ನನ್ನಿಂದ ನನ್ನ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ; ವಿರಾಟ್ ಕೊಹ್ಲಿ ಬಾಯಲ್ಲಿ ಇಂಥಾ ಮಾತು ಬಂದಿದ್ದೇಕೆ?
- Kohli vs Gambhir : ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ಅಭಿಮಾನಿಗಳಿಗೆ ಬೇಸರ ಮಾಡಿಸಿದ್ದೇನೆ ಎಂದು ಹೇಳಿದ್ದೇಕೆ? ಅದು ಕೊಹ್ಲಿ ಬಾಯಲ್ಲಿ ಇಂತಾ ಮಾತು ಬಂದಿದ್ದೇಕೆ? ಇಲ್ಲಿದೆ ವಿವರ.
- Kohli vs Gambhir : ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ಅಭಿಮಾನಿಗಳಿಗೆ ಬೇಸರ ಮಾಡಿಸಿದ್ದೇನೆ ಎಂದು ಹೇಳಿದ್ದೇಕೆ? ಅದು ಕೊಹ್ಲಿ ಬಾಯಲ್ಲಿ ಇಂತಾ ಮಾತು ಬಂದಿದ್ದೇಕೆ? ಇಲ್ಲಿದೆ ವಿವರ.
(1 / 9)
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಂಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
(2 / 9)
ಕೆಕೆಆರ್ ಮತ್ತು ಆರ್‌ಸಿಬಿ ಪಂದ್ಯದ ನಡುವೆ ಕೊಹ್ಲಿ ಹಾಗೂ ಗಂಭೀರ್ ಪರಸ್ಪರ ಅಪ್ಪಿಕೊಂಡಿದ್ದರು. ಇದೀಗ ಈ ಕುರಿತು ವಿರಾಟ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅಭಿಮಾನಿಗಳು ನನ್ನಿಂದ ತುಂಬಾ ಬೇಸರಗೊಂಡಿದ್ದಾರೆ ಎಂದು ಹೇಳಿದ್ದಾರೆ.
(AFP)(3 / 9)
2023ರ ಐಪಿಎಲ್ನಲ್ಲಿ ಆರ್‌ಸಿಬಿ ಮತ್ತು ಎಲ್ಎಸ್ಜಿ ಪಂದ್ಯದ ನಂತರ ಕೊಹ್ಲಿ ಮತ್ತು ಗಂಭೀರ್ ಮಧ್ಯೆ ದೊಡ್ಡ ಜಗಳ ಆಗಿತ್ತು. 2024ರ ಐಪಿಎಲ್‌ಗೂ ಮುನ್ನ ಎಲ್ಎಸ್ಜಿಗೆ ಗಂಭೀರ್ ಮೆಂಟರ್ ಆಗಿದ್ದರು. ಪ್ರಸ್ತುತ ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿದ್ದಾರೆ.
(PTI)(4 / 9)
ಕಳೆದ ವರ್ಷದ ಜಗಳ ಮಾಡಿಕೊಂಡಿದ್ದ ಕಾರಣ ಈ ವರ್ಷವೂ ಅಭಿಮಾನಿಗಳು ಅಂತಹದ್ದೇ ಏನಾದರೂ ನಡೆಯುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ. ಕೊಹ್ಲಿ ಮತ್ತು ಗಂಭೀರ್ ಇಬ್ಬರು ಅಪ್ಪಿಕೊಂಡು ಉತ್ತಮ ಸಂದೇಶ ರವಾನಿಸಿದ್ದರು.
(PTI)(5 / 9)
ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ಪರ ವಿರಾಟ್, ಅರ್ಧಶತಕ ಬಾರಿಸಿದ್ದರು. ಡ್ರಿಂಕ್ಸ್ ಬ್ರೇಕ್ ವೇಳೆ ಕೆಕೆಆರ್ ಆಟಗಾರರಿಗೆ ಸಲಹೆ ನೀಡಲು ಬಂದಿದ್ದ ಗಂಭೀರ್, ಪಕ್ಕದಲ್ಲಿದ್ದ ಕೊಹ್ಲಿಯನ್ನು ಅಭಿನಂದಿಸಿ ಅಪ್ಪಿಕೊಂಡಿದ್ದರು.
(6 / 9)
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಕೊಹ್ಲಿ, ನನ್ನಿಂದ ನನ್ನ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ನನ್ನ ಮತ್ತು ಗಂಭೀರ್ ಅವರಿಂದ ಅಭಿಮಾನಿಗಳು 'ಮಸಾಲಾ' ಸಂಗತಿಗಳನ್ನು ನಿರೀಕ್ಷಿಸಿದ್ದರು. ಆದರೆ, ನಮ್ಮ ನಡೆಯಿಂದ ಅಭಿಮಾನಿಗಳಿಗೆ ಬೇಸರವಾಯಿತು ಎಂದು ಹೇಳಿದ್ದಾರೆ.
(PTI)(7 / 9)
ಈ ಹಿಂದೆ ನವೀನ್ ಉಲ್ ಹಕ್ ಅವರನ್ನೂ ಹಗ್ ಮಾಡಿದ್ದೆ. ಗಂಭೀರ್ ಬಾಯ್ ಅವರನ್ನು ಅಪ್ಪಿಕೊಂಡೆ. ಇದರಿಂದಾಗಿ ಜನರಿಗೆ ಮಸಾಲೆ ಸಿಗದಂತಾಗಿದೆ ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.
(PTI)(8 / 9)
ಪ್ರಸಕ್ತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅಡಿರುವ 6 ಪಂದ್ಯಗಳಲ್ಲಿ 2 ಅರ್ಧಶತಕ ಮತ್ತು 1 ಶತಕ ಸಹಿತ 319 ರನ್ ಗಳಿಸಿದ್ದಾರೆ.
(PTI)ಇತರ ಗ್ಯಾಲರಿಗಳು