ ಪಾತ್ರದಲ್ಲಿ ಸಮಂತಾ, ಬನ್ನಿ ಪಾತ್ರದಲ್ಲಿ ವರುಣ್‌ ಧವನ್‌ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್‌ನಲ್ಲಿ ಕೆ.ಕೆ. ಮೆನನ್ ಸಿಮ್ರಾನ್, ಸಾಕಿಬ್ ಸಲೀಮ್, ಸಿಕಂದರ್ ಖೇರ್, ಸೋಹಮ್ ಮಜುಂದಾರ್, ಶಿವಂಕೀತ್ ಪರಿಹಾರ್ ಮತ್ತು ಕಶ್ವಿ ಮಜ್ಮುದಾರ್ ನಟಿಸಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು