Melkote Festival: ಮೇಲುಕೋಟೆಯಲ್ಲಿಈಗ ರಾಜಮುಡಿ: ಗಿರಿಪ್ರದಕ್ಷಿಣೆ, ಅಷ್ಟತೀರ್ಥಗಳಲ್ಲಿ ಪವಿತ್ರ ಸ್ನಾನ, ಹೀಗಿತ್ತು ಭಕ್ತರ ಸಡಗರ
- ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಈಗ ವೈರಮುಡಿಯ ಸಡಗರ. ದಕ್ಷಿಣ ಭಾರತದ ರಾಜ್ಯಗಳ ಭಕ್ತರು ಹರಕೆಗಳನ್ನು ತೀರಿಸುತ್ತಾರೆ. ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ ಹೆಚ್ಚು ಗಿರಿಶಿಖರಗಳ ದಾರಿಯನ್ನು ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡುವುದು ವಿಶೇಷ.

(1 / 5)
ರಾಜ್ಯದ ವಿವಿಧಭಾಗಗಳು ಮತ್ತು ಆಂಧ್ರಪ್ರದೇಶದಿಂದ ಭಕ್ತರು ಹಾಗೂ ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ ಹೆಚ್ಚು ಗಿರಿಶಿಖರಗಳ ದಾರಿಯನ್ನು ಕ್ರಮಿಸಿದರು.
(2 / 5)
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತೀಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ಅಷ್ಠತೀರ್ಥೋತ್ಸವ ವೈಭವದಿಂದ ನೆರವೇರಿತು. ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ಬಂಗಾರದ ಪಾದುಕೆಗೆ ಪಂಚಕಲ್ಯಾಣಿ, ವೈಕುಂಠಗಂಗೆ ಹಾಗೂ ಎಲ್ಲಾ ಎಂಟು ತೀರ್ಥಗಳಲ್ಲಿ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.
(3 / 5)
ಗಿರಿಶಿಖರಗಳ ಮಧ್ಯೆ ಸಾಲಾಗಿ ಸಾಗುತ್ತಿದ್ದ ಭಕ್ತಸಮೂಹ ಅಲ್ಲಿಂದ ಆಗಮಿಸಿ ವೇದಪುಷ್ಕರಣಿಯಲ್ಲಿ ನಂತರ 500 ಅಡಿ ಎತ್ತರದಲ್ಲಿರುವ ರಾಮ ಸೀತೆಗಾಗಿ ಬಾಣಬಿಟ್ಟು ತೀರ್ಥ ತರಿಸಿದ ಧನುಷ್ಕೋಟಿಯಲ್ಲಿ ಸ್ನಾನ ಮಾಡಿದರು.
(4 / 5)
ಮೇಲುಕೋಟೆಯಲ್ಲಿರುವ ಹಲವಾರು ಗಿರಿಶಿಖರಗಳ ದಾರಿಯನ್ನು ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡಿದ ಭಕ್ತ ಸಮೂಹ.
ಇತರ ಗ್ಯಾಲರಿಗಳು