Period Hygiene: ದೀರ್ಘಕಾಲದವರೆಗೆ ಪ್ಯಾಡ್ ಬದಲಿಸದೇ ಇರುತ್ತೀರಾ? ಈ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ!
- International women's day 2023: Period Hygiene: ಮುಟ್ಟಿನ ಸಮಯದಲ್ಲಿ ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬದಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
- International women's day 2023: Period Hygiene: ಮುಟ್ಟಿನ ಸಮಯದಲ್ಲಿ ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬದಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
(1 / 6)
ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆಯಬಾರದು ಮತ್ತು ಆಗಾಗ ಪ್ಯಾಡ್ ಬದಲಾಯಿಸುವುದು ಅವಶ್ಯ. ಇಲ್ಲದಿದ್ದರೆ, ಸೋಂಕಿನ ಪ್ರಭಾವ ಹೆಚ್ಚುವ ಸಾಧ್ಯತೆ ಇದೆ. ಇದಲ್ಲದೇ ಇನ್ನೂ ಹಲವು ರೀತಿಯ ಸಮಸ್ಯೆಗಳು ಕಾಡಬಹುದು.
(2 / 6)
ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಿಸದಿದ್ದರೆ, ಲ್ಯುಕೋರೋಹಿಯಾ ಸಮಸ್ಯೆಯು ಉಲ್ಬಣಗೊಳ್ಳಬಹುದು. ಯೋನಿಯಲ್ಲಿ ಬಿಳಿ ಸ್ರವಿಸುವಿಕೆ (ಬಿಳಿ ಸೆರಗು) ಯನ್ನು ಲ್ಯುಕೋರಿಯಾ ಎಂದು ಕರೆಯಲಾಗುತ್ತದೆ. ಇದನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಕೆಲವೊಮ್ಮೆ ಇದು ಗಂಭೀರ ಸ್ವರೂಪ ಪಡೆಯುವ ಸಂಭವವೂ ಇದೆ.
(3 / 6)
ಒಂದೇ ಪ್ಯಾಡ್ ಅನ್ನು ಬಹಳಷ್ಟು ಹೊತ್ತು ಧರಿಸುವುದರಿಂದ ದದ್ದು ಮತ್ತು ಚರ್ಮದ ಕಿರಿಕಿರಿ ಉಂಟಾಗಬಹುದು. ಚರ್ಮದ ಸೋಂಕು ಅಸಹನೀಯ ತುರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಮುಟ್ಟಿನ ದಿನಗಳು ಮುಗಿಯುವವರೆಗೂ ಆಗಾಗ ಪ್ಯಾಡ್ ಬದಲಿಸುವುದನ್ನು ಮರೆಯಬಾರದು.
(4 / 6)
ನಿರಂತರವಾಗಿ ಪ್ಯಾಡ್‌ಗಳನ್ನು ಬದಲಿಸದೇ ಇರುವುದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು. ಪರಿಣಾಮವಾಗಿ, ಯೋನಿ ಮಾತ್ರವಲ್ಲದೇ, ಸುತ್ತಲೂ ದದ್ದು ಉಂಟಾಗಬಹುದು. ಕೆಲವೊಮ್ಮೆ ಉರಿಯೂತಕ್ಕೂ ಇದೇ ಕಾರಣ ಇರಬಹುದು.
(5 / 6)
ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಿಸದಿದ್ದರೆ ಮೂತ್ರನಾಳದ ಸೋಂಕಿನ ಅಪಾಯದ ಸಾಧ್ಯತೆಯೂ ಇದೆ. ಇದರಿಂದ ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳ ಸೇರಿದಂತೆ ಮೂತ್ರದ ವ್ಯವಸ್ಥೆಯ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಈ ಸಮಸ್ಯೆಯು ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಕೆಳ ಹೊಟ್ಟೆಯಲ್ಲಿ ನೋವು ಮತ್ತು ಯೋನಿಯ ದುರ್ನಾತಕ್ಕೂ ಕಾರಣವಾಗಬಹುದು.
ಇತರ ಗ್ಯಾಲರಿಗಳು