ಬಂದಿಶ್ ಬ್ಯಾಂಡಿಟ್ಸ್ ಸೀಸನ್ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ, ಉತ್ಕಟ ಸಂಗೀತ ಪ್ರಣಯ ನಾಟಕ ಮನೆಯಲ್ಲೇ ನೋಡಿ
Bandish Bandits season 2: ಬಂದಿಶ್ ಬ್ಯಾಂಡಿಟ್ಸ್ ಎಂಬ ಸಂಗೀತ ಡ್ರಾಮಾದ ಅಭಿಮಾನಿಗಳೇ ನಿಮಗೊಂದು ಗುಡ್‌ನ್ಯೂಸ್ ಇದೆ. ಬಂದಿಶ್ ಬ್ಯಾಂಡಿಟ್ಸ್ ಸೀಸನ್ 2 ಶೀಘ್ರದಲ್ಲೇ ಬರಲಿದೆ ಎಂದು ಅಮೆಜಾನ್ ಪ್ರೈಮ್ ಖಚಿತಪಡಿಸಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
(1 / 5)
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೆಬ್ ಸರಣಿಗಳಲ್ಲಿ ಸಾಕಷ್ಟು ಜನರು ಬಂದಿಶ್ ಬ್ಯಾಂಡಿಟ್ಸ್ ನೋಡಿ ಆನಂದಿಸಿರಬಹುದು. ಈ ಮ್ಯೂಸಿಕ್ ಡ್ರಾಮಾದ ಮುಂದಿನ ಸರಣಿ ಬರಲಿದೆ ಎಂಬ ಸುದ್ದಿ ಇದೀಗ ಲಭ್ಯವಾಗಿದೆ. ಸೀಸನ್ 2 ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದಂತೆ. (Amazon Prime)
(2 / 5)
ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಮತ್ತು ಬಿಡುಗಡೆ ದಿನಾಂಕ: ಬ್ಯಾಂಡಿಶ್ ಬ್ಯಾಂಡಿಟ್ಸ್ ಸೀಸನ್ 2 ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾದಲ್ಲಿ ಡಿಸೆಂಬರ್ 13, 2024ರಿಂದ ಲಭ್ಯವಿರುತ್ತದೆ. ಈ ಕುರಿತು ಅಮೆಜಾನ್ ಪ್ರೈಮ್ ವಿಡಿಯೋ ಎಕ್ಸ್‌ನಲ್ಲಿ ಖಚಿತಪಡಿಸಿದೆ. (Amazon Prime)
(3 / 5)
ಕಥಾವಸ್ತು ಮತ್ತು ಪಾತ್ರಗಳು:ಋತ್ವಿಕ್ ಭೌಮಿಕ್ ಮತ್ತು ಶ್ರೇಯಾ ಚೌಧರಿ ರಾಧೆ ಮತ್ತು ತಮನ್ನಾ ಪಾತ್ರಗಳು ಇಲ್ಲೂ ಮುಂದುವರೆಯಲಿದೆ. ಸೀಸನ್ 1ರಲ್ಲಿ ರಾಜಸ್ಥಾನದ ಪ್ರತಿಭಾನ್ವಿತ ಮ್ಯೂಸಿಸಿಯನ್ ರಾಧೆ ಮತ್ತು ಪಾಪ್ ತಾರೆ ತಮನ್ನಾ ಪ್ರೀತಿಗೆ ಬಿದ್ದಿದ್ದರು.(Amazon)
(4 / 5)
ಪೋಷಕ ಪಾತ್ರವರ್ಗ: ಮೊದಲ ಸೀಸನ್ ನ ಪೋಷಕ ಪಾತ್ರಗಳಲ್ಲಿ ರಾಜೇಶ್ ತೈಲಾಂಗ್, ಶೀಬಾ ಚಡ್ಡಾ, ನಸೀರುದ್ದೀನ್ ಶಾ, ಅತುಲ್ ಕುಲಕರ್ಣಿ ಮತ್ತು ಇತರರು ಈ ಸೀಸನ್‌ನಲ್ಲೂ ಇದ್ದಾರೆ.(Amazon)
ಇತರ ಗ್ಯಾಲರಿಗಳು