ಪಹಲ್ಗಾಮ್ ಉಗ್ರ ದಾಳಿ: ಒಟಿಟಿಯಲ್ಲಿವೆ ಟೆರರಿಸಂ ಕುರಿತಾದ ಸಿನಿಮಾಗಳು.. ಹೀಗಿದೆ ಆಯ್ದ ಚಿತ್ರಗಳ ಲಿಸ್ಟ್
- ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸದಿಂದ ಏನೂ ಅರಿಯದ ಮುಗ್ಧ ಜೀವಗಳು ಪ್ರಾಣ ಬಿಟ್ಟಿವೆ. ಈ ಉಗ್ರದಾಳಿಯ ಬೆನ್ನಲ್ಲೇ ಒಟಿಟಿಯಲ್ಲಿ ಇಂಥ ಕೃತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ಆ ಪೈಕಿ ಆಯ್ದ ಕೆಲವು ಟೆರರಿಸಂ ಕುರಿತಾದ ಸಿನಿಮಾಗಳು ಇಲ್ಲಿವೆ.
- ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸದಿಂದ ಏನೂ ಅರಿಯದ ಮುಗ್ಧ ಜೀವಗಳು ಪ್ರಾಣ ಬಿಟ್ಟಿವೆ. ಈ ಉಗ್ರದಾಳಿಯ ಬೆನ್ನಲ್ಲೇ ಒಟಿಟಿಯಲ್ಲಿ ಇಂಥ ಕೃತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ಆ ಪೈಕಿ ಆಯ್ದ ಕೆಲವು ಟೆರರಿಸಂ ಕುರಿತಾದ ಸಿನಿಮಾಗಳು ಇಲ್ಲಿವೆ.
(1 / 8)
ಪಹಲ್ಗಾಮ್ ಉಗ್ರದಾಳಿಯ ಬೆನ್ನಲ್ಲೇ ಒಟಿಟಿಯಲ್ಲಿ ಅಂಥ ಕೃತ್ಯದ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ಆ ಪೈಕಿ ಆಯ್ದ ಕೆಲವು ಟೆರರಿಸಂ ಕುರಿತಾದ ಸಿನಿಮಾಗಳ ವಿವರ ಮತ್ತು ಆ ಚಿತ್ರಗಳು ಯಾವ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ಇವೆ ಎಂಬ ಮಾಹಿತಿ ಇಲ್ಲಿದೆ.
(2 / 8)
ಬ್ಲ್ಯಾಕ್ ಫ್ರೈಡೇ (2007)1993ರ ಮುಂಬೈ ಬಾಂಬ್ ಸ್ಫೋಟದ ಮೇಲೆ ಈ ಸಿನಿಮಾ ಮೂಡಿಬಂದಿದೆ. ಅನುರಾಗ್ ಕಶ್ಯಪ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
(3 / 8)
ಆರ್ಟಿಕಲ್ 370: ಈ ಚಿತ್ರವು 2024ರಲ್ಲಿ ಬಿಡುಗಡೆಯಾದ, ನೈಜ ಘಟನೆ ಆಧರಿತ ರಾಜಕೀಯ ಥ್ರಿಲ್ಲರ್ ಸಿನಿಮಾ. ಇದು ಕಾಶ್ಮೀರದಿಂದ ಕಲಂ 370 ರದ್ದಾದ ಪ್ರಕ್ರಿಯೆ ಮತ್ತು ಅದಕ್ಕೆ ಹಿಂದಿರುವ ರಾಜಕೀಯ, ಗುಪ್ತಚರ ಮತ್ತು ಭದ್ರತಾ ಕಾರ್ಯಾಚರಣೆಗಳ ಬಗ್ಗೆ ವಿವರಿಸುತ್ತದೆ. ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
(4 / 8)
ಬೇಬಿ: ಬಾಲಿವುಡ್‌ನಲ್ಲಿ ಮೂಡಿಬಂದ ಬೇಬಿ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿದ್ದಾರೆ. ನೀರಜ್ ಪಾಂಡೆ ನಿರ್ದೇಶನದ ಈ ಸಿನಿಮಾ, 2015ರಲ್ಲಿ ತೆರೆಗೆ ಬಂದಿತ್ತು. ಉಗ್ರದಾಳಿಯ ಹಿನ್ನೆಲೆಯಲ್ಲಿಯೇ ಈ ಸಿನಿಮಾ ಸಾಗಲಿದೆ. ಈ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋದಲ್ಲಿದೆ.
(5 / 8)
ಉರಿ: ದ ಸರ್ಜಿಕಲ್ ಸ್ಟ್ರೈಕ್: ಭಾರತೀಯ ಸೇನೆಯ 2016ರ ಸರ್ಜಿಕಲ್ ಸ್ಟ್ರೈಕ್ ಮೇಲೆ ಆಧಾರಿತವಾದ ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಧೈರ್ಯ, ದೇಶಭಕ್ತಿ ಮತ್ತು ಸೇನಾ ಕಾರ್ಯಾಚರಣೆಗಳ ಕುರಿತು ಈ ಚಿತ್ರ ಮೂಡಿಬಂದಿದೆ. ಜೀ5 ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಿದೆ.
(6 / 8)
ಮದ್ರಾಸ್ ಕೆಫೆ (2013): ಶ್ರೀಲಂಕಾದ ಯುದ್ಧ, ರಾಜೀವ್ ಗಾಂಧಿಯ ಹತ್ಯೆಯ ಹಿಂದೆ ಇರುವ ರಾಜಕೀಯ ಷಡ್ಯಂತ್ರಗಳ ಕುರಿತ ಕಥೆ ಇದಾಗಿದೆ. ಜಾನ್ ಅಬ್ರಹಾಂ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನ ಸಿನಿಮಾ ಆಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.
(7 / 8)
ದಿ ಕಾಶ್ಮೀರ್ ಫೈಲ್ಸ್: ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ 2022ರಲ್ಲಿ ತೆರೆ ಕಂಡು ದೊಡ್ಡ ಮಟ್ಟದ ಸದ್ದು ಮಾಡಿತು. ಕಾಶ್ಮೀರಿ ಪಂಡಿತರ ಹತ್ಯೆ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಈ ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಜೀ5 ಒಟಿಟಿಯಲ್ಲಿದೆ.
ಇತರ ಗ್ಯಾಲರಿಗಳು