ಪ್ಯಾರಿಸ್ ಒಲಿಂಪಿಕ್ಸ್ ಜೆರ್ಸಿಯನ್ನು ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಕ್ಕೆ ನೀಡಿದ ನೀರಜ್ ಚೋಪ್ರಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್ ಒಲಿಂಪಿಕ್ಸ್ ಜೆರ್ಸಿಯನ್ನು ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಕ್ಕೆ ನೀಡಿದ ನೀರಜ್ ಚೋಪ್ರಾ

ಪ್ಯಾರಿಸ್ ಒಲಿಂಪಿಕ್ಸ್ ಜೆರ್ಸಿಯನ್ನು ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಕ್ಕೆ ನೀಡಿದ ನೀರಜ್ ಚೋಪ್ರಾ

  • ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ 2024ರ ಪ್ಯಾರಿಸ್ ಒಲಿಂಪಿಕ್ಸ್‌ ಪದಕ ಗೆಲುವಿನ ವೇಳೆ ಧರಿಸಿದ್ದ ಜೆರ್ಸಿಯನ್ನು ವಿಶ್ವ ಅಥ್ಲೆಟಿಕ್ಸ್ ಹೆರಿಟೇಜ್ ಕಲೆಕ್ಷನ್‌ಗೆ ನೀಡಿದ್ದಾರೆ. ಮೊನಾಕೊದಲ್ಲಿರುವ ಪ್ರತಿಷ್ಠಿತ ಸಂಗ್ರಹದಲ್ಲಿ ವಿಶ್ವದ 23 ಕ್ರೀಡಾಪಟುಗಳ ವಸ್ತುಗಳಿದ್ದು, ಇದರಲ್ಲಿ ನೀರಜ್ ಚೋಪ್ರಾ ಏಕೈಕ ಭಾರತೀಯರಾಗಿದ್ದಾರೆ.

ಆಗಸ್ಟ್‌ನಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಆಗ ಅವರು ಧರಿಸಿದ್ದ ಜೆರ್ಸಿಯನ್ನು ಪ್ರಸ್ತುತ ಮ್ಯೂಸಿಯಂ ಆಫ್ ವರ್ಲ್ಡ್ ಅಥ್ಲೆಟಿಕ್ಸ್ (MOWA)ದ ಆನ್‌ಲೈನ್ 3D ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶಿಸಲಾಗಿದೆ.
icon

(1 / 6)

(HT_PRINT)

ಪ್ಯಾರಿಸ್‌ ಗೇಮ್ಸ್‌ನಲ್ಲಿ ನೀರಜ್‌ ಚಿನ್ನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಬಂಗಾರ ಗೆದ್ದರು. 89.45 ಮೀ ದೂರ ಜಾವೆಲಿನ್‌ ಎಸೆದ ನೀರಜ್‌ ಎರಡನೇ ಸ್ಥಾನ ಪಡೆದರು.
icon

(2 / 6)

(PTI)

2024ರ ವರ್ಷದ ಮಹಿಳಾ ಅಥ್ಲೀಟ್ ಪ್ರಶಸ್ತಿಯನ್ನು ಗೆದ್ದಿರುವ ಉಕ್ರೇನ್‌ನ ಸ್ಟಾರ್ ಹೈಜಂಪರ್ ಯಾರೋಸ್ಲಾವಾ ಮಹುಚಿಖ್ ಅವರು ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಜೆರ್ಸಿಯನ್ನು ಕೂಡಾ ಪಾರಂಪರಿಕ ಸಂಗ್ರಹಕ್ಕೆ ನೀಡಿದ್ದಾರೆ.
icon

(3 / 6)

ಒಲಿಂಪಿಕ್ಸ್‌ ಪದಕ ಗೆಲುವಿನಲ್ಲಿ ತಮ್ಮ ಭಾಗವಾಗಿದ್ದ ಸ್ಮರಣೀಯ ವಸ್ತುಗಳನ್ನು ಮ್ಯೂಸಿಯಂಗೆ ನೀಡಿದ ಪ್ಯಾರಿಸ್ ಒಲಿಂಪಿಕ್ಸ್ ವಿಜೇತರನ್ನು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು ಶ್ಲಾಘಿಸಿದ್ದಾರೆ.
icon

(4 / 6)

ಪ್ಯಾರಿಸ್ 2024ರ ಪದಕ ವಿಜೇತರಾದ ಮೂವರಿಂದ ದೇಣಿಗೆಯನ್ನು ಪಡೆಯಲು ನಾವು ಹೆಮ್ಮೆಪಡುತ್ತೇವೆ. ಯಾರೋಸ್ಲಾವಾ ಮಹುಚಿಖ್ (ಹೈ ಜಂಪ್), ಥಿಯಾ ಲಾಫೊಂಡ್ (ಟ್ರಿಪಲ್ ಜಂಪ್) ಮತ್ತು ನೀರಜ್ ಚೋಪ್ರಾ ಅವರಿಗೆ ಧನ್ಯವಾದಗಳು ಎಂದು ಸೆಬಾಸ್ಟಿಯನ್ ಹೇಳಿದ್ದಾರೆ.
icon

(5 / 6)

(AP)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಬಂಗಾರ ಗೆದ್ದರೆ, ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು.
icon

(6 / 6)

(REUTERS)

ಇತರ ಗ್ಯಾಲರಿಗಳು