ಶಾಲೆಗೆ ಹೋಗುವ ಮಗುವಿಗೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ಊಟ, ತಿಂಡಿ ಕೊಡುವ ಅಭ್ಯಾಸ ನಿಮಗೂ ಇದ್ಯಾ, ಹಾಗಿದ್ರೆ ಈ ವಿಚಾರ ತಿಳಿದಿರಲೇಬೇಕು
Reasons to Avoid Using Plastic Tiffins:ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಬಣ್ಣ ಬಣ್ಣ, ವಿವಿಧ ಆಕಾರದ ಪ್ಲಾಸ್ಟಿಕ್ ಟಿಫಿನ್ ಬಾಕ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಕ್ಕಳನ್ನು ಸೆಳೆಯುವ ಇಂತಹ ಬಾಕ್ಸ್‌ಗಳಲ್ಲಿ ಊಟ, ತಿಂಡಿ ಹಾಕಿ ಕೊಡುವ ಅಭ್ಯಾಸ ನಿಮಗೂ ಇದ್ದರೆ ಈ ವಿಚಾರ ತಿಳಿದಿರಲೇಬೇಕು.
(1 / 7)
ಮಕ್ಕಳ ಶಾಲೆಯ ಊಟದ ಡಬ್ಬಿಯಾಗಲಿ, ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಗಳಾಗಲಿ ನಮ್ಮ ಜೀವನದಲ್ಲಿ ಹಲವು ಅಂಶಗಳಲ್ಲಿ ಪ್ಲಾಸ್ಟಿಕ್ ಇರುತ್ತದೆ. ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪೋಷಕರು ಪ್ಲಾಸ್ಟಿಕ್ ಬಾಕ್ಸ್ ಅಥವಾ ಬಾಟಲಿಗಳ ಬಳಕೆಯ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುವುದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ವರ್ಣರಂಜಿತ ಪ್ಲಾಸ್ಟಿಕ್ ಊಟದ ಪೆಟ್ಟಿಗೆಗಳು ಮತ್ತು ಕಂಟೈನರ್‌ಗಳು ನೋಟದಲ್ಲಿ ಸುಂದರವಾಗಿರುವುದಲ್ಲದೆ ಬೆಲೆಯಲ್ಲಿಯೂ ಸಹ ಅಗ್ಗವಾಗಿವೆ. ಪ್ಲಾಸ್ಟಿಕ್ ಪಾತ್ರೆಗಳ ಸೌಂದರ್ಯ ಮತ್ತು ಕಡಿಮೆ ಬೆಲೆ ಹೆಚ್ಚಾಗಿ ಜನರನ್ನು ಆಕರ್ಷಿಸುತ್ತದೆ. ಮಕ್ಕಳು ಕೂಡ ಇಂತಹ ಡಬ್ಬಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ರೀತಿಯ ರಂಗು-ರಂಗಿನ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿದೆ ಊಟ, ತಿಂಡಿಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಅನುಕೂಲವಿದೆ ನೋಡಿ. (shutterstock)
(2 / 7)
ಹಾರ್ಮೋನ್ ಅಸಮತೋಲನ: ಬಿಸ್ಪೆನಾಲ್ ಎ ಅಂಶ ಅನೇಕ ಪ್ಲಾಸ್ಟಿಕ್‌ಗಳಲ್ಲಿ ಕಂಡುಬರುವ ರಾಸಾಯನಿಕವಾಗಿದ್ದು, ಅದು ಹಾರ್ಮೋನ್ ಅಸಮತೋಲನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ಮೂಲವಾಗಬಹುದು. (shutterstock)
(3 / 7)
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರ ಅಥವಾ ನೀರನ್ನು ಇಟ್ಟುಕೊಳ್ಳುವುದರಿಂದ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಆಹಾರದೊಂದಿಗೆ ಮಿಶ್ರಣವಾಗುತ್ತದೆ. ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. (shutterstock)
(4 / 7)
ಇದಲ್ಲದೇ ಪ್ಲಾಸ್ಟಿಕ್ ಪಾತ್ರೆಗಳ ಅತಿಯಾದ ಬಳಕೆಯಿಂದ ಪ್ಲಾಸ್ಟಿಕ್ ಕಣಗಳು ಒಡೆದು ಮೈಕ್ರೊಪ್ಲಾಸ್ಟಿಕ್ ಕಣಗಳಾಗಿ ರೂಪುಗೊಂಡು ಆಹಾರ ಹಾಗೂ ನೀರಿನ ಮೂಲಕ ದೇಹವನ್ನು ಪ್ರವೇಶಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. (shutterstock)
(5 / 7)
ಪ್ರತಿದಿನ ಆಹಾರ ಮತ್ತು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲಿ ಬಳಸುವುದರಿಂದ ನಿಮಗೆ ಥೈರಾಯ್ಡ್ ಬರುವ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಚರ್ಮದ ಅಲರ್ಜಿಯನ್ನೂ ಉಂಟು ಮಾಡಬಹುದು. ಕೆಲವೊಮ್ಮೆ ಆಹಾರದೊಂದಿಗೆ ಪ್ಲಾಸ್ಟಿಕ್ ಕರಗುವ ಸಾಧ್ಯತೆಯೂ ಹೆಚ್ಚು. (shutterstock)
(6 / 7)
ಪ್ಲಾಸ್ಟಿಕ್ ಬಾಟಲಿ ಅಥವಾ ಟಿಫಿನ್ ಬಾಕ್ಸ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಆಹಾರ ಅಥವಾ ನೀರಿನಲ್ಲಿ ವಿಚಿತ್ರ ವಾಸನೆ ಬರಬಹುದು. ಇದರಿಂದ ಆಹಾರ ಬೇಗನೆ ಕೆಡುತ್ತದೆ.(shutterstock)
ಇತರ ಗ್ಯಾಲರಿಗಳು