ಕನ್ನಡ ಸುದ್ದಿ  /  Photo Gallery  /  Ott Weekend Watchlist From Raviteja Starrer Eagle To Ravi Kishan Maamla Legal Hai Know What To Stream Mnk

OTT weekend watchlist: ಈ ವಾರಾಂತ್ಯಕ್ಕೆ ನಿಮ್ಮನ್ನು ರಂಜಿಸಲು ಬರ್ತಿವೆ ಸಾಲು ಸಾಲು ಸಿನಿಮಾ, ವೆಬ್‌ ಸಿರೀಸ್‌ಗಳು

OTT weekend watchlist: ಇನ್ನೇನು ವಾರಾಂತ್ಯ ಬಂತು. ಒಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳ ಆಗಮನವೂ ಆಗಿದೆ. ತೆಲುಗು, ತಮಿಳು, ಹಿಂದಿ, ಇಂಗ್ಲಿಷ್‌ ಸೇರಿ ಹಲವು ಭಾಷೆಯ ಸಿನಿಮಾ ವೆಬ್‌ ಸರಣಿಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಸಿನಿಮಾಗಳು ಯಾವವು, ಯಾವ ವೇದಿಕೆಯಲ್ಲಿ ರಿಲೀಸ್‌ ಆಗಿವೆ. ಇಲ್ಲಿದೆ ಮಾಹಿತಿ.

ಈಗಲ್: ರವಿತೇಜ ನಾಯಕನಾಗಿ ನಟಿಸಿರುವ ಈಗಲ್‌ ಸಿನಿಮಾ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕಮಾಲ್‌ ಮಾಡಿದೆ. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸುತ್ತಿದೆ. ಮಾರ್ಚ್ 2 ರಂದು ಅಮೆಜಾನ್ ಪ್ರೈಮ್ ವಿಡಿಯೋ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈಗಲ್ ಚಿತ್ರವನ್ನು ಕಾರ್ತಿಕ್ ಗಟ್ಟಮನೇನಿ ನಿರ್ದೇಶಿಸಿದ್ದಾರೆ.
icon

(1 / 5)

ಈಗಲ್: ರವಿತೇಜ ನಾಯಕನಾಗಿ ನಟಿಸಿರುವ ಈಗಲ್‌ ಸಿನಿಮಾ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕಮಾಲ್‌ ಮಾಡಿದೆ. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸುತ್ತಿದೆ. ಮಾರ್ಚ್ 2 ರಂದು ಅಮೆಜಾನ್ ಪ್ರೈಮ್ ವಿಡಿಯೋ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈಗಲ್ ಚಿತ್ರವನ್ನು ಕಾರ್ತಿಕ್ ಗಟ್ಟಮನೇನಿ ನಿರ್ದೇಶಿಸಿದ್ದಾರೆ.(B4U/ YouTube)

ಮಾಮ್ಲಾ ಲೀಗಲ್ ಹೈ: ಕೋರ್ಟ್ ರೂಮ್ ಡ್ರಾಮಾ ಮಾಮ್ಲಾ ಲೀಗಲ್ ಹೈ ಇಂದಿನಿಂ (ಮಾರ್ಚ್ 1) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ವೆಬ್ ಸರಣಿಯಲ್ಲಿ ರವಿ ಕಿಶನ್, ನಿಧಿ ಬಿಶ್ತ್, ಯಶ್ಪಾಲ್ ಶರ್ಮಾ, ಅಂಜುಮ್ ಬಾತ್ರಾ, ಅನಂತ್ ಜೋಶಿ ಮತ್ತು ಇತರರು ನಟಿಸಿದ್ದಾರೆ.
icon

(2 / 5)

ಮಾಮ್ಲಾ ಲೀಗಲ್ ಹೈ: ಕೋರ್ಟ್ ರೂಮ್ ಡ್ರಾಮಾ ಮಾಮ್ಲಾ ಲೀಗಲ್ ಹೈ ಇಂದಿನಿಂ (ಮಾರ್ಚ್ 1) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ವೆಬ್ ಸರಣಿಯಲ್ಲಿ ರವಿ ಕಿಶನ್, ನಿಧಿ ಬಿಶ್ತ್, ಯಶ್ಪಾಲ್ ಶರ್ಮಾ, ಅಂಜುಮ್ ಬಾತ್ರಾ, ಅನಂತ್ ಜೋಶಿ ಮತ್ತು ಇತರರು ನಟಿಸಿದ್ದಾರೆ.(Netflix)

ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್: ತೆಲುಗಿನ ಈ ಸಿನಿಮಾ ನೋಡುಗರನ್ನು 2000ನೇ ಇಸ್ವಿಗೆ ಕರೆದೊಯ್ಯುತ್ತದೆ. ಕಾಮಿಡಿ ಡ್ರಾಮಾ ಶೈಲಿಯ ಈ ಸಿನಿಮಾವನ್ನು ದುಶ್ಯಂತ್ ಕಟಿಕನೇನಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಹಾಸ್, ಶಿವಾನಿ ನಗರಂ, ಗೋಪರಾಜು ರಮಣ ಮತ್ತು ಶರಣ್ಯ ಪ್ರದೀಪ್ ನಟಿಸಿದ್ದಾರೆ.  ಇಂದಿನಿಂದ  (ಮಾರ್ಚ್ 1) ಆಹಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ.
icon

(3 / 5)

ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್: ತೆಲುಗಿನ ಈ ಸಿನಿಮಾ ನೋಡುಗರನ್ನು 2000ನೇ ಇಸ್ವಿಗೆ ಕರೆದೊಯ್ಯುತ್ತದೆ. ಕಾಮಿಡಿ ಡ್ರಾಮಾ ಶೈಲಿಯ ಈ ಸಿನಿಮಾವನ್ನು ದುಶ್ಯಂತ್ ಕಟಿಕನೇನಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಹಾಸ್, ಶಿವಾನಿ ನಗರಂ, ಗೋಪರಾಜು ರಮಣ ಮತ್ತು ಶರಣ್ಯ ಪ್ರದೀಪ್ ನಟಿಸಿದ್ದಾರೆ.  ಇಂದಿನಿಂದ  (ಮಾರ್ಚ್ 1) ಆಹಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ.( Geetha Arts)

ಸನ್‌ಪ್ಲವರ್‌ ಸೀಸನ್ 2: ಸುನಿಲ್ ಗ್ರೋವರ್ ಮತ್ತು ಅದಾ ಶರ್ಮಾ ಕಾಮಿಡಿ ಥ್ರಿಲ್ಲರ್‌ ಶೈಲಿಯ ಸನ್‌ಪ್ಲವರ್‌ ಸೀಸನ್‌ 2 ಸಿರೀಸ್‌ ಇಂದಿನಿಂದ (ಮಾರ್ಚ್ 1) ಜೀ 5ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. 
icon

(4 / 5)

ಸನ್‌ಪ್ಲವರ್‌ ಸೀಸನ್ 2: ಸುನಿಲ್ ಗ್ರೋವರ್ ಮತ್ತು ಅದಾ ಶರ್ಮಾ ಕಾಮಿಡಿ ಥ್ರಿಲ್ಲರ್‌ ಶೈಲಿಯ ಸನ್‌ಪ್ಲವರ್‌ ಸೀಸನ್‌ 2 ಸಿರೀಸ್‌ ಇಂದಿನಿಂದ (ಮಾರ್ಚ್ 1) ಜೀ 5ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. (Zee5)

ಸ್ಪೇಸ್ ಮ್ಯಾನ್: ಇದು ಜೋಹಾನ್ ರೆಂಕ್ ನಿರ್ದೇಶನದ ಸೈನ್ಸ್‌ ಫಿಕ್ಷನ್‌ ಆಧರಿತ ಸಿನಿಮಾ. ಆಡಮ್ ಸ್ಯಾಂಡ್ಲರ್, ಕ್ಯಾರಿ ಮುಲ್ಲಿಗನ್, ಕುನಾಲ್ ನಯ್ಯರ್, ಲೆನಾ ಒಲಿನ್, ಇಸಾಬೆಲ್ಲಾ ರೊಸೆಲ್ಲಿನಿ ಮತ್ತು ಪಾಲ್ ಡಾನೊ ಮುಖ್ಯಭೂಮಿಕೆಯಲ್ಲಿದ್ದಾರೆ. ಇಂದಿನಿಂದ (ಮಾರ್ಚ್ 1) ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. 
icon

(5 / 5)

ಸ್ಪೇಸ್ ಮ್ಯಾನ್: ಇದು ಜೋಹಾನ್ ರೆಂಕ್ ನಿರ್ದೇಶನದ ಸೈನ್ಸ್‌ ಫಿಕ್ಷನ್‌ ಆಧರಿತ ಸಿನಿಮಾ. ಆಡಮ್ ಸ್ಯಾಂಡ್ಲರ್, ಕ್ಯಾರಿ ಮುಲ್ಲಿಗನ್, ಕುನಾಲ್ ನಯ್ಯರ್, ಲೆನಾ ಒಲಿನ್, ಇಸಾಬೆಲ್ಲಾ ರೊಸೆಲ್ಲಿನಿ ಮತ್ತು ಪಾಲ್ ಡಾನೊ ಮುಖ್ಯಭೂಮಿಕೆಯಲ್ಲಿದ್ದಾರೆ. ಇಂದಿನಿಂದ (ಮಾರ್ಚ್ 1) ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. (Netflix)


ಇತರ ಗ್ಯಾಲರಿಗಳು