Photos: ವಿವಾಹ ಜೀವನಕ್ಕೆ ಕಾಲಿಟ್ಟ ಇಮಾಮ್ ಉಲ್ ಹಕ್; ಸ್ನೇಹವೇ ನಮ್ಮ ಪ್ರೀತಿಗೆ ಅಡಿಪಾಯ ಎಂದ ಪಾಕ್ ಕ್ರಿಕೆಟಿಗ
- Imam Ul Haq Marriage: ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳತಿ ಅನ್ಮೋಲ್ ಮೆಹಮೂದ್ ಅವರನ್ನು ಇಮಾಮ್ ಮದುವೆಯಾಗಿದ್ದಾರೆ. ಈ ಕುರಿತು ಇಮಾಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
- Imam Ul Haq Marriage: ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳತಿ ಅನ್ಮೋಲ್ ಮೆಹಮೂದ್ ಅವರನ್ನು ಇಮಾಮ್ ಮದುವೆಯಾಗಿದ್ದಾರೆ. ಈ ಕುರಿತು ಇಮಾಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
(1 / 8)
ನವೆಂಬರ್ 25ರಂದು ಇಮಾಮ್ ಉಲ್ ಹಕ್ ವಿವಾಹವಾಗಿದ್ದಾರೆ. ಪತ್ನಿಯೊಂದಿಗಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.(Imam Ul Haq IG)
(2 / 8)
ಇಮಾಮ್-ಉಲ್-ಹಕ್ ಅವರ ಪತ್ನಿಯ ಹೆಸರು ಅನ್ಮೋಲ್ ಮೆಹಮೂದ್. ಅನ್ಮೋಲ್ ಅವರು ಇಮಾಮ್ ಅವರ ದೂರದ ಸಂಬಂಧಿ. ಮಾತ್ರವಲ್ಲದೆ ಉತ್ತಮ ಸ್ನೇಹಿತೆ.
(3 / 8)
ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡ ಇಮಾಮ್, ಅನ್ಮೋಲ್ ಅವರನ್ನು ತಮ್ಮ ಉತ್ತಮ ಸ್ನೇಹಿತೆ ಎಂದು ಕರೆದಿದ್ದಾರೆ.
(4 / 8)
ಇಮಾಮ್ ಮತ್ತು ಅನ್ಮೋಲ್ ದೀರ್ಘಕಾಲದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಈ ನಡುವೆ ಅನ್ಮೋಲ್ ಇಂಟರ್ನ್ಶಿಪ್ಗಾಗಿ ನಾರ್ವೆಗೆ ಹೋಗಿದ್ದರು. ಹೀಗಾಗಿ ಇಬ್ಬರೂ ಕೆಲಕಾಲ ದೂರವಾಗಿದ್ದರು.
(5 / 8)
ಅನ್ಮೋಲ್ ತುಂಬಾ ಸುಂದರವಾಗಿದ್ದು ಮಾಡೆಲ್ರಂತೆ ಕಾಣುತ್ತಾರೆ. ಇವರ ಸೌಂದರ್ಯದ ಕುರಿತಾಗಿಯೂ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ.
(6 / 8)
ವಿವಾಹದ ಅದ್ಧೂರಿ ಉಡುಗೆಯಲ್ಲಿ ಅನ್ಮೋಲ್ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಇದು ಅವರ ಸೌಂದರ್ಯವನ್ನು ಹೆಚ್ಚಿಸಿದೆ. ಈ ಜೋಡಿ ತುಂಬಾ ಸೊಗಸಾಗಿ ಕಾಣುತ್ತಿದೆ.
(7 / 8)
ಸಾಮಾಜಿಕ ಮಾಧ್ಯಮದಲ್ಲಿ ನಿಕಾಹ್ ಚಿತ್ರಗಳನ್ನು ಹಂಚಿಕೊಂಡ ಇಮಾಮ್, ಅನ್ಮೋಲ್ಗಾಗಿ ವಿಶೇಷ ವಾಕ್ಯಗಳನ್ನು ಬರೆದಿದ್ದಾರೆ, “ಇಂದು ನಾವಿಬ್ಬರೂ ಜೊತೆಗಾರರಾಗಿದ್ದೇವೆ. ಆದರೆ ನಮ್ಮ ಉತ್ತಮ ಸ್ನೇಹವು ಬಲವಾಗಿದೆ. ಸ್ನೇಹವೇ ನಮ್ಮ ಪ್ರೇಮಕಥೆಗೆ ಅಡಿಪಾಯವಾಗಿತ್ತು” ಎಂದು ಹೇಳಿಕೊಂಡಿದ್ದಾರೆ.
ಇತರ ಗ್ಯಾಲರಿಗಳು