ಪದ್ಮ ಪ್ರಶಸ್ತಿ 2025: ಹಿರಿಯ ನಟ ಅನಂತನಾಗ್‌, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ, ಇಲ್ಲಿದೆ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪದ್ಮ ಪ್ರಶಸ್ತಿ 2025: ಹಿರಿಯ ನಟ ಅನಂತನಾಗ್‌, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ, ಇಲ್ಲಿದೆ ಚಿತ್ರನೋಟ

ಪದ್ಮ ಪ್ರಶಸ್ತಿ 2025: ಹಿರಿಯ ನಟ ಅನಂತನಾಗ್‌, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ, ಇಲ್ಲಿದೆ ಚಿತ್ರನೋಟ

ಕನ್ನಡ ಹಿರಿಯ ನಟ ಅನಂತ ನಾಗ್, ಕಲಾ ಸಾಧಕ ರಿಕಿ ಕೇಜ್‌ ಸೇರಿ 71 ಸಾಧಕರಿಗೆ ಇಂದು (ಮೇ 27) ಪದ್ಮ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ. ಆಯ್ದ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರನೋಟ ಇಲ್ಲಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು (ಮೇ 27) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡ ಹಿರಿಯ ನಟ ಅನಂತ ನಾಗ್, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರಧಾನ ಮಾಡಿದರು. ಈ ಸಲ 7 ಸಾಧಕರಿಗೆ ಪದ್ಮವಿಭೂಷ, 19 ಸಾಧಕರಿಗೆ ಪದ್ಮಭೂಷಣ, 113 ಸಾಧಕರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಈ ಪೈಕಿ ಕರ್ನಾಟಕದ 9 ಸಾಧಕರಿದ್ದು, ವಯೋಲಿನ್ ವಾದಕ ಎಲ್ ಸುಬ್ರಮಣಿಯಂ ಪದ್ಮವಿಭೂಷಣ, ನಟ ಅನಂತನಾಗ್ ಮತ್ತು ಹಿರಿಯ ಪತ್ರಕರ್ತ ಎ ಸೂರ್ಯ ಪ್ರಕಾಶ್ ಅವರಿಗೆ ಪದ್ಮಭೂಷಣ ಪುರಸ್ಕಾರ ಲಭಸಿದೆ.
icon

(1 / 11)

ಕನ್ನಡದ ಹಿರಿಯ ನಟ ಅನಂತನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.
icon

(2 / 11)

ಕನ್ನಡದ ಹಿರಿಯ ನಟ ಅನಂತನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.

ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಪದ್ಮ ಪುರಸ್ಕಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದರು.
icon

(3 / 11)

ಕಥಕ್ ನೃತ್ಯಗಾತಿ ಕುಮುದಿನಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(4 / 11)

(press secy)

ಡಾ ಶಾರದಾ ಸಿನ್ಹಾ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(5 / 11)

ಡಾ ಶಾರದಾ ಸಿನ್ಹಾ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
(Shrikant Singh)

ನೃತ್ಯಪಟು, ನಟಿ ಶೋಭನಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(6 / 11)

ನೃತ್ಯಪಟು, ನಟಿ ಶೋಭನಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
(Shrikant Singh)

ಸಾರ್ವಜನಿಕ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಗೆ ಪದ್ಮ ವಿಭೂ‍ಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(7 / 11)

ವಿಶ್ವವಿದ್ಯಾ ಸಂಸ್ಥಾಪಕ ಮತ್ತು ನಿರ್ದೇಶಕ ಆಚಾರ್ಯ ಜೋನಾಸ್ ಮಸೆಟ್ಟಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.
icon

(8 / 11)

ಬೆಲ್ದಗನ ಅಧ್ಯಕ್ಷ ಸ್ವಾಮಿ ಪ್ರದೀಪ್ತಾನಂದ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.
icon

(9 / 11)

ಪಾರೈ ಕಲಾವಿದ ವೇಲು ಅಸನ್ ಅವರಿಗೆ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು.
icon

(10 / 11)

ಪಾರೈ ಕಲಾವಿದ ವೇಲು ಅಸನ್ ಅವರಿಗೆ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು.
(Shrikant Singh)

ಭಾರತದ ಅರ್ಥ ವ್ಯವಸ್ಥೆಗೆ ನೀಡಿದ ಕೊಡುಗೆ ಪರಿಗಣಿಸಿ ವಿವೇಕ್ ದೇವರಾಯ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(11 / 11)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು