ರನ್ನೂ ಬರಲಿಲ್ಲ, ಮೊಂಡುತನವೂ ಬಿಡಲಿಲ್ಲ; ಹರಾಜಿನಲ್ಲಿ ಯಾರಿಗೂ ಬೇಡವಾದ ಅನ್ಫಿಟ್ ಪೃಥ್ವಿ ಶಾ, ನಿಂಗಿದು ಬೇಕಿತ್ತಾ...
- ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಪೃಥ್ವಿಯನ್ನು ಈ ಬಾರಿ ಯಾವ ತಂಡವೂ ಖರೀದಿಸಲು ಮುಂದಾಗಲಿಲ್ಲ. ಅದಕ್ಕೆ ಕಾರಣ ಹೀಗಿದೆ.
- ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಪೃಥ್ವಿಯನ್ನು ಈ ಬಾರಿ ಯಾವ ತಂಡವೂ ಖರೀದಿಸಲು ಮುಂದಾಗಲಿಲ್ಲ. ಅದಕ್ಕೆ ಕಾರಣ ಹೀಗಿದೆ.
(1 / 5)
ಭಾರತ ತಂಡದಲ್ಲಿ ಆಡಿದ್ದ ಕ್ರಿಕೆಟಿಗ ಪೃಥ್ವಿ ಶಾ ಅವರು ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಇದು ನಿರೀಕ್ಷೆಯೂ ಆಗಿತ್ತು. ಏಕೆಂದರೆ ಪೃಥ್ವಿ ವರ್ತನೆ ಯಾರಿಗೂ ಇಷ್ಟವಾಗುತ್ತಿಲ್ಲ. ಇನ್ನು ಬಂಡವಾಳ ಹೂಡುವ ಐಪಿಎಲ್ ತಂಡಗಳು ಇಷ್ಟಪಡುತ್ತವೆಯೇ? ಕೋಚ್ಗಳ ಮೇಲೆ ರೇಗಾಡುವ ಪೃಥ್ವಿ, ಪ್ರಸ್ತುತ ತೀವ್ರ ವೈಫಲ್ಯ ಅನುಭವಿಸುತ್ತಿದ್ದಾರೆ.
(2 / 5)
ಪೃಥ್ವಿ ಶಾ ಪ್ರಸ್ತುತ ಗಮನ ಸೆಳೆಯುವಂತಹ ಪ್ರದರ್ಶನ ನೀಡುತ್ತಿಲ್ಲ. ರಣಜಿ ಟ್ರೋಫಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಕೆಟ್ಟ ಪ್ರದರ್ಶನ ನೀಡಿದ್ದರು. ಜವಾಬ್ದಾರಿಯ ಕೊರತೆ ಕಾರಣ ಮತ್ತು ಫಿಟ್ನೆಸ್ ಕಡೆ ಗಮನ ಹರಿಸುವಂತೆ ಸೂಚಿಸಿ ಪೃಥ್ವಿಯನ್ನು ಮುಂಬೈ ತಂಡದಿಂದ ಕೈಬಿಡಲಾಯಿತು.
(3 / 5)
ಅತಿಯಾದ ಫ್ಯಾಟ್ ಕಾರಣ ಓಡಲು ಸಹ ಆತನಿಂದಾಗುತ್ತಿಲ್ಲ. ಮ್ಯಾಚ್ ಫಿಟ್ನೆಸ್ ಮರಳಿ ಪಡೆಯಲು ಅವರನ್ನು 14 ದಿನಗಳ ಕಾಲ ಫಿಟ್ನೆಸ್ ಶಿಬಿರಕ್ಕೆ ಕಳುಹಿಸಲಾಯಿತು. ಆದರೆ, ನಿರ್ಲಕ್ಷ್ಯ ತೋರಿದ್ದ ಪೃಥ್ವಿ, ತನ್ನ ಫಿಟ್ನೆಸ್ ಕಡೆಗೆ ಒಲವು ತೋರದೆ ಸ್ನೇಹಿತರೊಂದಿಗೆ ಬರ್ತ್ಡೇ ಪಾರ್ಟಿಗೆ ಹೋಗಿ, ಗಲಾಟೆ ಮಾಡಿದ್ದರು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. (ANI )
(4 / 5)
ರಾಷ್ಟ್ರೀಯ ತಂಡದ ಕ್ರಿಕೆಟಿಗನಾಗಿ ಅಶಿಸ್ತಿನಿಂದ ನಡೆದಕೊಳ್ಳುತ್ತಿದ್ದ ಕಾರಣ ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದರು. ಅವಕಾಶ ಸಿಗದ ಕಾರಣ ಕೋಪಗೊಂಡು ಕೋಚ್ಗಳೊಂದಿಗೆ ಜಗಳವಾಡಿದ್ದರು. ಪರಿಣಾಮವಾಗಿ ಈತನನ್ನು ಖರೀದಿಸಿ ನಾವೇ ನಷ್ಟ ಅನುಭವಿಸಿದ್ದೇವೆ ಎಂದುಕೊಂಡು ಆತನನ್ನು ತಂಡದಿಂದ ರಿಲೀಸ್ ಮಾಡಿತು.
(5 / 5)
2018ರ ತನಕ ಪೃಥ್ವಿ ಕರಿಯರ್ ಗ್ರಾಫ್ ಅಗ್ರಸ್ಥಾನದಲ್ಲಿತ್ತು, ಆದರೆ 2019 ರಿಂದ ಆ ಗ್ರಾಫ್ ಕುಸಿಯಲು ಆರಂಭಿಸಿತು. ಡೋಪಿಂಗ್ ಹಗರಣದಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದರು. ನಂತರ ಶಿಸ್ತು ಉಲ್ಲಂಘನೆ, ಪ್ರಾಕ್ಟೀಸ್ ಸೆಷನ್ಗಳನ್ನು ತಪ್ಪಿಸಿಕೊಂಡಿದ್ದು, ಕೋಚ್ಗಳೊಂದಿಗೆ ಜಗಳ, ಬದ್ದತೆ ಇಲ್ಲದಿರುವುದು, ಫಿಟ್ನೆಸ್ ಕಾಪಾಡಿಕೊಳ್ಳದಿರುವು ಸೇರಿದಂತೆ ಪೃಥ್ವಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದವು. ಇದೆಲ್ಲವೂ ಆತನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಹೀಗಾಗಿ, ಯಾವುದೇ ತಂಡವು ಖರೀದಿಗೆ ಮುಂದಾಗಲಿಲ್ಲ. ಮಾಜಿ ತಜ್ಞರು ಸಹ ಪೃಥ್ವಿ ಅಹಂ ಬಿಡಬೇಕು ಎಂದೆಲ್ಲಾ ಸೂಚಿಸಿದ್ದರು. ಆದರೆ ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಇದೀಗ ನಿಂಗಿದು ಬೇಕಿತ್ತಾ…. ಎನ್ನುವಂತಾಗಿದೆ.(AP)
ಇತರ ಗ್ಯಾಲರಿಗಳು