ಪ್ರತಿದಿನ 4 ಗಂಟೆ ಮೊಬೈಲ್​​ ಬಳಕೆ ಕೆಡಿಸತ್ತೆ ನಿಮ್ಮ ಮಾನಸಿಕ ಆರೋಗ್ಯ; ಆತ್ಮಹತ್ಯೆ ಆಲೋಚನೆಗೂ ಪ್ರಚೋದನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರತಿದಿನ 4 ಗಂಟೆ ಮೊಬೈಲ್​​ ಬಳಕೆ ಕೆಡಿಸತ್ತೆ ನಿಮ್ಮ ಮಾನಸಿಕ ಆರೋಗ್ಯ; ಆತ್ಮಹತ್ಯೆ ಆಲೋಚನೆಗೂ ಪ್ರಚೋದನೆ

ಪ್ರತಿದಿನ 4 ಗಂಟೆ ಮೊಬೈಲ್​​ ಬಳಕೆ ಕೆಡಿಸತ್ತೆ ನಿಮ್ಮ ಮಾನಸಿಕ ಆರೋಗ್ಯ; ಆತ್ಮಹತ್ಯೆ ಆಲೋಚನೆಗೂ ಪ್ರಚೋದನೆ

  • Effects of using mobile too much: ಪ್ರತಿದಿನ 4 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಮೊಬೈಲ್​ ಬಳಸುತ್ತಿದ್ದೀರಾ? ಅದರಲ್ಲೂ ಹದಿಹರೆಯದವರು ಇಷ್ಟು ಸಮಯ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದರೆ ನಿಮಗೆ ಅರಿಯದೆಯೇ ನೀವು ಎದುರಿಸುತ್ತಿರುವ ಅಥವಾ ಮುಂದೆ ಎದುರಿಸುವ ಅಪಾಯಗಳ ಬಗ್ಗೆ ತಿಳಿಯಿರಿ.

ಹದಿಹರೆಯದವರು ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿದ್ದರೆ ಮಾನಸಿಕ ಆರೋಗ್ಯ ಮತ್ತು ಮಾದಕ ದ್ರವ್ಯ ಸೇವನೆಯ ಅಪಾಯವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನದ ಮಾಹಿತಿಯು PLOS ONE ಜರ್ನಲ್​​ನಲ್ಲಿ ಪ್ರಕಟವಾಗಿದೆ.  
icon

(1 / 5)

ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿದೆ ಎಂಬುದು ಈಗಾಗಲೇ ಅನೇಕ ಸಮೀಕ್ಷೆ, ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಪ್ರತಿದಿನ 4 ಗಂಟೆಗಳ ಕಾಲ ಮೊಬೈಲ್​​ ನೋಡುವುದು ಕಣ್ಣಿನ ಸಮಸ್ಯೆ ಮಾತ್ರ ತಂದಿಡುವುದಿಲ್ಲ, ಜೊತೆಗೆ ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ನಿದ್ರೆಯ ಸಮಸ್ಯೆಗಳನ್ನು ತಂದೊಡ್ಡಲಿದೆ. ಸ್ನಾಯುಗಳ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಇತ್ತೀಚಿಗಿನ ಅಧ್ಯಯನವೊಂದು ಹೇಳಿದೆ. 
icon

(2 / 5)

ಹದಿಹರೆಯದವರ ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ಕೊರಿಯಾದ ಹನ್ಯಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ತಂಡವು 50,000 ಕ್ಕೂ ಹೆಚ್ಚು ಹದಿಹರೆಯದವರ ಮೇಲೆ ಆಧ್ಯಯನ ನಡೆಸಿದೆ. 
icon

(3 / 5)

ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್ ಬಳಸುವ ಹದಿಹರೆಯದವರು ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಕಡಿಮೆಯಿರುವವರಿಗಿಂತ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದು ನಮ್ಮ ಅರಿವಿಗೆ ಬಾರದೆಯೇ ಆತ್ಮಹತ್ಯೆಯ ಆಲೋಚನೆಗಳಿಗೂ ಪ್ರಚೋದನೆ ನೀಡುತ್ತಿದೆ. ಅಲ್ಲದೇ ಇವರು ಮಾದಕ ವಸ್ತುಗಳ ಬಳಕೆಯಡೆ ಒಲವು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. 
icon

(4 / 5)

ದಿನಕ್ಕೆ ಒಂದರಿಂದ ಎರಡು ಗಂಟೆಗಳವರೆಗೆ ಸ್ಮಾರ್ಟ್‌ಫೋನ್ ಬಳಸುವ ಹದಿಹರೆಯದವರು ಸ್ಮಾರ್ಟ್‌ಫೋನ್ ಬಳಸದ ಹದಿಹರೆಯದವರಿಗಿಂತ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್ ಬಳಸುವವರಿಗಿಂತ ಕಡಿಮೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. 
icon

(5 / 5)

ಇತರ ಗ್ಯಾಲರಿಗಳು