ಚಾಂಪಿಯನ್ಸ್ ಟ್ರೋಫಿ: ಫೆ 11ರಂದು ಗಡಾಫಿ ಕ್ರೀಡಾಂಗಣ ಐಸಿಸಿಗೆ ಹಸ್ತಾಂತರ; ಇನ್ನೂ ಪೂರ್ಣಗೊಳ್ಳದ ಕಾಮಗಾರಿ -Photos
- ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಸ್ಟೇಡಿಯಂಗಳ ಸಿದ್ಧತೆಯ ಬಗ್ಗೆ ಕಳವಳ ಹೆಚ್ಚುತ್ತಿವೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಫೆಬ್ರುವರಿ 11ರಂದು ಗಡಾಫಿ ಕ್ರೀಡಾಂಗಣವನ್ನು ಐಸಿಸಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದೆ. ಹಾಗಿದ್ದರೆ ಗಡಾಫಿ ಸ್ಟೇಡಿಯಂನ ಸದ್ಯದ ಸ್ಥಿತಿ ಹೇಗಿದೆ ನೋಡೋಣ.
- ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಸ್ಟೇಡಿಯಂಗಳ ಸಿದ್ಧತೆಯ ಬಗ್ಗೆ ಕಳವಳ ಹೆಚ್ಚುತ್ತಿವೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಫೆಬ್ರುವರಿ 11ರಂದು ಗಡಾಫಿ ಕ್ರೀಡಾಂಗಣವನ್ನು ಐಸಿಸಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದೆ. ಹಾಗಿದ್ದರೆ ಗಡಾಫಿ ಸ್ಟೇಡಿಯಂನ ಸದ್ಯದ ಸ್ಥಿತಿ ಹೇಗಿದೆ ನೋಡೋಣ.
(1 / 11)
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಾಕಿಸ್ತಾನದ ತ್ರಿಕೋನ ಸರಣಿಯ ನಂತರ ಫೆಬ್ರುವರಿ 11ರಂದು ಕ್ರೀಡಾಂಗಣವನ್ನು ಬ್ರ್ಯಾಂಡಿಂಗ್ ಮತ್ತು ಇತರ ಕೆಲಸಗಳಿಗಾಗಿ ಐಸಿಸಿಗೆ ಹಸ್ತಾಂತರಿಸಲಾಗುವುದು ಎಂದು ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ.
(REUTERS)(2 / 11)
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸಲಿರುವ ಗಡಾಫಿ ಕ್ರೀಡಾಂಗಣ, ರಾಷ್ಟ್ರೀಯ ಕ್ರೀಡಾಂಗಣ ಮತ್ತು ರಾವಲ್ಪಿಂಡಿ ಕ್ರೀಡಾಂಗಣವನ್ನು ಹಸ್ತಾಂತರಿಸಲು ಜನವರಿ 31ರ ಗಡುವನ್ನು ಐಸಿಸಿ ನಿಗದಿಪಡಿಸಿತ್ತು. ಆದರೆ, ಅದರೊಳಗೆ ಗಡಾಫಿ ಸ್ಟೇಡಿಯಂ ಸಿದ್ಧಗೊಂಡಿಲ್ಲ.
(AP)(3 / 11)
ಗಡಾಫಿ ಕ್ರೀಡಾಂಗಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ಟೇಡಿಯಂ ಕೆಲಸ ನಡೆಯುತ್ತಿದ್ದು, ನಿರ್ಮಾಣ ಕಾರ್ಯದ ಕೆಲವು ಅವಶೇಷಗಳು ಇವೆ. ಅದನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಆರು ತಿಂಗಳ ಕೆಲಸದ ನಂತರ ಕ್ರೀಡಾಂಗಣ ರೂಪುಗೊಂಡಿದೆ" ಎಂದು ಮೂಲಗಳು ತಿಳಿಸಿವೆ.
(REUTERS)(4 / 11)
ಪಾಕಿಸ್ತಾನದ ಎಲ್ಲಾ ಮೂರು ಸ್ಥಳಗಳಲ್ಲಿ ನವೀಕರಣ, ನಿರ್ಮಾಣ ಮತ್ತು ಉಪಕರಣಗಳ ಸ್ಥಾಪನೆಗಾಗಿ ಪಿಸಿಬಿ ಸುಮಾರು 12 ಬಿಲಿಯನ್ ಪಾಕಿಸ್ತಾನ ರೂಪಾಯಿ ಖರ್ಚು ಮಾಡುತ್ತಿದೆ. ಅಂದರೆ 373 ಕೋಟಿ ರೂಪಾಯಿ.
(AP)(5 / 11)
ಎಂಟು ತಂಡಗಳು ಭಾಗಿಯಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯದೆ.
(AP)(6 / 11)
ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಮುಂಚಿತವಾಗಿ, ಜನವರಿ 29ರಂದು ಲಾಹೋರ್‌ನ ಗಡಾಫಿ ಕ್ರಿಕೆಟ್ ಕ್ರೀಡಾಂಗಣದ ಆವರಣ ಪ್ರದೇಶದಲ್ಲಿ ಕಾರ್ಮಿಕರು ಆಸನಗಳನ್ನು ಅಳವಡಿಸುತ್ತಿರುವ ದೃಶ್ಯ.
(AFP)(7 / 11)
ಕ್ರಿಕೆಟ್ ಟೂರ್ನಮೆಂಟ್‌ಗೆ ಮುಂಚಿತವಾಗಿ ಗಡಾಫಿ ಕ್ರಿಕೆಟ್ ಕ್ರೀಡಾಂಗಣದ ಆಸನ ಆವರಣ ಪ್ರದೇಶಕ್ಕೆ ಕಾರ್ಮಿಕರು ಬಣ್ಣ ಬಳಿಯುತ್ತಿರುವ ದೃಶ್ಯ. ( ಜನವರಿ 29ರಂದು)
(AFP)(8 / 11)
ಗಡಾಫಿ ಕ್ರಿಕೆಟ್ ಕ್ರೀಡಾಂಗಣದ ಆಸನ ಆವರಣ ಪ್ರದೇಶವವನ್ನು ಕಾರ್ಮಿಕರು ನವೀಕರಿಸುತ್ತಿರುವ ಫೋಟೋ. (ಜನವರಿ 29)
(AFP)(9 / 11)
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್‌ಗೆ ಮುಂಚಿತವಾಗಿ ಲಾಹೋರ್‌ನ ಗಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಂತ್ರಜ್ಞರು ಫ್ಲಡ್‌ಲೈಟ್‌ಗಳನ್ನು ಅಳವಡಿಸುತ್ತಿರುವ ದೃಶ್ಯ. (ಜನವರಿ 29)
(AFP)(10 / 11)
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ, ಜನವರಿ 29ರಂದು ಗಡಾಫಿ ಕ್ರೀಡಾಂಗಣದ ನವೀಕರಣದ ಸಮಯದಲ್ಲಿ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
(AP)ಇತರ ಗ್ಯಾಲರಿಗಳು