Salary Savings: ಸ್ಯಾಲರಿ ಹಣ ತಿಂಗಳ ಕೊನೆಗೆ ಖಾಲಿನಾ? ವೇತನ ಪಡೆಯುವವರು ಹಣ ಉಳಿತಾಯ ಮಾಡಲು ಇಲ್ಲುಂಟು 10 ಟಿಪ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Salary Savings: ಸ್ಯಾಲರಿ ಹಣ ತಿಂಗಳ ಕೊನೆಗೆ ಖಾಲಿನಾ? ವೇತನ ಪಡೆಯುವವರು ಹಣ ಉಳಿತಾಯ ಮಾಡಲು ಇಲ್ಲುಂಟು 10 ಟಿಪ್ಸ್‌

Salary Savings: ಸ್ಯಾಲರಿ ಹಣ ತಿಂಗಳ ಕೊನೆಗೆ ಖಾಲಿನಾ? ವೇತನ ಪಡೆಯುವವರು ಹಣ ಉಳಿತಾಯ ಮಾಡಲು ಇಲ್ಲುಂಟು 10 ಟಿಪ್ಸ್‌

  • Salary Money Savings: ಸಾಕಷ್ಟು ಜನರು ತಮ್ಮ ಕೈಯಲ್ಲಿ ವೇತನದ ಹಣ ಉಳಿಸಲು ಆಗುವುದಿಲ್ಲ ಎನ್ನುತ್ತಾರೆ. ತಿಂಗಳ ಕೊನೆಯ ವಾರದಲ್ಲಿಯೇ ಕಿಸೆ ಖಾಲಿಯಾಗಿರುತ್ತದೆ ಎನ್ನುತ್ತಾರೆ. ಇರುವ ವೇತನವನ್ನು ಸಮರ್ಪಕವಾಗಿ ನಿಭಾಯಿಸಲು ಕಲಿತರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಹಣ ಉಳಿತಾಯ ಮಾಡುವುದು ಹೇಗೆ? ಹಣ ಉಳಿತಾಯ ಏಕೆ ಅಗತ್ಯ ಎಂದು ತಿಳಿಯೋಣ ಬನ್ನಿ.

ಸಾಲದ ಶೂಲ ಬೇಡ: ನಿಮ್ಮ ತಿಂಗಳ ವೇತನ ಎಷ್ಟು, ಅದರಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಸ್ಪಷ್ಟತೆ ಇರಲಿ. ಸಾಲ ಕೊಡುತ್ತಾರೆ ಎಂದು ಸ್ನೇಹಿತರಲ್ಲಿ ಸಾಲ ಕೇಳುತ್ತ ಇರಬೇಡಿ. ಈಗ ಸಾಲ ಸುಲಭವಾಗಿ ದೊರಕುತ್ತದೆ. ಕ್ರೆಡಿಟ್‌ ಕಾರ್ಡ್‌ ಅಥವಾ ಗೂಗಲ್‌ ಪೇ ಇತ್ಯಾದಿಗಳ ಮೂಲಕವೂ ಸಾಲ ಪಡೆಯಬಹುದು. ಕೆಲವು ಬ್ಯಾಂಕ್‌ಗಳು ಕರೆದುಕರೆದು ಸಾಲ ನೀಡುತ್ತವೆ. ಇಂತಹ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಆದಾಯದ ಶೇಕಡ 30ಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗುವಂತೆ ಇರಬಾರದು.
icon

(1 / 10)

(pixabay)

ಕ್ರೆಡಿಟ್‌ ಕಾರ್ಡ್‌ ಅವಲಂಬನೆ ಬೇಡ: ನೀವು ಕ್ರೆಡಿಟ್‌ ಕಾರ್ಡ್‌ ಅನ್ನು ಬಳಸಿ ತೊಂದರೆ ಅನುಭವಿಸುತ್ತಿದ್ದರೆ, ಅದೇ ನಿಮ್ಮ ಸಮಸ್ಯೆಯಾಗಿದ್ದರೆ ಕ್ರೆಡಿಟ್‌ ಕಾರ್ಡ್‌ ಬಿಟ್ಟುಬಿಡಿ. ಪ್ರತಿತಿಂಗಳು ಸರಿಯಾದ ಸಮಯದಲ್ಲಿ ಕ್ರೆಡಿಟ್‌ ಕಾರ್ಡ್‌ಗೆ ಪಾವತಿ ಮಾಡುತ್ತಿದ್ದರೆ ಮುಂದುವರೆಸಿ. ವಿಳಂಬ ಪಾವತಿ ಮಾಡುತ್ತಿದ್ದರೆ ನಿಮಗೆ ಕ್ರೆಡಿಟ್‌ ಕಾರ್ಡ್‌ ಸಹವಾಸ ಬೇಡ.
icon

(2 / 10)

ಹಣ ಖರ್ಚು ಮಾಡುವಾಗ ಎಚ್ಚರಿಕೆ, ವೆಚ್ಚದ ಮೇಲೆ ನಿಯಂತ್ರಣ ಇರಲಿ: ನೀವು ಪ್ರತಿನಿತ್ಯ, ತಿಂಗಳು ಮಾಡುವ ಖರ್ಚುಗಳ ಪಟ್ಟಿ ಮಾಡಿ. ಆಹಾರ, ಪ್ರಯಾಣ, ಮನೆ ಖರ್ಚು ಎಂದೆಲ್ಲ ಲೆಕ್ಕ ಹಾಕಿ. ಈ ರೀತಿಯ ಪಟ್ಟಿಯಲ್ಲಿ ಯಾವುದೆಲ್ಲ ಅನಗತ್ಯವಾಗಿತ್ತು ಎಂದು ಪರಿಶೀಲಿಸಿ. ಮುಂದಿನ ತಿಂಗಳಿನಿಂದ ಇಂತಹ ಅನಗತ್ಯ ಖರ್ಚು ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. ನೆನಪಿಡಿ, ನೀವು ಏನು ಉಳಿಸುವಿರೋ ಅದೇ ನಿಮ್ಮ ಗಳಿಕೆಯಾಗಿದೆ.
icon

(3 / 10)

ಉಳಿತಾಯ ಮಾಡುವ ಗುರಿ ಹಾಕಿಕೊಳ್ಳಿ: ವರ್ಷಕ್ಕೆ ವೇತನದಲ್ಲಿ ಇಷ್ಟು ಹಣ ಉಳಿತಾಯ ಮಾಡಬೇಕೆನ್ನುವ ಸ್ಪಷ್ಟ ಗುರಿ ಹಾಕಿಕೊಳ್ಳಿ. ಕೆಲವು ವರ್ಷದಲ್ಲಿ ಕಾರು ಖರೀದಿಸಬೇಕೆನ್ನುವ ಕನಸು, ಮನೆ ನಿರ್ಮಿಸಬೇಕೆನ್ನುವ ಕನಸು ಇಂತಹ ಗುರಿ ಹಾಕಿಕೊಂಡು ಅದಕ್ಕೆ ತಕ್ಕಂತೆ ತಿಂಗಳಿಗೆ ಇಂತಿಷ್ಟು ಹಣ ಉಳಿತಾಯ ಮಾಡಿ. 
icon

(4 / 10)

ಬ್ಯಾಂಕ್‌ ಉಳಿತಾಯ ಖಾತೆಗಳಿಗೆ ಸೇರಿ: ತಿಂಗಳಿಗೆ ಐದು ಅಥವಾ ಹತ್ತು ಸಾವಿರ ಕಟ್‌ ಆಗುವಂತೆ ಬ್ಯಾಂಕ್‌ಗಳ ಆರ್‌ಡಿಗೆ ಸೇರಬಹುದು. ವರ್ಷದ ಕೊನೆಗೆ ಐವತ್ತು ಅಥವಾ ಒಂದು ಲಕ್ಷ ರೂಪಾಯಿ ಅಲ್ಲಿ ಉಳಿತಾಯವಾಗಬಹುದು. ಷೇರುಪೇಟೆ, ಮ್ಯೂಚುಯಲ್‌ ಫಂಡ್‌ ಇತ್ಯಾದಿಗಳ ಕುರಿತು ಜ್ಞಾನ ಸಂಪಾದಿಸಿಕೊಂಡು ಅಲ್ಲೂ ಹೂಡಿಕೆ ಮಾಡಬಹುದು. ವಿವಿಧ ಉಳಿತಾಯ ಖಾತೆಗಳಲ್ಲಿ ಹಣ ಇಡಬಹುದು.
icon

(5 / 10)

ಎಮರ್ಜೆನ್ಸಿಗೆ ಹಣ ಇರಲಿ:ಈಗ ಆಸ್ಪತ್ರೆಗಳು ನಿಮ್ಮನ್ನು ಬಡವರನ್ನಾಗಿ ಮಾಡುವ ಶಕ್ತಿ ಹೊಂದಿವೆ. ಅನಿರೀಕ್ಷಿತವಾಗಿ ಆರೋಗ್ಯ ಕೆಟ್ಟರೆ ಆಸ್ಪತ್ರೆಯಲ್ಲಿ ಹಲವು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಬಹುದು. ಇಂತಹ ಖರ್ಚುಗಳನ್ನು ನಿಭಾಯಿಸುವ ಸಲುವಾಗಿ ಸೂಕ್ತವಾದ ಆರೋಗ್ಯ ವಿಮೆ ನಿಮ್ಮಲ್ಲಿ ಇರಲಿ. ಸಂಪೂರ್ಣ ಕುಟುಂಬಕ್ಕೆ ಇಂತಹ ವಿಮೆ ಇರಬೇಕು. ಜತೆಗೆ, ಆರೋಗ್ಯದ ಖರ್ಚಿಗೆ ಎಂದು ಕೆಲವು ಲಕ್ಷ ಹಣ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. 
icon

(6 / 10)

ಕೆಲಸವಿಲ್ಲದ ಸಮಯಕ್ಕೆ ಹಣ ಇರಲಿ: ಇದರೊಂದಿಗೆ ಕಾರು ಹಾಳಾದರೆ, ಉದ್ಯೋಗ ನಷ್ಟವಾದರೆ, ಗ್ಯಾಡ್ಜೆಟ್‌ ರಿಪೇರಿಗೆ ಎಂದೆಲ್ಲ ಹಣ ಬೇಕಾಗಬಹುದು. ಇಂತಹ ಖರ್ಚುಗಳಿಗೂ ಫಂಡ್‌ ಇರಲಿ. ಆರು ತಿಂಗಳು ಕೆಲಸವಿಲ್ಲದೆ ಇದ್ದರೂ ಬದುಕಬಲ್ಲೆ ಎನ್ನುವಂತೆ ನಿಮ್ಮ ತುರ್ತು ನಿಧಿ ಇರಬೇಕು.
icon

(7 / 10)

ಆದಾಯ ತೆರಿಗೆ ವಿನಾಯಿತಿಗಳು: ನಿಮ್ಮ ವೇತನದ ದೊಡ್ಡ ಮೊತ್ತವು ಆದಾಯ ತೆರಿಗೆಯಾಗಿ ಕಟ್‌ ಆಗುತ್ತಿರಬಹುದು.  ಹಾಗಾದರೆ, ಆ ತೆರಿಗೆ ಕಡಿತ ಉಳಿತಾಯ ಮಾಡುವ ವಿವಿಧ ವಿಧಾನಗಳನ್ನು ನೀವು ಯೋಚಿಸಬೇಕು. ಈ ಕುರಿತು ತೆರಿಗೆ ತಜ್ಞರ ಜತೆ ಮಾತುಕತೆ ನಡೆಸಿ ಪ್ಲಾನ್‌ ಮಾಡಬಹುದು.  
icon

(8 / 10)

ವಿಮೆ ಇರಲಿ: ಆರೋಗ್ಯ ವಿಮೆ ಇದ್ದರೆ ಆಸ್ಪತ್ರೆ ಖರ್ಚಿನ ಸಮಯದಲ್ಲಿ ನೆರವಾಗಬಹುದು. ಜೀವ ವಿಮೆಯೂ ಅಗತ್ಯ. ಎಲ್ಲಾದರೂ ನೀವು ಮೃತಪಟ್ಟರೆ ನಿಮ್ಮ ಮಕ್ಕಳು ಅಥವಾ ಸಂಗಾತಿಗೆ ಇದರಿಂದ ಅನುಕೂಲವಾಗುತ್ತದೆ. ಇದೇ ರೀತಿ ಜೀವಂತವಾಗಿರುವಾಗಲೇ ಮೆಚ್ಯುರಿಟಿಯಾಗುವಂತಹ ಹೂಡಿಕೆ ವಿಮೆಯ ಮೇಲೂ ಹಣ ಹಾಕಿರಿ. ಟರ್ಮ್‌ ವಿಮೆ ಇರಲಿ.
icon

(9 / 10)

ಆರಂಭದಲ್ಲಿಯೇ ಹೂಡಿಕೆ ಆರಂಭಿಸಿ: ನೀವು ಉದ್ಯೋಗದ ಆರಂಭಿಕ ಹಂತದಲ್ಲಿಯೇ ಹೆಲ್ತ್‌ ಇನ್ಸುರೆನ್ಸ್‌, ಲೈಫ್‌ ಇನ್ಸುರೆನ್ಸ್‌ ಖರೀದಿಸಿದರೆ ಪ್ರೀಮಿಯಂ ಹಣ ಕಡಿಮೆ ಇರುತ್ತದೆ. ಐದು ವರ್ಷದ, ಹತ್ತು ವರ್ಷದ, ಇಪ್ಪತ್ತು ವರ್ಷದ ಟರ್ಮ್‌ ವಿಮೆ ಖರೀದಿಸುವುದು ಒಂದು ಒಳ್ಳೆಯ ಹೂಡಿಕೆಯಾಗಬಹುದು. ಮುಂದೆ ನಿಮ್ಮ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ನೆರವಾಗಬಹುದು.
icon

(10 / 10)

ಇತರ ಗ್ಯಾಲರಿಗಳು