Personal Finance: ಹಣ ಬೆಳೆಸುವುದು ಹೇಗೆ? ಹೂಡಿಕೆ ಮೂಲಕ ಹಣ ಉಳಿತಾಯ ಮಾಡಲು ಬಯಸುವವರಿಗೆ 5 ಟಿಪ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Personal Finance: ಹಣ ಬೆಳೆಸುವುದು ಹೇಗೆ? ಹೂಡಿಕೆ ಮೂಲಕ ಹಣ ಉಳಿತಾಯ ಮಾಡಲು ಬಯಸುವವರಿಗೆ 5 ಟಿಪ್ಸ್‌

Personal Finance: ಹಣ ಬೆಳೆಸುವುದು ಹೇಗೆ? ಹೂಡಿಕೆ ಮೂಲಕ ಹಣ ಉಳಿತಾಯ ಮಾಡಲು ಬಯಸುವವರಿಗೆ 5 ಟಿಪ್ಸ್‌

  • Personal Finance: ಸಾಕಷ್ಟು ಜನರು ಹಣ ಉಳಿತಾಯ ಮಾಡಲು ಬಯಸುತ್ತಾರೆ. ಆದರೆ, ಉಳಿತಾಯ, ಹೂಡಿಕೆ ಕುರಿತು ಸರಿಯಾದ ಜ್ಞಾನ ಇಲ್ಲದೆ ತಮ್ಮ ಹಣಕಾಸು ನಿರ್ವಹಣೆಯಲ್ಲಿ ಸೋಲುತ್ತಾರೆ. ಹಣ ಉಳಿತಾಯ ಮಾಡಲು ಬಯಸುವವರಿಗೆ ಐದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಹಣ ಉಳಿತಾಯ ಮಾಡುವುದು ಹೇಗೆ? ಈ ಪ್ರಶ್ನೆ ಹೆಚ್ಚಿನವರಿಗೆ ಇರುತ್ತದೆ. ಕಷ್ಟಪಟ್ಟು ಗಳಿಸಿದ ಹಣದಲ್ಲಿ ಒಂದಿಷ್ಟು ಮೊತ್ತ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.  ಹಣ ಎಷ್ಟೇ ಇದ್ದರೂ, ಖರ್ಚಿನ ಮೇಲೆ ನಿಗಾ ಇಲ್ಲದೆ ಇದ್ದರೆ ಹಣ ಉಳಿತಾಯ ಕಷ್ಟವಾಗುತ್ತದೆ.
icon

(1 / 8)

(pixabay)

ಕೆಲವೊಮ್ಮೆ ಸಾಧಾರಣ ವೇತನ ಇರುವವರಿಗೆ ಹಣ ಉಳಿಸಲು ಕಷ್ಟವಾಗುತ್ತದೆ. ಕಡಿಮೆ ವೇತನ ಇರುವವರಿಗೂ ಹಣ ಉಳಿತಾಯ ಕಷ್ಟವಾಗುತ್ತದೆ. ಇದೇ ಸಮಯದಲ್ಲಿ ಉತ್ತಮ ವೇತನ ಇರುವವರಿಗೂ ಹಣ ಉಳಿತಾಯ ಕಷ್ಟವಾಗುತ್ತದೆ. ಹಣ ಉಳಿತಾಯ ಮಾಡಲು ಬಯಸುವವರು ಮೊದಲು ಗಮನಿಸಬೇಕಾಗಿರುವುದು ಹಣವನ್ನು ತಪ್ಪಾಗಿ ನಿರ್ವಹಣೆ ಮಾಡದೆ ಇರುವುದಾಗಿದೆ. 
icon

(2 / 8)

ಹಣಕಾಸು ಜ್ಞಾನ: ನೀವು ಹಣ ಉಳಿತಾಯ ಮಾಡಲು ಬಯಸುವುದಾದರೆ ಮೊದಲು ಹಣಕಾಸು ಜ್ಞಾನ ಉತ್ತಮಪಡಿಸಿಬೇಕು. ವೈಯಕ್ತಿಕ ಹಣಕಾಸು ನಿರ್ವಹಣೆ, ಬಜೆಟಿಂಗ್‌, ಹೂಡಿಕೆ ಇತ್ಯಾದಿಗಳನ್ನು ಕಲಿಯಬೇಕು. ಇದು ನಿಮಗೆ ಹಣದ ಮೌಲ್ಯ, ಚಕ್ರಬಡ್ಡಿ, ಸಾಲದ ನಿರ್ವಹಣೆ, ಹಣಕಾಸು ನಿರ್ವಹಣೆ ತಿಳಿದುಕೊಳ್ಳಲು ನೆರವಾಗುತ್ತದೆ.
icon

(3 / 8)

ಹಣ ಹೂಡಿಕೆ ಆರಂಭಿಸಿ: ಸಣ್ಣದಾಗಿಯೋ, ದೊಡ್ಡದಾಗಿಯೋ ಹಣ ಹೂಡಿಕೆ ಮಾಡಲು ಆರಂಭಿಸುವುದು ಅತ್ಯಂತ ಮುಖ್ಯ. ನಿಮ್ಮ ಹೂಡಿಕೆಗೆ ಲಾಭ ಎಷ್ಟು ದೊರಕಲಿದೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಸರಕಾರದ ಸ್ಕೀಮ್‌ಗಳು, ಷೇರುಪೇಟೆ, ಮ್ಯೂಚುಯಲ್‌ ಫಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿ ನಿಮ್ಮ ಆದಾಯ ಹೆಚ್ಚಿಸಬಹುದು. ಹಣ ಹೂಡಿಕೆ ಮಾಡುವ ಮೊದಲು ಸಾಕಷ್ಟು ರಿಸರ್ಚ್‌ ಮಾಡಲು ಮರೆಯಬೇಡಿ.
icon

(4 / 8)

ಹಣ ಹೂಡಿಕೆ ಮಾಡಲು ಆಯ್ಕೆಗಳು: ನಿಮ್ಮ ಆಸಕ್ತಿ, ಹಣಕಾಸು ಜ್ಞಾನಕ್ಕೆ ತಕ್ಕಂತೆ ಸ್ಥಿರ ಠೇವಣಿ, ಮ್ಯೂಚುಯಲ್‌ ಫಂಡ್‌ಗಳು, ಸಿಪ್‌, ಯುನಿಟ್‌ ಲಿಂಕ್ಡ್‌ ಇನ್ಸುರೆನ್ಸ್‌ ಪ್ರಾಡಕ್ಟ್‌, ಆರ್‌ಡಿ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡಬಹುದು
icon

(5 / 8)

15-15-15 ನಿಯಮ: ಇದೇ ರೀತಿ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆಮಾಡುವವರು 15-15-15 ನಿಯಮ ಅನುಸರಿಸಬಹುದು. ಪ್ರತಿತಿಂಗಳು 15 ಸಾವಿರ ರೂಪಾಯಿಯನ್ನು ಮ್ಯೂಚುಯಲ್‌ ಫಂಡ್‌ನಲ್ಲಿ 15 ವರ್ಷ ಹೂಡಿಕೆ ಮಾಡಬೇಕೆಂದು ಕೆಲವು ಹಣಕಾಸು ಸಲಹೆಗಾರರು ನೀಡಿದ್ದಾರೆ. ಈ ರೀತಿ ಮಾಡಿದರೆ ಹದಿನೈದು ವರ್ಷದಲ್ಲಿ ನಿಮ್ಮ ಹೂಡಿಕೆ ಮೊತ್ತವು 1 ಕೋಟಿ ರೂಪಾಯಿ ಆಗುತ್ತದೆ. ಇದು ಅಂದಾಜು ಲೆಕ್ಕ. ನೀವು ನಿಮ್ಮ ಹಣಕಾಸು ಸಲಹೆಗಾರರ ಅಭಿಪ್ರಾಯ ಪಡೆದು ಮುಂದುವರೆಯಿರಿ.
icon

(6 / 8)

ವಿವಿಧ ಆದಾಯ ಮೂಲಗಳು: ವೇತನ ಮಾತ್ರವಲ್ಲದೆ ನಿಮ್ಮ ಹಣ ಹೆಚ್ಚು ಮಾಡುವಂತಹ ವಿವಿಧ ಆದಾಯದ ಮೂಲಗಳನ್ನು ಹುಡುಕಿ. ಒಟ್ಟಾರೆ, ನಿಮ್ಮ ಉಳಿತಾಯದ ಹಣವು ಹಲವು ಪಟ್ಟು ಹೆಚ್ಚಾಗುವಂತಹ ಐಡಿಯಾಗಳನ್ನು ಮಾಡಿ. ಇದಕ್ಕಾಗಿ ಸೂಕ್ತವಾದ ಹಣಕಾಸು ಯೋಜನೆಗಳನ್ನು ಅನುಸರಿಸಿ, ಅಡ್ಡದಾರಿಗಳನ್ನು ಹಿಡಿಯಬೇಡಿ.
icon

(7 / 8)

ಹಕ್ಕು ನಿರಾಕರಣೆ/ ಡಿಸ್‌ಕ್ಲೈಮರ್‌: ಇದು ಹಣಕಾಸು ಮಾಹಿತಿ ನೀಡುವ ಉದ್ದೇಶದಿಂದ ನೀಡಿರುವ ಬರಹ. ಯಾವುದೇ ಷೇರು, ಮ್ಯೂಚುಯಲ್‌ ಫಂಡ್‌ ಮೇಲೆ ಹೂಡಿಕೆ ಮಾಡುವಂತೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಶಿಫಾರಸು ಮಾಡುವುದಿಲ್ಲ. ಸ್ವಂತ ವಿವೇಚನೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. 
icon

(8 / 8)

ಇತರ ಗ್ಯಾಲರಿಗಳು