Parenting Tips: ಪೋಷಕರು ಮಕ್ಕಳ ವಿಚಾರದಲ್ಲಿ ಈ 5 ತಪ್ಪುಗಳನ್ನ ಎಂದಿಗೂ ಮಾಡಬಾರದು, ಇದು ಅವರ ಭವಿಷ್ಯಕ್ಕೆ ಮಾರಕ
ಮಕ್ಕಳನ್ನು ಬೆಳೆಸುವುದು ನಿಜಕ್ಕೂ ದೊಡ್ಡ ಜವಾಬ್ದಾರಿ. ಈ ವಿಚಾರದಲ್ಲಿ ಪೋಷಕರು ಕೊಂಚ ಎಚ್ಚರ ತಪ್ಪಿದರೂ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಪೋಷಕರು ಎಂದಿಗೂ ಮಕ್ಕಳ ಮುಂದೆ ಈ 5 ತಪ್ಪುಗಳನ್ನು ಮಾಡಬಾರದು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಕುಗ್ಗುತ್ತದೆ. ಬದುಕಿನ ಬಗ್ಗೆ ಭರವಸೆ ಹೊರಟು ಹೋಗಬಹುದು. ಅಂತಹ ತಪ್ಪುಗಳು ಯಾವುದು ನೋಡಿ.
(1 / 8)
ಮಕ್ಕಳು ಪೋಷಕರು ಅಥವಾ ಮನೆಯವರು ಮಾಡಿದ್ದನ್ನೇ ಕಲಿಯುತ್ತಾರೆ ಎಂಬ ಮಾತಿದೆ. ಪೋಷಕರು ಎಂದಿಗೂ ತಮ್ಮ ಮಕ್ಕಳೆದುರು ಕೆಲವು ವರ್ತನೆಗಳನ್ನು ತೋರಬಾರದು. ಇದರಿಂದ ಮಕ್ಕಳಿಗೆ ಪೋಷಕರಲ್ಲಿ ನಂಬಿಕೆ ಕುಸಿಯುತ್ತದೆ, ಅಲ್ಲದೇ ಸಂಬಂಧ ದುರ್ಬಲವಾಗುತ್ತದೆ. ಪೋಷಕರು ಮಕ್ಕಳ ಮುಂದೆ ಎಂದಿಗೂ ಮಾಡಬಾರದಂತಹ 5 ತಪ್ಪುಗಳಿವು. (shutterstock)
(2 / 8)
ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಪ್ರಗತಿಯ ಹಾದಿಯಲ್ಲಿ ನಡೆಯುವುದನ್ನು ನೋಡಬೇಕು ಎಂಬ ಬಯಕೆ ಇರುತ್ತದೆ. ಅದಕ್ಕಾಗಿ ಅವರು ತಮ್ಮ ಕಡೆಯಿಂದ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ತಂದೆ-ತಾಯಿ ತಿಳಿದೋ ತಿಳಿಯದೆಯೋ ತಮ್ಮ ಮಕ್ಕಳಿಗೆ ಒಳಿತಾಗುತ್ತದೆ ಎಂದುಕೊಂಡು ಈ ಕೆಲವು ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ಪೋಷಕರು ಮಾಡುವ ಈ ಕೆಲಸಗಳಿಂದ ಮಕ್ಕಳಿಗೆ ಖಂಡಿತ ಒಳ್ಳೆಯದಾಗುವುದಿಲ್ಲ. ಪೋಷಕರು ಮಾಡುವ ಈ 5 ತಪ್ಪುಗಳು ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು, ಎಚ್ಚರ. (shutterstock)
(3 / 8)
ನಕಾರಾತ್ಮಕ ಪ್ರತಿಕ್ರಿಯೆ: ಮಕ್ಕಳು ತಪ್ಪು ಮಾಡಿದಾಗ, ಹೆಚ್ಚಿನ ಪೋಷಕರು ತಕ್ಷಣವೇ ಅವರನ್ನು ನಿಂದಿಸುವ ಮೂಲಕ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಅಂತಹ ತಪ್ಪು ಮಾಡಬೇಡಿ. ಮಗುವಿಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಹೇಳುವ ಬದಲು, ಅವನಿಗೆ ಪ್ರೀತಿಯಿಂದ ವಿವರಿಸಲು ಪ್ರಯತ್ನಿಸಿ. ಮಕ್ಕಳ ತಪ್ಪುಗಳನ್ನು ಪದೇ ಪದೇ ಎತ್ತಿ ಆಡುವುದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ.(shutterstock)
(4 / 8)
ಇತರರೊಂದಿಗೆ ಹೋಲಿಸಬೇಡಿ: ನಿಮ್ಮ ಮಗುವಿನ ಕೆಲಸವನ್ನು ನೀವು ಯಾವಾಗಲೂ ಹೊಗಳಬೇಕು. ಮಕ್ಕಳನ್ನು ಎಂದಿಗೂ ಇತರ ಮಕ್ಕಳೊಂದಿಗೆ ಹೋಲಿಸಬೇಡಿ. ಹೀಗೆ ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಕುಂದುತ್ತದೆ.(shutterstock)
(5 / 8)
ಗೌಪ್ಯತೆ ಕಾಪಾಡಿಕೊಳ್ಳಿ: ಮಕ್ಕಳ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಎಲ್ಲಾ ಪೋಷಕರು ತಮ್ಮ ಮಕ್ಕಳ ಖಾಸಗಿತನವನ್ನು ಗೌರವಿಸಬೇಕು. ನೀವು ಇದನ್ನು ಮಾಡದಿದ್ದರೆ, ಭವಿಷ್ಯದಲ್ಲಿ ಮಗು ತನ್ನ ಯಾವುದೇ ರಹಸ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ.(shutterstock)
(6 / 8)
ನಿರ್ಧಾರಗಳಿಗೆ ಗೌರವ ಕೊಡಿ: ಮಕ್ಕಳು ತಮ್ಮ ಕನಸುಗಳನ್ನು ಮತ್ತು ಭವಿಷ್ಯದ ಭರವಸೆಗಳನ್ನು ಈಡೇರಿಸಲು ಯಾವಾಗಲೂ ಪ್ರೋತ್ಸಾಹಿಸಿ. ಮಕ್ಕಳ ನಿರ್ಧಾರಗಳಿಗೆ ಗೌರವ ಕೊಡಿ. ಸರಿ-ತಪ್ಪುಗಳನ್ನು ವಿಮರ್ಶೆ ಮಾಡಿ. (shutterstock)
(7 / 8)
ನಿಮ್ಮ ಸಮಸ್ಯೆಗಳ ಒತ್ತಡವನ್ನು ಮಗುವಿನ ಮೇಲೆ ಹೇರಬೇಡಿ: ಪೋಷಕರಾಗಿ, ನೀವು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೀರಿ. ಆದರೆ ನಿಮ್ಮ ಸಮಸ್ಯೆಗಳನ್ನು ನಿಮ್ಮ ಮಗುವಿನ ಮುಂದೆ ಎಂದಿಗೂ ಹೇಳುತ್ತಿರಬೇಡಿ. ವಯಸ್ಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಮಗುವಿನಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಚಿಂತೆ, ಸಮಸ್ಯೆ, ಒತ್ತಡಗಳಿಂದ ಮಗುವನ್ನು ದೂರವಿರಿಸಿ. (shutterstock)
ಇತರ ಗ್ಯಾಲರಿಗಳು