ಸ್ಪೇನ್ ಮಣಿಸಿ ಸತತ 2ನೇ ಬಾರಿಗೆ ಒಲಿಂಪಿಕ್ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ; ಶ್ರೀಜೇಶ್‌ಗೆ ಗೆಲುವಿನ ವಿದಾಯ
- ಭಾರತ ಹಾಕಿ ತಂಡವು, ಮೂರು ವರ್ಷಗಳ ಹಿಂದೆ ಟೋಕಿಯೋದಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ತಂಡದ ವಿರುದ್ಧ 2-1 ಅಂತರದಿಂದ ರೋಚಕವಾಗಿ ಗೆದ್ದ ಭಾರತ ಒಲಂಪಿಕ್ಸ್‌ನಲ್ಲಿ ಸತತವಾಗಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
- ಭಾರತ ಹಾಕಿ ತಂಡವು, ಮೂರು ವರ್ಷಗಳ ಹಿಂದೆ ಟೋಕಿಯೋದಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ತಂಡದ ವಿರುದ್ಧ 2-1 ಅಂತರದಿಂದ ರೋಚಕವಾಗಿ ಗೆದ್ದ ಭಾರತ ಒಲಂಪಿಕ್ಸ್‌ನಲ್ಲಿ ಸತತವಾಗಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
(1 / 6)
ಕಂಚಿನ ಪದಕ ಗೆಲುವಿನೊಂದಿಗೆ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಭಾರತ ತಂಡ ಗೆಲುವಿನ ಹಾಗೂ ಪದಕದ ವಿದಾಯ ನೀಡಿದೆ. ಶ್ರೀಜೇಶ್ ಅವರಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಒಲಿಂಪಿಕ್ಸ್ ಹಾಕಿಯು ತನ್ನ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯಾವಳಿ ಎಂದು ಶ್ರೀಜೇಶ ಹೇಳಿದ್ದರು. ಅವರಿಗೆ ಗೆಲುವಿನ ಪರಿಪೂರ್ಣ ವಿದಾಯ ಸಿಕ್ಕಿದೆ.(PTI)
(2 / 6)
ಪೂಲ್ ಹಂತದಲ್ಲಿ ಬಲಿಷ್ಠ ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿದ್ದ ಭಾರತ, ಬೆಲ್ಜಿಯಂ ವಿರುದ್ಧ 1-2 ಅಂತರದಲ್ಲಿ ಸೋತು ಕ್ವಾರ್ಟರ್ ಫೈನಲ್ ತಲುಪಿತ್ತು. ಗ್ರೇಟ್ ಬ್ರಿಟನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ರೋಮಾಂಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿತ್ತು. (AP)
(3 / 6)
ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಅಮೋಘ ಪ್ರದರ್ಶನ ನೀಡಿತು. ಕೊನೆಯ ಹಂತದಲ್ಲಿ ರೋಚಕ ಸೋಲು ಎದುರಿಸಬೇಕಾಯ್ತು. ಹೀಗಾಗಿ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಕಣಕ್ಕಿಳಿದು ಗೆದ್ದು ಬೀಗಿದೆ.(PTI)
(4 / 6)
ಸ್ಪೇನ್ ಪರ ನಾಯಕ ಮಾರ್ಕ್ ಮಿರಾಲೆಸ್ 18ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಮೊದಲ ಗೋಲು ಗಳಿಸಿದರು. ಹಿನ್ನಡೆಯಲ್ಲಿದ್ದ ಭಾರತಕ್ಕೆ ನಾಯಕ ಮುನ್ನಡೆ ತಂದುಕೊಟ್ಟರು. ಭಾರತದ ಪರ ನಾಯಕ ಹರ್ಮನ್ ಪ್ರೀತ್ ಸಿಂಗ್ 30 ಮತ್ತು 33ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.(PTI)
(5 / 6)
ಪಂದ್ಯದ ಕೊನೆಯ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಸ್ಪೇನ್ ಆಕ್ರಮಣಕಾರಿ ಆಟವಾಡಿತು. ಆದರೆ, ಅನುಭವಿ ಗೋಲ್ ಕೀಪರ್ ಮಾಡಿದ ಆಕರ್ಷಕ ಸೇವ್‌ನಿಂದಾಗಿ ಎದುರಾಳಿಗೆ ಅಂಕ ಗಳಿಸಲು ಸಾಧ್ಯವಾಗಲಿಲ್ಲ.(AFP)
ಇತರ ಗ್ಯಾಲರಿಗಳು