ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕಿಸ್ತಾನದ ಆಟಗಾರರಿಗೆ ಬಂಪರ್​ ಆಫರ್​; ಟಿ20 ವಿಶ್ವಕಪ್​ಗೆ ಗೆದ್ದರೆ ಇಷ್ಟು ಲಕ್ಷ ಬಹುಮಾನ ಘೋಷಿಸಿದ ಪಿಸಿಬಿ

ಪಾಕಿಸ್ತಾನದ ಆಟಗಾರರಿಗೆ ಬಂಪರ್​ ಆಫರ್​; ಟಿ20 ವಿಶ್ವಕಪ್​ಗೆ ಗೆದ್ದರೆ ಇಷ್ಟು ಲಕ್ಷ ಬಹುಮಾನ ಘೋಷಿಸಿದ ಪಿಸಿಬಿ

  • ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಗೆದ್ದರೆ, ಪಾಕಿಸ್ತಾನ ತಂಡಕ್ಕೆ ಪಿಸಿಬಿ ಭರ್ಜರಿ ಬಹುಮಾನ ಘೋಷಿಸಿದೆ. ಟಿ20 ವಿಶ್ವಕಪ್ ತಂಡದ ಪ್ರತಿ ಸದಸ್ಯರಿಗೆ ಬರೋಬ್ಬರಿ 1 ಲಕ್ಷ ಅಮೆರಿಕನ್‌ ಡಾಲರ್ ಮೊತ್ತವನ್ನು ನೀಡಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತೆರಳುವ ಮೊದಲು ಆಟಗಾರರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಮಯ ಕಳೆದ ನಂತರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಬಹುಮಾನದ ಘೋಷಣೆ ಮಾಡಿದ್ದಾರೆ.
icon

(1 / 5)

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತೆರಳುವ ಮೊದಲು ಆಟಗಾರರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಮಯ ಕಳೆದ ನಂತರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಬಹುಮಾನದ ಘೋಷಣೆ ಮಾಡಿದ್ದಾರೆ.(AFP)

ವಿಶ್ವಕಪ್‌ ಟ್ರೋಫಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಿರುವ ಅವರು, ಅದರ ಮುಂದೆ ಬಹುಮಾನದ ಹಣಕ್ಕೆ ಯಾವುದೇ ಮಹತ್ವವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ತಂಡವು ಕಪ್‌ ಗೆಲ್ಲುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.
icon

(2 / 5)

ವಿಶ್ವಕಪ್‌ ಟ್ರೋಫಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಿರುವ ಅವರು, ಅದರ ಮುಂದೆ ಬಹುಮಾನದ ಹಣಕ್ಕೆ ಯಾವುದೇ ಮಹತ್ವವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ತಂಡವು ಕಪ್‌ ಗೆಲ್ಲುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.(AFP)

"ಟಿ20 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರನಿಗೆ 100,000 ಡಾಲರ್ ಬಹುಮಾನ ನೀಡುವುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಘೋಷಿಸಿದ್ದಾರೆ" ಎಂದು ಪಿಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
icon

(3 / 5)

"ಟಿ20 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರನಿಗೆ 100,000 ಡಾಲರ್ ಬಹುಮಾನ ನೀಡುವುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಘೋಷಿಸಿದ್ದಾರೆ" ಎಂದು ಪಿಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.(AFP)

ಭಾರತೀಯ ರೂಪಾಯಿ ಮೌಲ್ಯದ ಲೆಕ್ಕದಲ್ಲಿ ಇದು ಸರಿಸುಮಾರು 83 ಲಕ್ಷ ರೂಪಾಯಿ ಆಗಿದೆ.
icon

(4 / 5)

ಭಾರತೀಯ ರೂಪಾಯಿ ಮೌಲ್ಯದ ಲೆಕ್ಕದಲ್ಲಿ ಇದು ಸರಿಸುಮಾರು 83 ಲಕ್ಷ ರೂಪಾಯಿ ಆಗಿದೆ.(AFP)

ತಂಡದ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ ನಖ್ವಿ, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. "ದೇಶವು ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ನೀವು ಅವುಗಳನ್ನು ಪೂರೈಸಬೇಕು," ಎಂದು ಅವರು ಆಟಗಾರರಿಗೆ ಹೇಳಿದ್ದಾರೆ.
icon

(5 / 5)

ತಂಡದ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ ನಖ್ವಿ, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. "ದೇಶವು ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ನೀವು ಅವುಗಳನ್ನು ಪೂರೈಸಬೇಕು," ಎಂದು ಅವರು ಆಟಗಾರರಿಗೆ ಹೇಳಿದ್ದಾರೆ.(AFP)


IPL_Entry_Point

ಇತರ ಗ್ಯಾಲರಿಗಳು