ಕನ್ನಡ ಸುದ್ದಿ  /  Photo Gallery  /  Parenting Tips Parents Love And Teaching Discipline Future Goal Independency Positive Relationship Kannada News Rst

Parenting: ಮಕ್ಕಳಿಗೆ ಪ್ರೀತಿಯೊಂದಿಗೆ ಶಿಸ್ತನ್ನೂ ಕಲಿಸಿ; ಸುಭದ್ರ ಭವಿಷ್ಯಕ್ಕೆ ಇದೇ ಬುನಾದಿ

Parenting: ಮಕ್ಕಳ ಸುಭದ್ರ ಭವಿಷ್ಯಕ್ಕೆ ಪೋಷಕರು ಪ್ರೀತಿಧಾರೆ ಬೆಳೆಸುವುದು ಮಾತ್ರವಲ್ಲ, ಅವರಲ್ಲಿ ಶಿಸ್ತು, ಸ್ವಾತಂತ್ರ್ಯ ಭಾವ, ಜವಾಬ್ದಾರಿಯನ್ನು ಉತ್ತೇಜಿಸುವುದು ಅವಶ್ಯ. ಹಾಗಾದರೆ ಪಾಸಿಟಿವ್‌ ಪೇರೆಂಟಿಂಗ್‌ ಎಂದರೆ ಹೇಗಿರಬೇಕು.  

ಪಾಸಿಟಿವ್‌ ಪೇರೆಂಟಿಂಗ್‌ ಅಥವಾ ಧನಾತ್ಮಕ ಪೇರೆಂಟಿಂಗ್‌ ಎನ್ನುವುದು ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಅರಿವಿನ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಗುವಿನ ಭವಿಷ್ಯದ ಏಳಿಗೆಗೆ ಪೋಷಕರು ಮಾಡಬಹುದಾದ ಸಕಾರಾತ್ಮಕ ಸಲಹೆಗಳು ಇಲ್ಲಿವೆ. 
icon

(1 / 7)

ಪಾಸಿಟಿವ್‌ ಪೇರೆಂಟಿಂಗ್‌ ಅಥವಾ ಧನಾತ್ಮಕ ಪೇರೆಂಟಿಂಗ್‌ ಎನ್ನುವುದು ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಅರಿವಿನ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಗುವಿನ ಭವಿಷ್ಯದ ಏಳಿಗೆಗೆ ಪೋಷಕರು ಮಾಡಬಹುದಾದ ಸಕಾರಾತ್ಮಕ ಸಲಹೆಗಳು ಇಲ್ಲಿವೆ. (Freepik)

ಸಕಾರಾತ್ಮಕ ಸಂಬಂಧ ಬೆಳೆಸಿಕೊಳ್ಳಿ: ನಿಮ್ಮ ಮಗುವಿನೊಂದಿಗೆ ಸಕಾರಾತ್ಮಕ ಸಂಬಂಧ ಇರಿಸಿಕೊಳ್ಳುವುದು ಪಾಸಿಟಿವ್‌ ಪೇರೆಂಟಿಂಗ್‌ನ ಭದ್ರ ಬುನಾದಿಯಾಗಿದೆ. ಮಕ್ಕಳ ಆಸಕ್ತಿಯ ವಿಷಯಗಳಲ್ಲಿ ನೀವೂ ಜೊತೆಯಾಗಿ, ಮಕ್ಕಳೊಂದಿಗೆ ಸಮಯ ಕಳೆಯಿರಿ. ಮಕ್ಕಳ ಬಯಕೆಗಳಿಗೆ ಕಿವಿಯಾಗಿ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.
icon

(2 / 7)

ಸಕಾರಾತ್ಮಕ ಸಂಬಂಧ ಬೆಳೆಸಿಕೊಳ್ಳಿ: ನಿಮ್ಮ ಮಗುವಿನೊಂದಿಗೆ ಸಕಾರಾತ್ಮಕ ಸಂಬಂಧ ಇರಿಸಿಕೊಳ್ಳುವುದು ಪಾಸಿಟಿವ್‌ ಪೇರೆಂಟಿಂಗ್‌ನ ಭದ್ರ ಬುನಾದಿಯಾಗಿದೆ. ಮಕ್ಕಳ ಆಸಕ್ತಿಯ ವಿಷಯಗಳಲ್ಲಿ ನೀವೂ ಜೊತೆಯಾಗಿ, ಮಕ್ಕಳೊಂದಿಗೆ ಸಮಯ ಕಳೆಯಿರಿ. ಮಕ್ಕಳ ಬಯಕೆಗಳಿಗೆ ಕಿವಿಯಾಗಿ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.(pexels/Andrea Piacquadio1)

ಸ್ವಾತಂತ್ರ್ಯರಾಗಿವುದನ್ನು ಕಲಿಸಿ: ಮಗುವಿನ ಅಥವಾ ಮಕ್ಕಳ ಬೆಳವಣಿಗೆಗೆ ಅವರನ್ನು ಸ್ವಾತಂತ್ರರನ್ನಾಗಿಸಿ ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳು ತಮ್ಮ ಸ್ವಂತ ಆಯ್ಕೆ ಮಾಡಿಕೊಳ್ಳಲು ಸಮರ್ಥರು ಎನ್ನಿಸಿದಾಗ ಅವರ ಆಯ್ಕೆಗೆ ಅವಕಾಶ ನೀಡಿ, ಇದು ಅವರ ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ಸಮಸ್ಯೆ-ಪರಿಹರಿಸುವ ಕೌಶಲಗಳನ್ನು ಉತ್ತೇಜಿಸುತ್ತದೆ.
icon

(3 / 7)

ಸ್ವಾತಂತ್ರ್ಯರಾಗಿವುದನ್ನು ಕಲಿಸಿ: ಮಗುವಿನ ಅಥವಾ ಮಕ್ಕಳ ಬೆಳವಣಿಗೆಗೆ ಅವರನ್ನು ಸ್ವಾತಂತ್ರರನ್ನಾಗಿಸಿ ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳು ತಮ್ಮ ಸ್ವಂತ ಆಯ್ಕೆ ಮಾಡಿಕೊಳ್ಳಲು ಸಮರ್ಥರು ಎನ್ನಿಸಿದಾಗ ಅವರ ಆಯ್ಕೆಗೆ ಅವಕಾಶ ನೀಡಿ, ಇದು ಅವರ ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ಸಮಸ್ಯೆ-ಪರಿಹರಿಸುವ ಕೌಶಲಗಳನ್ನು ಉತ್ತೇಜಿಸುತ್ತದೆ.(Image Credit: Pinterest)

ಜವಾಬ್ದಾರಿಯನ್ನು ಉತ್ತೇಜಿಸಿ: ನಿಮ್ಮ ಮಗುವಿಗೆ ಜವಾಬ್ದಾರಿಯನ್ನು ಕಲಿಸುವುದು ಬಹಳ ಮುಖ್ಯ. ಇದರಿಂದ ಅವರ ಕೆಲಸ ಕಾರ್ಯಗಳಿಗೆ ಅವರೇ ಹೊಣೆಯಾಗುತ್ತಾರೆ. ನಿಮ್ಮ ಮಗುವಿಗೆ ವಯಸ್ಸಿಗೆ ಸೂಕ್ತವಾದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸಿ, ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆ ಮಡಿಸುವುದು, ಆಟವಾಡಿದ ನಂತರ ಆಟಿಕೆಗಳನ್ನು ನೀಟಾಗಿ ಜೋಡಿಸಿ ಇಡುವುದು ಇಂತಹ ಅಭ್ಯಾಸಗಳನ್ನು ರೂಢಿಸಿ.
icon

(4 / 7)

ಜವಾಬ್ದಾರಿಯನ್ನು ಉತ್ತೇಜಿಸಿ: ನಿಮ್ಮ ಮಗುವಿಗೆ ಜವಾಬ್ದಾರಿಯನ್ನು ಕಲಿಸುವುದು ಬಹಳ ಮುಖ್ಯ. ಇದರಿಂದ ಅವರ ಕೆಲಸ ಕಾರ್ಯಗಳಿಗೆ ಅವರೇ ಹೊಣೆಯಾಗುತ್ತಾರೆ. ನಿಮ್ಮ ಮಗುವಿಗೆ ವಯಸ್ಸಿಗೆ ಸೂಕ್ತವಾದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸಿ, ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆ ಮಡಿಸುವುದು, ಆಟವಾಡಿದ ನಂತರ ಆಟಿಕೆಗಳನ್ನು ನೀಟಾಗಿ ಜೋಡಿಸಿ ಇಡುವುದು ಇಂತಹ ಅಭ್ಯಾಸಗಳನ್ನು ರೂಢಿಸಿ.(pexels/Andrea Piacquadio)

ಪ್ರಶಂಸೆ ಮತ್ತು ಪ್ರತಿಫಲ: ನಕಾರಾತ್ಮಕ ನಡವಳಿಕೆಗಾಗಿ ನಿಮ್ಮ ಮಗುವನ್ನು ಶಿಕ್ಷಿಸುವ ಬದಲು ಧನಾತ್ಮಕ ನಡವಳಿಕೆಗಾಗಿ ಪ್ರಶಂಸಿಸಿ ಮತ್ತು ಬಹುಮಾನ ನೀಡಿ. ಈ ವಿಧಾನವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಕಾರಾತ್ಮಕ ಸ್ವಾಭಿಮಾನವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
icon

(5 / 7)

ಪ್ರಶಂಸೆ ಮತ್ತು ಪ್ರತಿಫಲ: ನಕಾರಾತ್ಮಕ ನಡವಳಿಕೆಗಾಗಿ ನಿಮ್ಮ ಮಗುವನ್ನು ಶಿಕ್ಷಿಸುವ ಬದಲು ಧನಾತ್ಮಕ ನಡವಳಿಕೆಗಾಗಿ ಪ್ರಶಂಸಿಸಿ ಮತ್ತು ಬಹುಮಾನ ನೀಡಿ. ಈ ವಿಧಾನವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಕಾರಾತ್ಮಕ ಸ್ವಾಭಿಮಾನವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.(Pexels)

ಮಿತಿ ಹೇರಿ ಅಥವಾ ಗಡಿ ರೂಪಿಸಿ: ಮಕ್ಕಳ ಕೆಲಸದ ಮೇಲೆ ಮಿತಿ ಹೇರುವುದು ಹಾಗೂ ಗಡಿ ರೂಪಿಸುವುದರಿಂದ ಅವುಗಳಿಗೆ ತಮ್ಮ ತಪ್ಪು ಯಾವುದು, ಸರಿ ಯಾವುದು ಎಂಬುದು ಅರಿವಾಗುತ್ತದೆ. ಮಕ್ಕಳಲ್ಲಿ ಸ್ವಯಂ ಶಿಸ್ತು ಬೆಳೆಯಲು ಇದು ಸಹಕಾರಿ, 
icon

(6 / 7)

ಮಿತಿ ಹೇರಿ ಅಥವಾ ಗಡಿ ರೂಪಿಸಿ: ಮಕ್ಕಳ ಕೆಲಸದ ಮೇಲೆ ಮಿತಿ ಹೇರುವುದು ಹಾಗೂ ಗಡಿ ರೂಪಿಸುವುದರಿಂದ ಅವುಗಳಿಗೆ ತಮ್ಮ ತಪ್ಪು ಯಾವುದು, ಸರಿ ಯಾವುದು ಎಂಬುದು ಅರಿವಾಗುತ್ತದೆ. ಮಕ್ಕಳಲ್ಲಿ ಸ್ವಯಂ ಶಿಸ್ತು ಬೆಳೆಯಲು ಇದು ಸಹಕಾರಿ, (Pexels )

ಪ್ರೀತಿಯೊಂದಿಗೆ ಶಿಸ್ತನ್ನು ರೂಢಿಸಿ: ತಂದೆ-ತಾಯಿಗಳು ಮಕ್ಕಳಿಗೆ ಪೀತಿ ನೀಡುವುದು ಮಾತ್ರವಲ್ಲ, ಶಿಸ್ತು ರೂಪಿಸುವುದು ಬಹಳ ಮುಖ್ಯ. ಮಕ್ಕಳಲ್ಲಿ ಧನಾತ್ಮಕ ವರ್ತನೆಗಳನ್ನು ಬೆಳೆಸುವುದು ಅವಶ್ಯ. ಆದರೆ ಪ್ರೀತಿಯೊಂದಿಗೆ ಶಿಸ್ತನ್ನು ಕಲಿಸುವುದರಿಂದ ಮಕ್ಕಳು ಬೇಗನೆ ಕಲಿಯುತ್ತೇವೆ, 
icon

(7 / 7)

ಪ್ರೀತಿಯೊಂದಿಗೆ ಶಿಸ್ತನ್ನು ರೂಢಿಸಿ: ತಂದೆ-ತಾಯಿಗಳು ಮಕ್ಕಳಿಗೆ ಪೀತಿ ನೀಡುವುದು ಮಾತ್ರವಲ್ಲ, ಶಿಸ್ತು ರೂಪಿಸುವುದು ಬಹಳ ಮುಖ್ಯ. ಮಕ್ಕಳಲ್ಲಿ ಧನಾತ್ಮಕ ವರ್ತನೆಗಳನ್ನು ಬೆಳೆಸುವುದು ಅವಶ್ಯ. ಆದರೆ ಪ್ರೀತಿಯೊಂದಿಗೆ ಶಿಸ್ತನ್ನು ಕಲಿಸುವುದರಿಂದ ಮಕ್ಕಳು ಬೇಗನೆ ಕಲಿಯುತ್ತೇವೆ, (Pixabay)


IPL_Entry_Point

ಇತರ ಗ್ಯಾಲರಿಗಳು