ಕನ್ನಡ ಸುದ್ದಿ  /  Photo Gallery  /  Pavitra Lokesh Wrote Entrance Exam In Hampi Kannada University Bellary Along With Lover Naresh Vijay Krishna Rsm

Pavitra Lokesh: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ಪವಿತ್ರಾ ಲೋಕೇಶ್‌; ಪ್ರೇಮಿ ನರೇಶ್‌ ಕೃಷ್ಣ ಸಾಥ್‌

  • ಪವಿತ್ರಾ ಲೋಕೇಶ್‌ ಹಾಗೂ ಟಾಲಿವುಡ್‌ ನಟ ನರೇಶ್‌ ವಿಜಯ್‌ ಕೃಷ್ಣ ರಿಲೇಶನ್‌ಶಿಪ್‌ ಈಗ ಗುಟ್ಟಾಗಿ ಉಳಿದಿಲ್ಲ. ಹೌದು ನಾವಿಬ್ಬರೂ ಇಷ್ಟಪಟ್ಟಿದ್ದೇವೆ. ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 

ಪವಿತ್ರಾ ಹಾಗೂ ನರೇಶ್‌ ಅಭಿನಯದ 'ಮತ್ತೆ ಮದುವೆ' ಸಿನಿಮಾ ಇತ್ತೀಚೆಗೆ ತೆರೆ ಕಂಡಿದೆ. ತೆಲುಗಿನಲ್ಲಿ ಈ ಸಿನಿಮಾ 'ಮಳ್ಳಿ ಪೆಳ್ಳಿ' ಹೆಸರಿನಲ್ಲಿ ರಿಲೀಸ್‌ ಆಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 
icon

(1 / 11)

ಈ ನಡುವೆ ನಟಿ ಪವಿತ್ರಾ ಲೋಕೇಶ್‌ ಬಳ್ಳಾರಿ ಹೊಸಪೇಟೆಯ ಹಂಪಿ ಕನ್ಡಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. 
icon

(2 / 11)

ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ನಿರ್ಧರಿಸಿರುವ ಪವಿತ್ರಾ ಲೋಕೇಶ್ 2 ದಿನಗಳ ಹಿಂದೆ ಪ್ರೇಮಿ ನರೇಶ್‌ ಕೃಷ್ಣ ಜೊತೆಗೆ ಹಂಪಿಯ ವಿದ್ಯಾನಗರಕ್ಕೆ ಆಗಮಿಸಿದ್ದರು. 
icon

(3 / 11)

ಪ್ರವೇಶ ಪರೀಕ್ಷೆ ಬರೆದ ನಂತರ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. 
icon

(4 / 11)

ಕಳೆದ ಒಂದು ವರ್ಷದಿಂದ ಪವಿತ್ರಾ ಲೋಕೇಶ್‌ ಬಹಳ ಸುದ್ದಿಯಲ್ಲಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಮಿಂಚಿದ್ದ ಪವಿತ್ರಾ ಲೋಕೇಶ್‌ ತೆಲುಗಿನಲ್ಲಿ ಕೂಡಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(5 / 11)

ತೆಲುಗು ಚಿತ್ರರಂಗಕ್ಕೆ ಹೋದ ನಂತರ ಅಲ್ಲಿ ಸೂಪರ್‌ ಸ್ಟಾರ್‌ ಕೃಷ್ಣ (ಮಲಮಗ) ವಿಜಯ ನಿರ್ಮಲ ಪುತ್ರ ನರೇಶ್‌ ವಿಜಯ ಕೃಷ್ಣ ಅವರ ಪರಿಚಯ ಆಗಿದೆ. ನಂತರ ಈ ಪರಿಚಯ ಪ್ರೀತಿಗೆ ತಿರುಗಿದೆ. 
icon

(6 / 11)

ಪವಿತ್ರಾ ಹಾಗೂ ನರೇಶ್‌ ಮದುವೆ ಆಗುತ್ತಿದ್ದಾರೆ. ಮದುವೆಗೆ ಮುಹೂರ್ತ ಫಿಕ್ಸ್‌ ಮಾಡಲು ಮಹಾಬಲೇಶ್ವರಕ್ಕೆ ಹೋಗಿ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದ್ದಂತೆ ಪವಿತ್ರಾಗೆ ಸುಚೇಂದ್ರ ಪ್ರಸಾದ್‌ಗೂ ಮುನ್ನ ಆಗಲೇ ಒಂದು ಮದುವೆ ಆಗಿದೆ ಎಂಬ ವಿಚಾರ ತಿಳಿಯಿತು. 
icon

(7 / 11)

ನರೇಶ್‌ಗೆ ಕೂಡಾ ಆಗಲೇ 2 ಮದುವೆ ಆಗಿದೆ ಎಂಬ ಸುದ್ದಿ ಹೊರಬಿತ್ತು. ಎರಡನೇ ಪತ್ನಿ ರಮ್ಯ ರಘುಪತಿಗೆ ಡಿವೋರ್ಸ್‌ ನೀಡುವ ಮುನ್ನವೇ ನರೇಶ್‌ ಪವಿತ್ರಾ ಜೊತೆ ಮತ್ತೊಂದು ಮದುವೆ ಆಗಲು ಹೊರಟಿದ್ದಾರೆ ಎಂಬ ವಿಚಾರ ಬಹಿರಂಗ ಆಯ್ತು. ಅಲ್ಲಿಂದ ಪ್ರತಿ ಬಾರಿಯೂ ಪವಿತ್ರಾ ಹಾಗೂ ನರೇಶ್‌ ಟ್ರೋಲ್‌ ಆಗುತ್ತಲೇ ಬಂದರು. 
icon

(8 / 11)

ಪವಿತ್ರಾಗೆ ಕನ್ನಡ ಸಿನಿಮಾಗಳಲ್ಲಿ ಅವಕಾಶ ನೀಡಬಾರದು ಎಂದು ಕೆಲವು ಕನ್ನಡ ಸಿನಿಪ್ರಿಯರು ಒತ್ತಾಯಿಸಿದರೆ ಆಕೆಗೆ ತೆಲುಗಿನಲ್ಲೂ ಆಫರ್‌ ನೀಡಬಾರದು ಎಂದು ಅಲ್ಲಿಯೂ ಕೆಲವರು ಒತ್ತಾಯಿಸಿದ್ದರು. 
icon

(9 / 11)

ಪವಿತ್ರಾ ಲೋಕೇಶ್‌ಗೆ ತೆಲುಗಿನಲ್ಲಿ ಈಗಲೂ ಅಷ್ಟೇ ಬೇಡಿಕೆ ಇದೆ. ಮತ್ತೆ ಮದುವೆ ಸಕ್ಸಸ್‌ ನಂತರ ಆಕೆಗೆ ಟಾಲಿವುಡ್‌ನಲ್ಲಿ ಇನ್ನಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ. 
icon

(10 / 11)

ಈಗ ಪವಿತ್ರಾ ಲೋಕೇಶ್‌ ಪಿಹೆಚ್‌ಡಿ ಬರೆಯಲು ಹೊರಟಿದ್ದು ಮುಂದಿನ ದಿನಗಳಲ್ಲಿ ಅವರು ಡಾ ಪವಿತ್ರಾ ಲೋಕೇಶ್‌ ಆಗಲಿದ್ದಾರಾ ಕಾದು ನೋಡಬೇಕು
icon

(11 / 11)

ಈಗ ಪವಿತ್ರಾ ಲೋಕೇಶ್‌ ಪಿಹೆಚ್‌ಡಿ ಬರೆಯಲು ಹೊರಟಿದ್ದು ಮುಂದಿನ ದಿನಗಳಲ್ಲಿ ಅವರು ಡಾ ಪವಿತ್ರಾ ಲೋಕೇಶ್‌ ಆಗಲಿದ್ದಾರಾ ಕಾದು ನೋಡಬೇಕು

IPL_Entry_Point

ಇತರ ಗ್ಯಾಲರಿಗಳು