ಇಂದು ಮಹಾಲಯ ಅಮಾವಾಸ್ಯೆ, ದೇಶದ ವಿವಿಧೆಡೆ ಪಿತೃಪಕ್ಷದ ಆಚರಣೆ ಹೇಗಿತ್ತು? ಇಲ್ಲಿದೆ ಚಿತ್ರಪಟ
ಮಹಾಲಯ ಅಮವಾಸ್ಯೆಯನ್ನು ಪಿತೃಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ ಮತ್ತು ಈ ಅವಧಿಯು ಅತ್ಯಂತ ಮಹತ್ವದ ದಿನವೂ ಆಗಿದೆ. ಈ ದಿನವನ್ನು ಪೂರ್ವಜರ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಅವರ ಸ್ಮರಣೆಯಲ್ಲಿ ದಿನವನ್ನು ಕಳೆಯುತ್ತಾರೆ. ಇಂದು ದೇಶದ ವಿವಿಧೆಡೆ ತಮ್ಮ ಪಿತೃಕಾರ್ಯಗಳನ್ನು ಜನರು ಭಕ್ತಿಯಿಂದ, ಶ್ರದ್ಧೆಯಿಂದ ಕೈಗೊಂಡಿದ್ದಾರೆ. ಫೋಟೊಗಳನ್ನು ನೋಡಿ.
(1 / 5)
ಪಿತೃಪಕ್ಷದ ಕೊನೆಯ ದಿನವಾದ ಇಂದು ಮುಂಬೈನ ಐತಿಹಾಸಿಕ ಬಾಂಗಾಂಗಾ ಟ್ಯಾಂಕ್‌ನಲ್ಲಿ ತನ್ನ ಪಿತೃಗಳನ್ನು ನೆನೆದು ಪೂಜೆ ಸಲ್ಲಿಸುತ್ತಿರುವ ವ್ಯಕ್ತಿ.(PTI)
(3 / 5)
ಭೋಪಾಲ್ ಕೆರೆಯಲ್ಲಿ ಜನರು ಪಿತೃಪಕ್ಷ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ತಮ್ಮ ಪಿತೃಗಳ ಆತ್ಮವು ದೇವರಲ್ಲಿಗೆ ತಲುಪಲು ಈ ವಿಧಿವಿಧಾನ ನೆರವಾಗುತ್ತದೆ ಎನ್ನುವುದು ನಂಬಿಕೆ.(PTI)
(4 / 5)
ಕೋಲ್ಕೊತ್ತಾ: ತರ್ಪಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಮಹಾಲಯ ಅಮಾವಾಸ್ಯೆಯಂದು ಮಾರಾಟ ಮಾಡಲು ರಸ್ತೆ ಬದಿಯಲ್ಲಿ ಇಟ್ಟಿರುವ ದೃಶ್ಯ.(PTI)
ಇತರ ಗ್ಯಾಲರಿಗಳು