Success Tips: ಶ್ರೀಮಂತರಾಗುವುದು ಹೇಗೆ? ರಿಚ್ ಡ್ಯಾಡ್ ಪೂರ್ ಡ್ಯಾಡ್‌ನಲ್ಲಿ ತಿಳಿಸಿದ ಈ 10 ಹಣಕಾಸು ಸಲಹೆಗಳನ್ನು ಪಾಲಿಸಿ
- How to Become rich?: ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಪುಸ್ತಕವನ್ನು 1997ರಲ್ಲಿ ರಾಬರ್ಟ್ ಟಿ ಕಿಯೊಸಕಿ ಮತ್ತು ಶರನ್ ಲೆಕ್ಚರ್ ಬರೆದಿದ್ದಾರೆ. ತನ್ನ ಇಬ್ಬರು ತಂದೆಯರ ಕುರಿತು ಕಿಯೊಸಕಿ ಇಲ್ಲಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ನೀಡಲಾದ ಸಲಹೆಗಳು ಶ್ರೀಮಂತರಾಗುವುದು ಹೇಗೆ ಎಂದು ಆಲೋಚಿಸುವವರಿಗೆ ದಾರಿ ದೀಪವಾಗಬಲ್ಲದು.
- How to Become rich?: ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಪುಸ್ತಕವನ್ನು 1997ರಲ್ಲಿ ರಾಬರ್ಟ್ ಟಿ ಕಿಯೊಸಕಿ ಮತ್ತು ಶರನ್ ಲೆಕ್ಚರ್ ಬರೆದಿದ್ದಾರೆ. ತನ್ನ ಇಬ್ಬರು ತಂದೆಯರ ಕುರಿತು ಕಿಯೊಸಕಿ ಇಲ್ಲಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ನೀಡಲಾದ ಸಲಹೆಗಳು ಶ್ರೀಮಂತರಾಗುವುದು ಹೇಗೆ ಎಂದು ಆಲೋಚಿಸುವವರಿಗೆ ದಾರಿ ದೀಪವಾಗಬಲ್ಲದು.
(1 / 11)
ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಪುಸ್ತಕವನ್ನು 1997ರಲ್ಲಿ ರಾಬರ್ಟ್ ಟಿ ಕಿಯೊಸಕಿ ಮತ್ತು ಶರನ್ ಲೆಕ್ಚರ್ ಬರೆದಿದ್ದಾರೆ. ತನ್ನ ಇಬ್ಬರು ತಂದೆಯರ ಕುರಿತು ಕಿಯೊಸಕಿ ಇಲ್ಲಿ ಬರೆದಿದ್ದಾರೆ. ಒಬ್ಬರು ನಿಜವಾದ ತಂದೆ (ಬಡ ತಂದೆ). ಮತ್ತೊಬ್ಬರು ಅವರ ಸ್ನೇಹಿತನ ತಂದೆ (ಶ್ರೀಮಂತ ತಂದೆ). ಹಣ ಮತ್ತು ಹೂಡಿಕೆಯ ಕುರಿತು ಈ ಇಬ್ಬರು ತಂದೆಯರ ಆಲೋಚನೆಗಳು ಹೇಗೆ ಭಿನ್ನ ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಶ್ರೀಮಂತರಾಗಲು ಬಯಸುವವರು, ವ್ಯಕ್ತಿತ್ವ ವಿಕಸನ ಹೊಂದಲು ಅಥವಾ ಹಣಕಾಸು ಕುರಿತು ಜ್ಞಾನ ಸಂಪಾದನೆಗೆ ಇಂತಹ ಪುಸ್ತಕಗಳನ್ನು ಓದಬಹುದು. ಬನ್ನಿ ಈ ಪುಸ್ತಕದಿಂದ ಆಯ್ತ ಹತ್ತು ಅಂಶಗಳನ್ನು ತಿಳಿದುಕೊಳ್ಳೋಣ.
(2 / 11)
ಶ್ರೀಮಂತರು ಹಣಕ್ಕಾಗಿ ಕೆಲಸ ಮಾಡುವುದಿಲ್ಲ: ಶ್ರೀಮಂತ ಜನರು ಕೆಲಸ ಮಾಡುವುದಿಲ್ಲ. ಅವರು ತಮ್ಮ ಹಣವನ್ನು ಕೆಲಸ ಮಾಡುವಂತೆ ಮಾಡಿ ಹಣ ಗಳಿಸುತ್ತಾರೆ. ಪ್ಯಾಸಿವ್ ಆದಾಯವನ್ನು ಇವರು ಸೃಷ್ಟಿಸುತ್ತಾರೆ. ಶ್ರೀಮಂತರಾಗುವುದು ಹೇಗೆ ಎಂದು ಮಾಹಿತಿ ಹುಡುಕುವವರಿಗೆ ಇದು ಮೊದಲ ಪಾಠ.
(3 / 11)
ನಿಮ್ಮ ಹಣಕಾಸು ಬುದ್ಧಿಮತ್ತೆಯನ್ನು ಉತ್ತಮಪಡಿಸಿಕೊಳ್ಳಿ: ಹಣ, ಹೂಡಿಕೆ ಮತ್ತು ಪರ್ಸನಲ್ ಫೈನಾನ್ಸ್ ವಿಷಯಗಳ ಕುರಿತು ನಿಮ್ಮನ್ನು ನೀವು ಸುಶಿಕ್ಷಿತರಾಗಿಸುವುದು ಅತ್ಯಂತ ಮಹತ್ವ ಎಂದು ಈ ಪುಸ್ತಕ ಹೇಳುತ್ತದೆ.
(Pixabay)(4 / 11)
ರಿಸ್ಕ್ ತೆಗೆದುಕೊಳ್ಳಲು ಭಯಪಡಬೇಡಿ: ಸಂಪತ್ತು ನಿಮ್ಮದಾಗಿಸಿಕೊಳ್ಳಲು ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಲು ರಿಚ್ ಡ್ಯಾಡ್ ಪೂರ್ ಡ್ಯಾಡ್ ಸಲಹೆ ನೀಡುತ್ತದೆ.
(5 / 11)
ಲೆವರೇಜ್ ಶಕ್ತಿ ತಿಳಿದುಕೊಳ್ಳಿ. ಲಿವರೇಜ್ ಅಥವಾ ಲೆವರೇಜ್ (leverage) ಅನ್ನು ಸನ್ನೆ ಎಂದುಕೊಳ್ಳಬಹುದು. ಇತರೆ ಜನರ ಸಮಯ, ಹಣ ಅಥವಾ ಸಂಪನ್ಮೂಲವನ್ನು ಬಳಸಿ ನೀವು ಶ್ರೀಮಂತರಾಗಬಹುದು. ಇದರಿಂದ ವೇಗವಾಗಿ ಹಣ ವೃದ್ಧಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
(Pixabay)
(6 / 11)
ನಿಮ್ಮ ವೆಚ್ಚದ ಮೇಲೆ ನಿಯಂತ್ರಣ: ಅರ್ಥಪೂರ್ಣ ಬದುಕು ನಡೆಸುವುದು ಮತ್ತು ವೆಚ್ಚದ ಮೇಲೆ ನಿಯಂತ್ರಣ ಹೊಂದುವ ಮಹತ್ವವನ್ನು ಈ ಪುಸ್ತಕ ಹೇಳುತ್ತದೆ. ವೆಚ್ಚದ ಮೇಲೆ ನಿಯಂತ್ರಣ ಹೊಂದಿ ಹಣ ಉಳಿತಾಯ ಮಾಡಿ ಹೂಡಿಕೆ ಮತ್ತು ಸಂಪತ್ತಿನ ಪ್ರಗತಿಗೆ ಗಮನ ನೀಡಿ ಎಂದು ಅವರು ಹೇಳಿದ್ದಾರೆ.
(Pixabay)
(7 / 11)
ಸಾಲವನ್ನು ನಿಯಂತ್ರಿಸಲು ಕಲಿಯಿರಿ: ನಮ್ಮ ಸಾಲವನ್ನು ಹೇಗೆ ಹಂತಹಂತವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಪುಸ್ತಕ ಹೇಳುತ್ತದೆ. ಉತ್ತಮ ಸಾಲ ಮತ್ತು ಕೆಟ್ಟ ಸಾಲ ಎಂಬ ವಿಷಯದ ಕುರಿತು ಈ ಪುಸ್ತಕ ಮಾತನಾಡುತ್ತದೆ. ಉತ್ತಮ ಸಾಲವು ಆದಾಯ ಸಂಪಾದಿಸುತ್ತದೆ. ಕೆಟ್ಟ ಸಾಲವು ಸಂಪತ್ತನ್ನು ಕರಗಿಸುತ್ತದೆ ಎಂದು ಅವರು ಹೇಳುತ್ತಾರೆ.
(Pixabay)
(8 / 11)
ಹಣಕಾಸು ಯಶಸ್ಸು ಸಾಧಿಸುವುದು ಹೇಗೆ: ನಿಜವಾದ ಸಂಪತ್ತು ಸೃಷ್ಟಿಸುವ ತಂತ್ರಗಳನ್ನು ಕಲಿಸುವ ಹಣಕಾಸು ಶಿಕ್ಷಣದ ಕುರಿತು ಗಮನ ನೀಡಬೇಕೆಂದು ಕಿಯೊಸಕಿ ಅವರು ಶಿಫಾರಸು ಮಾಡುತ್ತಾರೆ.
(Pixabay)
(9 / 11)
ಸಮೃದ್ಧ ಮನಸ್ಥಿತಿಯಿಂದ ಯಶಸ್ಸು: ನಮ್ಮ ನಕಾರಾತ್ಮಕ ಮನಸ್ಥಿತಿಯು ಯಶಸ್ಸಿಗೆ ಅಡ್ಡಿಯಾಗುತ್ತದೆ. ಸಂಪತ್ತು ಸೃಷ್ಟಿಸಲು ಬಯಸುವವರು ಧನಾತ್ಮಕತೆಯನ್ನು ಹೊಂದಿರಬೇಕು ಎಂದು ಅವರು ತನ್ನ ಪುಸ್ತಕದಲ್ಲಿ ಹೇಳಿದ್ದಾರೆ.
(Pixabay)
(10 / 11)
ಸೋಲನ್ನು ಸ್ವೀಕರಿಸಿ, ಸೋಲಿನಿಂದ ಕಲಿಯಿರಿ: ತಪ್ಪುಗಳು ಮತ್ತು ಹಿನ್ನೆಡೆಗಳಿಂದ ಕಲಿಯುವ ಅಗತ್ಯವನ್ನು ಕಿಯೊಸಕಿ ಹೇಳಿದ್ದಾರೆ. ಸೋಲು ಎನ್ನುವುದು ಶೈಕ್ಷಣಿಕ ಅನುಭವ. ಇದರಿಂದ ಕಲಿತ ಪಾಠ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಇತರ ಗ್ಯಾಲರಿಗಳು