ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತಾ ತಲೆಬಿಸಿ ಮಾಡ್ಕೋಬೇಡಿ: ಸೋಮವಾರದಿಂದ ಶುಕ್ರವಾರಕ್ಕೆ ಇಲ್ಲಿದೆ ಐಡಿಯಾ-parenting tips lunch box ideas for monday to friday healthy food for kids lunch box arc ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತಾ ತಲೆಬಿಸಿ ಮಾಡ್ಕೋಬೇಡಿ: ಸೋಮವಾರದಿಂದ ಶುಕ್ರವಾರಕ್ಕೆ ಇಲ್ಲಿದೆ ಐಡಿಯಾ

ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತಾ ತಲೆಬಿಸಿ ಮಾಡ್ಕೋಬೇಡಿ: ಸೋಮವಾರದಿಂದ ಶುಕ್ರವಾರಕ್ಕೆ ಇಲ್ಲಿದೆ ಐಡಿಯಾ

  • ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ದರೆ, ಅಮ್ಮಂದಿರಿಗೆ ಇರುವ ದೊಡ್ಡ ಟೆನ್ಷನ್‌ ಲಂಚ್‌ ಬಾಕ್ಸ್‌. ಮಕ್ಕಳು ಯಾವುದನ್ನು ಇಷ್ಟಪಟ್ಟು ತಿನ್ನುತ್ತಾರೆ, ಯಾವುದನ್ನು ತಿನ್ನುವುದಿಲ್ಲ ಎಂದೆಲ್ಲಾ ಯೋಚಿಸಿ, ವಿಭಿನ್ನ, ವೈವಿಧ್ಯಮಯ ಅಡುಗೆ ಮಾಡಿ ಕಳಿಸೋದೇ ದೊಡ್ಡ ಕೆಲಸ. ನಿಮಗೂ ಈ ಟೆನ್ಷನ್‌ ಇದ್ದರೆ ಇಲ್ಲಿದೆ ಸೋಮವಾರದಿಂದ ಶುಕ್ರವಾರದವರೆಗಿನ ಲಂಚ್‌ ಬಾಕ್ಸ್‌ ಮೆನ್ಯು.

ಪ್ರತಿದಿನ ಬೆಳಗಾದರೆ ಸಾಕು ಅಮ್ಮಂದಿರಿಗೆ ಕಾಡುವುದು ಒಂದೇ ಪ್ರಶ್ನೆ. ಇವತ್ತು ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತ. ಪ್ರತಿದಿನ ಒಂದೇ ರೀತಿಯ ತಿಂಡಿ ಕಳಿಸಿದರೆ ಮಕ್ಕಳು ತಿನ್ನುವುದಿಲ್ಲ. ಕಳಿಸಿದ ತಿಂಡಿ ಹಿಂದಕ್ಕೆ ಬರುತ್ತದೆ. ಅದಕ್ಕಾಗಿ ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿ ಹೊಸತನವಿರುವಂತೆ ನೋಡಿಕೊಳ್ಳಬೇಕಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ರೀತಿ ಐಡಿಯಾ ಮಾಡ್ಕೊಂಡ್ರೆ ನೀವೂ ಮತ್ತು ನಿಮ್ಮ ಮಕ್ಕಳು ಇಬ್ಬರೂ ಖುಷಿಯಿಂದಿರಬಹುದು. ನಿಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಈ 5 ವಿಭಿನ್ನ ಟಿಫಿನ್‌ ಐಡಿಯಾಗಳಿವೆ.
icon

(1 / 7)

ಪ್ರತಿದಿನ ಬೆಳಗಾದರೆ ಸಾಕು ಅಮ್ಮಂದಿರಿಗೆ ಕಾಡುವುದು ಒಂದೇ ಪ್ರಶ್ನೆ. ಇವತ್ತು ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತ. ಪ್ರತಿದಿನ ಒಂದೇ ರೀತಿಯ ತಿಂಡಿ ಕಳಿಸಿದರೆ ಮಕ್ಕಳು ತಿನ್ನುವುದಿಲ್ಲ. ಕಳಿಸಿದ ತಿಂಡಿ ಹಿಂದಕ್ಕೆ ಬರುತ್ತದೆ. ಅದಕ್ಕಾಗಿ ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿ ಹೊಸತನವಿರುವಂತೆ ನೋಡಿಕೊಳ್ಳಬೇಕಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ರೀತಿ ಐಡಿಯಾ ಮಾಡ್ಕೊಂಡ್ರೆ ನೀವೂ ಮತ್ತು ನಿಮ್ಮ ಮಕ್ಕಳು ಇಬ್ಬರೂ ಖುಷಿಯಿಂದಿರಬಹುದು. ನಿಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಈ 5 ವಿಭಿನ್ನ ಟಿಫಿನ್‌ ಐಡಿಯಾಗಳಿವೆ.(HT File Photo)

ಸೋಮವಾರದ ಲಂಚ್‌ ಬಾಕ್ಸ್‌ನಲ್ಲಿ ಒಣ ಹಣ್ಣುಗಳ ಜೊತೆ ಇದು ಇರಲಿ: ರವಿವಾರದ ರಜೆಯ ಮೂಡ್‌ನಲ್ಲೇ ಸೋಮವಾರ ಪ್ರಾರಂಭವಾಗುವುದರಿಂದ ಆ ದಿನ ಗಡಿಬಿಡಿ ಇರುತ್ತದೆ. ಅದಕ್ಕಾಗಿ ಸೋಮವಾರ ಸಿಂಪಲ್‌ ಲಂಚ್‌ ಬಾಕ್ಸ್‌ ತಯಾರಿಸಿ. ಒಣ ಹಣ್ಣುಗಳಾದ ಪಿಸ್ತಾ, ಗೋಡಂಬಿ, ಹುರಿದ ಬಾದಾಮಿಯ ಜೊತೆ ಆಲೂ ಸ್ಯಾಂಡ್‌ವಿಚ್‌ ಕಳುಹಿಸಿ. ಹೊಸ ಶೈಲಿಯಲ್ಲಿ ಸ್ಯಾಂಡ್‌ವಿಚ್ ಮಾಡಲು ಆಲೂ ಟಿಕ್ಕಿ ತಯಾರಿಸಬಹುದು. ಅದಕ್ಕೆ ಮೇಯನಸ್ ಮತ್ತು ಟೊಮೆಟೊ ಸಾಸ್‌ ಹಾಕಬಹುದು. ಈ ರೀತಿಯ ಸ್ಯಾಂಡ್‌ವಿಚ್‌ ಅನ್ನು ಮಕ್ಕಳು ಖಂಡಿತಾ ಇಷ್ಟಪಡುತ್ತಾರೆ. ಆಲೂ ಟಿಕ್ಕಿಯನ್ನು ಹಿಂದಿನ ದಿನವೇ ತಯಾರಿಸಿಟ್ಟುಕೊಳ್ಳಬಹುದು.
icon

(2 / 7)

ಸೋಮವಾರದ ಲಂಚ್‌ ಬಾಕ್ಸ್‌ನಲ್ಲಿ ಒಣ ಹಣ್ಣುಗಳ ಜೊತೆ ಇದು ಇರಲಿ: ರವಿವಾರದ ರಜೆಯ ಮೂಡ್‌ನಲ್ಲೇ ಸೋಮವಾರ ಪ್ರಾರಂಭವಾಗುವುದರಿಂದ ಆ ದಿನ ಗಡಿಬಿಡಿ ಇರುತ್ತದೆ. ಅದಕ್ಕಾಗಿ ಸೋಮವಾರ ಸಿಂಪಲ್‌ ಲಂಚ್‌ ಬಾಕ್ಸ್‌ ತಯಾರಿಸಿ. ಒಣ ಹಣ್ಣುಗಳಾದ ಪಿಸ್ತಾ, ಗೋಡಂಬಿ, ಹುರಿದ ಬಾದಾಮಿಯ ಜೊತೆ ಆಲೂ ಸ್ಯಾಂಡ್‌ವಿಚ್‌ ಕಳುಹಿಸಿ. ಹೊಸ ಶೈಲಿಯಲ್ಲಿ ಸ್ಯಾಂಡ್‌ವಿಚ್ ಮಾಡಲು ಆಲೂ ಟಿಕ್ಕಿ ತಯಾರಿಸಬಹುದು. ಅದಕ್ಕೆ ಮೇಯನಸ್ ಮತ್ತು ಟೊಮೆಟೊ ಸಾಸ್‌ ಹಾಕಬಹುದು. ಈ ರೀತಿಯ ಸ್ಯಾಂಡ್‌ವಿಚ್‌ ಅನ್ನು ಮಕ್ಕಳು ಖಂಡಿತಾ ಇಷ್ಟಪಡುತ್ತಾರೆ. ಆಲೂ ಟಿಕ್ಕಿಯನ್ನು ಹಿಂದಿನ ದಿನವೇ ತಯಾರಿಸಿಟ್ಟುಕೊಳ್ಳಬಹುದು.(HT File Photo)

ಮಂಗಳವಾರದ ಟಿಫಿನ್‌ನಲ್ಲಿರಲಿ ಪೌಷ್ಠಿಕಾಂಶ ಭರಿತ ಆಹಾರ: ಪ್ರತಿದಿನ ಮಕ್ಕಳ ಲಂಚ್‌ ಬಾಕ್ಸ್‌ ವಿಭಿನ್ನ ಮತ್ತು ವೈವಿಧ್ಯಮಯದಿಂದ ಕೂಡಿದ್ದರೆ ಮಕ್ಕಳು ಉತ್ಸಾಹದಿಂದ ತಿನ್ನುತ್ತಾರೆ. ಮಂಗಳವಾರದ ಬಾಕ್ಸ್‌ನಲ್ಲಿ ಬಾಳೆಹಣ್ಣು, ಸೌತೆಕಾಯಿ, ಸೇಬು, ಮೊಳಕೆಯೊಡೆದ ಕಾಳುಗಳಿರಲಿ. ಅದರ ಜೊತೆಗೆ ಬೆಳಗ್ಗೆ ಮನೆಯಲ್ಲಿ ಮಾಡಿದ ತಿಂಡಿ ಇರಲಿ.
icon

(3 / 7)

ಮಂಗಳವಾರದ ಟಿಫಿನ್‌ನಲ್ಲಿರಲಿ ಪೌಷ್ಠಿಕಾಂಶ ಭರಿತ ಆಹಾರ: ಪ್ರತಿದಿನ ಮಕ್ಕಳ ಲಂಚ್‌ ಬಾಕ್ಸ್‌ ವಿಭಿನ್ನ ಮತ್ತು ವೈವಿಧ್ಯಮಯದಿಂದ ಕೂಡಿದ್ದರೆ ಮಕ್ಕಳು ಉತ್ಸಾಹದಿಂದ ತಿನ್ನುತ್ತಾರೆ. ಮಂಗಳವಾರದ ಬಾಕ್ಸ್‌ನಲ್ಲಿ ಬಾಳೆಹಣ್ಣು, ಸೌತೆಕಾಯಿ, ಸೇಬು, ಮೊಳಕೆಯೊಡೆದ ಕಾಳುಗಳಿರಲಿ. ಅದರ ಜೊತೆಗೆ ಬೆಳಗ್ಗೆ ಮನೆಯಲ್ಲಿ ಮಾಡಿದ ತಿಂಡಿ ಇರಲಿ.(Freepik)

ಬುಧವಾರಕ್ಕಿರಲಿ ಸಂಪೂರ್ಣ ಊಟ: ಪ್ರತಿದಿನ ಹೊಸರೀತಿಯಲ್ಲಿ ಲಂಚ್‌ ಪ್ಯಾಕ್‌ ಮಾಡಿ ಕಳುಹಿಸಿದರೆ ಮಕ್ಕಳು ಡಬ್ಬಿ ಖಾಲಿ ಮಾಡಿಕೊಂಡೇ ಬರುತ್ತಾರೆ. ಹಾಗಾಗಿ ಬುಧವಾರದ ದಿನ ಚಪಾತಿ, ಪಲ್ಯ, ಸೇಬು ಹಣ್ಣು ಅಥವಾ ಮಕ್ಕಳು ಇಷ್ಟಪಡುವ ಹಣ್ಣು ಜೊತೆಗೆ‌ ಯಾವುದಾದರೂ ಒಂದು ಸಿಹಿ ತಿಂಡಿ ಹಾಕಿ ಲಂಚ್ ಪ್ಯಾಕ್‌ ಮಾಡಿ. ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಡಬ್ಬಿ ಖಾಲಿಯಾಗಿರುತ್ತದೆ.
icon

(4 / 7)

ಬುಧವಾರಕ್ಕಿರಲಿ ಸಂಪೂರ್ಣ ಊಟ: ಪ್ರತಿದಿನ ಹೊಸರೀತಿಯಲ್ಲಿ ಲಂಚ್‌ ಪ್ಯಾಕ್‌ ಮಾಡಿ ಕಳುಹಿಸಿದರೆ ಮಕ್ಕಳು ಡಬ್ಬಿ ಖಾಲಿ ಮಾಡಿಕೊಂಡೇ ಬರುತ್ತಾರೆ. ಹಾಗಾಗಿ ಬುಧವಾರದ ದಿನ ಚಪಾತಿ, ಪಲ್ಯ, ಸೇಬು ಹಣ್ಣು ಅಥವಾ ಮಕ್ಕಳು ಇಷ್ಟಪಡುವ ಹಣ್ಣು ಜೊತೆಗೆ‌ ಯಾವುದಾದರೂ ಒಂದು ಸಿಹಿ ತಿಂಡಿ ಹಾಕಿ ಲಂಚ್ ಪ್ಯಾಕ್‌ ಮಾಡಿ. ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಡಬ್ಬಿ ಖಾಲಿಯಾಗಿರುತ್ತದೆ.(Freepik)

ಗುರುವಾರಕ್ಕಿರಲಿ ರೈಸ್‌ ಐಟಮ್‌: ಗುರುವಾರದ ಲಂಚ್‌ನಲ್ಲಿ ಮಕ್ಕಳು ಇಷ್ಟಪಡುವ ರೈಸ್‌ ಐಟಮ್‌ ಪ್ಯಾಕ್‌ ಮಾಡಿ. ಪಲಾವ್‌, ಫ್ರೈಡ್‌ ರೈಸ್‌, ಪುಳಿಯೊಗರೆ ಯಾವುದೇ ಇರಬಹುದು ಮಕ್ಕಳಿಗೆ ಅದು ಇಷ್ಟವಾಗಿರಬೇಕು. ಸ್ವಲ್ಪ ರೈಸ್‌ ಐಟಮ್‌, ರೋಸ್ಟ್‌ ಮಾಡಿದ ಹಪ್ಪಳ ಜೊತೆಗೆ ಒಣ ಹಣ್ಣುಗಳಿಂದ ಲಂಚ್‌ ಪ್ಯಾಕ್‌ ಮಾಡಿ. ಡಬ್ಬಿಯನ್ನು ಕಲರ್‌ಫುಲ್‌ ಮಾಡಿ ಕಳುಹಿಸಿ.
icon

(5 / 7)

ಗುರುವಾರಕ್ಕಿರಲಿ ರೈಸ್‌ ಐಟಮ್‌: ಗುರುವಾರದ ಲಂಚ್‌ನಲ್ಲಿ ಮಕ್ಕಳು ಇಷ್ಟಪಡುವ ರೈಸ್‌ ಐಟಮ್‌ ಪ್ಯಾಕ್‌ ಮಾಡಿ. ಪಲಾವ್‌, ಫ್ರೈಡ್‌ ರೈಸ್‌, ಪುಳಿಯೊಗರೆ ಯಾವುದೇ ಇರಬಹುದು ಮಕ್ಕಳಿಗೆ ಅದು ಇಷ್ಟವಾಗಿರಬೇಕು. ಸ್ವಲ್ಪ ರೈಸ್‌ ಐಟಮ್‌, ರೋಸ್ಟ್‌ ಮಾಡಿದ ಹಪ್ಪಳ ಜೊತೆಗೆ ಒಣ ಹಣ್ಣುಗಳಿಂದ ಲಂಚ್‌ ಪ್ಯಾಕ್‌ ಮಾಡಿ. ಡಬ್ಬಿಯನ್ನು ಕಲರ್‌ಫುಲ್‌ ಮಾಡಿ ಕಳುಹಿಸಿ.

ಶುಕ್ರವಾರದ ಲಂಚ್‌ನಲ್ಲಿರಲಿ ಗಟ್ಟಿ ಮೊಸರು: ಮಕ್ಕಳಿಗೆ ಹಾಲು, ಮೊಸರು ಮುಂತಾದ ಡೈರಿ ಆಹಾರ‌ಗಳನ್ನು ನೀಡುವುದು ಅತಿ ಅವಶ್ಯಕ. ಅದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಶುಕ್ರವಾರದ ಲಂಚ್‌ನಲ್ಲಿ ಗಟ್ಟಿ ಮೊಸರು ಇರಲಿ. ಶುಕ್ರವಾರ ಆಲೂ, ಪಾಲಕ್‌ ಅಥವಾ ಮೆಂತ್ಯ ಸೊಪ್ಪಿನಿಂದ ಪರೋಟ ತಯಾರಿಸಿ. ಇದಕ್ಕೆ ಮೊಸರು ಬೆಸ್ಟ್ ಕಾಂಬಿನೇಷನ್‌. ಅವುಗಳ ಜೊತೆ ಹಣ್ಣುಗಳನ್ನು ಇಡಿ. ಪ್ರತಿದಿನ ವಿಭಿನ್ನವಾಗಿ ಲಂಚ್‌ ಪ್ಯಾಕ್‌ ಮಾಡುವುದರಿಂದ ಮಕ್ಕಳು ಏನೂ ತಿನ್ನಲೇ ಇಲ್ಲ ಎಂಬ ಚಿಂತೆ ತಾಯಂದಿರಿಗೆ ಇರುವುದಿಲ್ಲ. ಆಹಾರದ ವಿಷಯದಲ್ಲಿ ಮಕ್ಕಳನ್ನು ಬೈಯುವುದರ ಬದಲಿಗೆ ಮಕ್ಕಳೇ ಸಂತೋಷದಿಂದ ಊಟ ಮಾಡಿ ಬರುವಂತೆ ಮಾಡಬಹುದು.
icon

(6 / 7)

ಶುಕ್ರವಾರದ ಲಂಚ್‌ನಲ್ಲಿರಲಿ ಗಟ್ಟಿ ಮೊಸರು: ಮಕ್ಕಳಿಗೆ ಹಾಲು, ಮೊಸರು ಮುಂತಾದ ಡೈರಿ ಆಹಾರ‌ಗಳನ್ನು ನೀಡುವುದು ಅತಿ ಅವಶ್ಯಕ. ಅದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಶುಕ್ರವಾರದ ಲಂಚ್‌ನಲ್ಲಿ ಗಟ್ಟಿ ಮೊಸರು ಇರಲಿ. ಶುಕ್ರವಾರ ಆಲೂ, ಪಾಲಕ್‌ ಅಥವಾ ಮೆಂತ್ಯ ಸೊಪ್ಪಿನಿಂದ ಪರೋಟ ತಯಾರಿಸಿ. ಇದಕ್ಕೆ ಮೊಸರು ಬೆಸ್ಟ್ ಕಾಂಬಿನೇಷನ್‌. ಅವುಗಳ ಜೊತೆ ಹಣ್ಣುಗಳನ್ನು ಇಡಿ. ಪ್ರತಿದಿನ ವಿಭಿನ್ನವಾಗಿ ಲಂಚ್‌ ಪ್ಯಾಕ್‌ ಮಾಡುವುದರಿಂದ ಮಕ್ಕಳು ಏನೂ ತಿನ್ನಲೇ ಇಲ್ಲ ಎಂಬ ಚಿಂತೆ ತಾಯಂದಿರಿಗೆ ಇರುವುದಿಲ್ಲ. ಆಹಾರದ ವಿಷಯದಲ್ಲಿ ಮಕ್ಕಳನ್ನು ಬೈಯುವುದರ ಬದಲಿಗೆ ಮಕ್ಕಳೇ ಸಂತೋಷದಿಂದ ಊಟ ಮಾಡಿ ಬರುವಂತೆ ಮಾಡಬಹುದು.(Slurrp)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.


ಇತರ ಗ್ಯಾಲರಿಗಳು